ನವದೆಹಲಿ: ಭಾರತದ ಗ್ರಾಮೀಣ ಭಾಗದ ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ‘ಶಿ-ಮಾರ್ಟ್’ (She-Mart) ಎಂಬ ಕ್ರಾಂತಿಕಾರಿ ಯೋಜನೆಯನ್ನು ಘೋಷಿಸಿದ್ದಾರೆ. ಕೇವಲ ಮನೆಗೆಲಸಕ್ಕೆ ಸೀಮಿತವಾಗಿದ್ದ ಕೈಗಳಿಗೆ ಈಗ ಉದ್ಯಮದ ಬಲ ಸಿಗಲಿದೆ
ಈ ಯೋಜನೆಯ ಪ್ರಮುಖ ಆಕರ್ಷಣೆಗಳು ಇಲ್ಲಿವೆ:
ಶಿ-ಮಾರ್ಟ್: ಮಹಿಳೆಯರಿಗಾಗಿಯೇ ಮೀಸಲಾದ ಮಾರುಕಟ್ಟೆ
ಗ್ರಾಮೀಣ ಮಹಿಳೆಯರು ಮತ್ತು ಸ್ವ-ಸಹಾಯ ಸಂಘಗಳು ತಯಾರಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ದೇಶಾದ್ಯಂತ ‘ಶಿ-ಮಾರ್ಟ್’ಗಳನ್ನು ಸ್ಥಾಪಿಸಲಾಗುವುದು. ಇವು ಮಹಿಳಾ ಉದ್ಯಮಿಗಳ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವ ವೇದಿಕೆಯಾಗಲಿವೆ.
ದಿನಸಿ ಅಂಗಡಿ ಆರಂಭಿಸಲು ವಿಶೇಷ ಸಬ್ಸಿಡಿ
ಸ್ವಂತ ಕಾಲ ಮೇಲೆ ನಿಲ್ಲಲು ಬಯಸುವ ಮಹಿಳೆಯರಿಗಾಗಿ ಸರ್ಕಾರ ವಿಶೇಷ ಕೊಡುಗೆ ನೀಡಿದೆ.ಹೊಸದಾಗಿ ದಿನಸಿ ಅಂಗಡಿ (Grocery Stores) ಆರಂಭಿಸುವ ಮಹಿಳೆಯರಿಗೆ ಸರ್ಕಾರದಿಂದ ವಿಶೇಷ ಧನಸಹಾಯ ಸಿಗಲಿದೆ.
ಪ್ರಧಾನಮಂತ್ರಿಯವರ ‘ಲಖ್‌ಪತಿ ದೀದಿ’ (Lakhpati Didi) ಯೋಜನೆಗೆ ಈ ಬಜೆಟ್‌ನಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಕೋಟಿಗಟ್ಟಲೆ ಮಹಿಳೆಯರನ್ನು ಲಕ್ಷಾಧಿಪತಿಗಳನ್ನಾಗಿ ಮಾಡುವ ಗುರಿ ಹೊಂದಲಾಗಿದೆ.
ಉದ್ಯಮಶೀಲತೆಗೆ ಹೊಸ ರೆಕ್ಕೆ
ಕೇವಲ ಧನಸಹಾಯವಷ್ಟೇ ಅಲ್ಲದೆ, ಮಹಿಳೆಯರಿಗೆ ಉದ್ಯಮ ನಡೆಸುವ ತರಬೇತಿ ಮತ್ತು ಕೌಶಲ್ಯವನ್ನೂ ಈ ಯೋಜನೆ ಅಡಿಯಲ್ಲಿ ನೀಡಲಾಗುವುದು. ಇದು ಹಳ್ಳಿಯ ಪ್ರತಿಭೆಗಳು ಜಾಗತಿಕ ಮಟ್ಟಕ್ಕೆ ಬೆಳೆಯಲು ಸಹಕಾರಿಯಾಗಲಿದೆ.

