HomeKarnatakaಶೇರ್ ಮಾರ್ಕೆಟ್ ಹೂಡಿಕೆ ಹೆಸರಲ್ಲಿ 93.6 ಲಕ್ಷ ರೂ. ವಂಚನೆ: 507 ಮ್ಯೂಲ್ ಬ್ಯಾಂಕ್ ಖಾತೆಗಳನ್ನು...

ಶೇರ್ ಮಾರ್ಕೆಟ್ ಹೂಡಿಕೆ ಹೆಸರಲ್ಲಿ 93.6 ಲಕ್ಷ ರೂ. ವಂಚನೆ: 507 ಮ್ಯೂಲ್ ಬ್ಯಾಂಕ್ ಖಾತೆಗಳನ್ನು ಬಳಸಿ ಹಣ ವರ್ಗಾವಣೆ; ಮೂವರು ಆರೋಪಿಗಳು ಅರೆಸ್ಟ್

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸೈಬರ್ ಪೊಲೀಸರು ಬೃಹತ್ ಸೈಬರ್ ವಂಚನೆ ಜಾಅಲವನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶೇರ್ ಮಾರ್ಕೆಟ್ ಹೂಡಿಕೆ ಹೆಸರಲ್ಲಿ 93.6 ಲಕ್ಷ ರೂ. ವಂಚಿಸಿದ್ದ ಮೂವರು ಖದೀಮರನ್ನು ಬೆಂಗಳೂರು ಉತ್ತರ ವಿಭಾಗದ ಸೈಬರ್ ಪೊಲೀಸರು ಬಂಧಿಸಿದ್ದಾರೆ. ಬರೋಬ್ಬರಿ 507 ಮ್ಯೂಲ್ ಬ್ಯಾಂಕ್ ಗಳ ಖಾತೆ ಬಳಸಿ ಹಣ ವರ್ಗಾವಣೆ ಮಾಡಿದ್ದರು ಎಂಬುದು ತನಿಖೆಯಲ್ಲಿ ಬಯಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜಾರ್ಖಂಡ್ ಮೂಲದ ಅಮಿತ್ ಮಿಶ್ರಾ ಹಾಗೂ ಬೆಂಗಳೂರಿನ ತೌಸೀಫ್ ಅಹಮದ್ ಮತ್ತು ಪರಶುರಾಮ್ ಕಣ್ಣಾವರ್ ಬಂಧಿತ ಆರೋಪಿಗಳು. ಹರೀಶ್ ಕುಮಾರ್ ಎಂಬುವವರು ಶೇರ್‌ ಮಾರ್ಕೆಟ್ ಹೂಡಿಕೆ ಹೆಸರಿನಲ್ಲಿ 93.6 ಲಕ್ಷ ರೂಪಾಯಿ ಕಳೆದುಕೊಂಡ ವ್ಯಕ್ತಿ. ಅವರು ನೀಡಿದ್ದ ದೂರಿನನ್ವಯ ಪೊಲೀಸರು ತನಿಖೆ ನಡೆಸಿ ಬೃಹತ್ ಜಾಲವನ್ನು ಬಂಧಿಸಿದ್ದಾರೆ.

ಆರೋಪಿಗಳು ಜನರಿಗೆ ಕಮಿಷನ್ ಆಸೆ ತೋರಿಸಿ ಅವರ ಚಾಲ್ತಿ ಮತ್ತು ಕಾರ್ಪೊರೇಟ್ ಬ್ಯಾಂಕ್ ಖಾತೆಗಳು, ನೆಟ್ ಬ್ಯಾಂಕಿಂಗ್ ಐಡಿ ಹಾಗೂ ಸಿಮ್ ಕಾರ್ಡ್‌ಗಳನ್ನು ಪಡೆಯುತ್ತಿದ್ದರು. ಖಾತೆದಾರರನ್ನು ಹೋಟೆಲ್‌ಗಳಲ್ಲಿ ತಂಗಿಸಿ, ಅವರ ಫೋನ್‌ಗಳಿಗೆ ‘ZNPAY’ ನಂತಹ ಎಸ್‌ಎಂಎಸ್ ಫಾರ್ವರ್ಡಿಂಗ್ ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡುತ್ತಿದ್ದರು. ಇದರಿಂದ ಬ್ಯಾಂಕ್‌ಗಳಿಂದ ಬರುವ ಒಟಿಪಿ ಮತ್ತು ಸಂದೇಶಗಳು ನೇರವಾಗಿ ಸೈಬರ್ ವಂಚಕರಿಗೆ ತಲುಪುತ್ತಿತ್ತು. ಇದನ್ನು ಬಳಸಿ ಖಾತೆಗಳನ್ನು ನಿರ್ವಹಿಸಿ ಅಕ್ರಮ ಹಣ ವರ್ಗಾವಣೆ ಮಾಡುತ್ತಿದ್ದರು.

ಬಂಧಿತರ ಆರೋಪಿಗಳ ಬಳಿಯಿದ್ದ ಫೋನ್‌ಗಳ ಪರಿಶೀಲನೆ ನಡೆಸಿದಾಗ, ಈ 507 ಖಾತೆಗಳು ದೆಹಲಿ, ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಸೈಬರ್ ಅಪರಾಧ ಪ್ರಕರಣಗಳಿಗೆ ಲಿಂಕ್ ಆಗಿರುವುದು ಕಂಡುಬಂದಿದೆ. ಪ್ರಕರಣದಲ್ಲಿ ತಂತಿರಹಿತವಾಗಿ ಕಾರ್ಯಾಚರಿಸಲು APK ಫೈಲ್‌ಗಳು, ಟೆಲಿಗ್ರಾಂ ಹಾಗೂ ವಾಟ್ಸಾಪ್ ಗ್ರೂಪ್‌ಗಳನ್ನು ಬಳಸಲಾಗಿತ್ತು.

ಟೆಲಿಗ್ರಾಂ ಮತ್ತು ವಾಟ್ಸಾಪ್‌ ಐಪಿ ವಿಳಾಸಗಳ ತಾಂತ್ರಿಕ ಪರಿಶೀಲನೆ ನಡೆಸಿದಾಗ, ಈ ಜಾಲದ ಮೂಲ ಕೋಲ್ಕತ್ತಾ, ಹಾಂಗ್ ಕಾಂಗ್ ಮತ್ತು ಅಮೆರಿಕದ ಕ್ಯಾಲಿಫೋರ್ನಿಯಾ ಲಿಂಕ್‌ಗಳನ್ನು ಹೊಂದಿರುವುದು ತಿಳಿದುಬಂದಿದೆ.

ವಂಚನೆ ಹಣವನ್ನು ಕ್ರಿಪ್ಟೋ ವಾಲೆಟ್‌ಗಳ ಮೂಲಕವೂ ವರ್ಗಾಯಿಸಲಾಗುತ್ತಿತ್ತು. ಸದ್ಯ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಉಳಿದ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದು,ಶೀಘ್ರದಲ್ಲೇ ಅವರನ್ನು ಬಂಧಿಸುವುದಾಗಿ ತಿಳಿಸಿದ್ದಾರೆ.

ವಾಕಿಂಗ್ ಮಾಡುವಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ 14 ವರ್ಷದ ಬಾಲಕ: ಮಗನ ಸಾವಿನಿಂದ ನೊಂದ ತಾಯಿ ನದಿಗೆ ಹಾರಿ ಆತ್ಮಹತ್ಯೆ

ಡೆಹ್ರಾಡೂನ್: ಇತ್ತೀಚಿನ ದಿನಗಳಲ್ಲಿ ಹಠಾತ್ ಹೃದಯಾಘಾತದ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಹೃದದಯಗಹಾತಕ್ಕೆ ಚಿಕ್ಕಮಕ್ಕಳು ಕೂಡ ಬಲಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಇಲ್ಲೊಂದು ಘಟನೆಯಲ್ಲಿ 14 ವರ್ಷದ ಬಾಲಕನೊಬ್ಬ ವಾಕಿಂಗ್ ಮಾಡುತ್ತಿರುವಾಗಲೇ ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.

ಉತ್ತರಾಖಂಡದ ಗಡಿ ಜಿಲ್ಲೆಯಾದ ಪಿಥೋರಗಢದಲ್ಲಿ ಈ ಘಟನೆ ನಡೆದಿದೆ. ವಾಕಿಂಗ್ ಗೆ ಹೋಗಿದ್ದ 14 ವರ್ಷದ ಬಾಲಕ ಮೈದಾನದಲ್ಲೇ ಕುಸಿದುಬಿದ್ದು ಹಠಾತ್ ಹೃದಯಾಘಾತಕ್ಕೆ ಬಲಿಯಾಗಿದ್ದಾನೆ. ಮಗನ ಸಾವು ಕಂಡು ಆಘಾತಕ್ಕೊಳಗಾದ ತಾಯಿ ಸರಯೂ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಡೆ ಗ್ರಾಮದಲ್ಲಿ ನಡೆದ ಈ ಘಟನೆ ಇಡೀ ಗ್ರಾಮಸ್ಥರನ್ನು ಫ಼್ದು:ಖದ ಮಡುವಿನಲ್ಲಿ ಮುಳುಗಿಸಿದೆ. ಮಡೆ ಗ್ರಾಮದ 14ವರ್ಷದ ಜತಿನ್ ಜೋಶಿ ಬೆಳಗ್ಗೆ 6 ಗಂಟೆಗೆ ಝೌಲ್ಖೇತ್ ಕ್ರೀಡಾಂಗಣದಲ್ಲಿ ಎಂದಿನಂತೆ ರನ್ನಿಂಗ್ ಮುಗಿಸಿ ಕುಳಿತಿದ್ದಾಗ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ತಾಯಿ ಪೂನಂ ಜೋಶಿ ತಕ್ಷಣ ಆತನನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದರಾದರೂ, ಆತ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು. ಪ್ರಾಥಮಿಕ ವರದಿಗಳ ಪ್ರಕಾರ ಹೃದಯಾಘಾತವೇ ಸಾವಿಗೆ ಕಾರಣವೆಂದು ಹೇಳಲಾಗುತ್ತಿದೆ.

ಪುತ್ರನ ಮರಣದಿಂದ ಆಘಾತಕ್ಕೊಳಗಾದ ತಾಯಿ ಪೂನಂ, ಆಸ್ಪತ್ರೆಯಿಂದ ಮನೆಗೆ ಮರಳುವ ಬದಲು ಗಂಗೋಲಿಹಾಟ್ ಕಡೆಗೆ ತೆರಳುತ್ತಿದ್ದ ಟ್ಯಾಕ್ಸಿ ಹತ್ತಿದ್ದಾರೆ. ಸುಮಾರು 30 ಕಿ.ಮೀ ದೂರದ ಘಾಟ್ ಸೇತುವೆ ಬಳಿ ಕಾರು ನಿಲ್ಲಿಸಲು ಹೇಳಿ, ನೋಡನೋಡುತ್ತಿದ್ದಂತೆಯೇ ಸರಯು ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಟ್ಯಾಕ್ಸಿ ಚಾಲಕ ಮತ್ತು ಸ್ಥಳೀಯರು ಆಕೆಯನ್ನು ಉಳಿಸಲು ಯತ್ನಿಸಿದರೂ ನದಿಯ ರಭಸಕ್ಕೆ ಕೊಚ್ಚಿಹೋಗಿದ್ದರು. ತಕ್ಷಣವೇ ಸ್ಥಳಕ್ಕಾಗಮಿಸಿದ ರಾಜ್ಯ ವಿಪತ್ತು ಸ್ಪಂದನಾ ಪಡೆ ಮತ್ತು ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿ ಆಕೆಯ ಮೃತದೇಹವನ್ನು ಹೊರತೆಗೆದಿದ್ದಾರೆ.

ಪೂನಂ ಅವರ ಪುತ್ರಿ ಕೇವಲ ಎರಡು ವರ್ಷಗಳ ಹಿಂದೆಯಷ್ಟೇ ಮೃತಪಟ್ಟಿದ್ದರು. ಇದೀಗ ಏಕೈಕ ಆಧಾರವಾಗಿದ್ದ ಮಗನೂ ಹೃದಯಾಘಾತಕ್ಕೆ ಬಲಿಯಾಗಿದ್ದಾನೆ. ಇಬ್ಬರು ಮಕ್ಕಳನ್ನು ಕಳೆದುಕೊಂಡ ತಾಯಿಗೆ ತಾಯಿಗೆ ಬದುಕಿನ ಭರವಸೆಯೇ ಹೊರಟು ಹೋಗಿದೆ. ತೀವ್ರವಾಗಿ ಮನನೊಂದ ಮಹಿಳೆ ಆಸ್ಪತ್ರೆಯಿಂದ ಮನೆಗೆ ಬರುವ ಬದಲು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪೊಲೀಸರು ತಾಯಿ ಮತ್ತು ಮಗ ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದು, ಘಟನೆ ಕುರಿತು ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular