HomeKarnatakaBIG NEWS: ರಾಜ್ಯಾದ್ಯಂತ ನಡೆದ ಜನತಾದರ್ಶನದಲ್ಲಿ 12,914 ಅಹವಾಲು ಸ್ವೀಕಾರ

BIG NEWS: ರಾಜ್ಯಾದ್ಯಂತ ನಡೆದ ಜನತಾದರ್ಶನದಲ್ಲಿ 12,914 ಅಹವಾಲು ಸ್ವೀಕಾರ

ಬೆಂಗಳೂರು: ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಸೋಮವಾರ ಏಕಕಾಲದಲ್ಲಿ ನಡೆದ ಜನತಾದರ್ಶನದಲ್ಲಿ 12,914 ಅಹವಾಲು ಸ್ವೀಕರಿಸಲಾಗಿದೆ.

ಆಯಾ ಇಲಾಖೆಯ ಅಹವಾಲುಗಳನ್ನು ಕೂಡಲೇ ಬಗೆಹರಿಸಲು ಇಲಾಖೆ ಮುಖ್ಯಸ್ಥರಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಪತ್ರ ಬರೆದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸ್ವೀಕರಿಸಲಾದ ಅಹವಾಲುಗಳಲ್ಲಿ ಈಗಾಗಲೇ 180 ಸಮಸ್ಯೆ ಇತ್ಯರ್ಥಪಡಿಸಲಾಗಿದೆ. ಸೆ. 25ರಂದು ಜನತಾದರ್ಶನ ನಡೆದಿದ್ದು, ಗದಗ, ಬೆಳಗಾವಿ ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ 6684 ಅಹವಾಲು ಸಲ್ಲಿಕೆಯಾಗಿರುವುದಾಗಿ ಸರ್ಕಾರ ಹೇಳಿತ್ತು.

ಮರುದಿನ ಬೆಳಗಾವಿ ಜಿಲ್ಲೆಯಲ್ಲಿ ಜನತಾದರ್ಶನ ನಡೆಸಲಾಗಿದ್ದು, 12,914 ಅಹವಾಲು ಸಲ್ಲಿಕೆಯಾಗಿವೆ. 180 ಅಹವಾಲುಗಳನ್ನು ಇತ್ಯರ್ಥಪಡಿಸಲಾಗಿದ್ದು, ಉಳಿದವುಗಳನ್ನು ಬಗೆಹರಿಸಿ ಪರಿಹಾರ ಕಲ್ಪಿಸಲು ಮತ್ತು ಈ ಕುರಿತಾಗಿ ಸಿಎಂ ಕಚೇರಿಗೆ ವರದಿ ನೀಡಲು ಪತ್ರ ಬರೆದು ತಿಳಿಸಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular