HomeKarnatakaʻಶಕ್ತಿ ಯೋಜನೆʼ ಭರ್ಜರಿ ಸಕ್ಸಸ್ : 126 ಕೋಟಿ ಟಿಕೆಟ್ ಪಡೆದು ಮಹಿಳೆಯರು ಉಚಿತ ...

ʻಶಕ್ತಿ ಯೋಜನೆʼ ಭರ್ಜರಿ ಸಕ್ಸಸ್ : 126 ಕೋಟಿ ಟಿಕೆಟ್ ಪಡೆದು ಮಹಿಳೆಯರು ಉಚಿತ ಪ್ರಯಾಣ

ಬೆಂಗಳೂರು : ಶಕ್ತಿ ಯೋಜನೆ ಭರ್ಜರಿ ಸಕ್ಸಸ್‌ ಆಗಿದ್ದು, ಈವರೆಗೆ 126 ಕೋಟಿ ಟಿಕೆಟ್‌ ಪಡೆದು ಮಹಿಳೆಯರು ಉಚಿತ  ಪ್ರಯಾಣ ಬೆಳೆಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಸಿಎಂ ಸಿದ್ದರಾಮಯ್ಯ, ಶಕ್ತಿ ಯೋಜನೆ ಜಾರಿಯಾಗಿ 6 ತಿಂಗಳುಗಳಷ್ಟೇ ಪೂರೈಸಿದ್ದರೂ ಸಾಧನೆ ಬೆಟ್ಟದಷ್ಟಿದೆ. ಶಿಕ್ಷಣ, ಉದ್ಯೋಗ, ದೇವರ ದರ್ಶನ ಮುಂತಾದ ಕಾರಣಗಳಿಗಾಗಿ ನಾಡಿನ ಹೆಣ್ಣುಮಕ್ಕಳು 126 ಕೋಟಿಗೂ ಅಧಿಕ ಉಚಿತ ಟಿಕೇಟ್ ಪಡೆದು ಪ್ರಯಾಣ ಬೆಳೆಸಿದ್ದು, ಈ ವರೆಗಿನ ಒಟ್ಟು ಟಿಕೇಟ್ ಮೌಲ್ಯ ರೂ. 3,000 ಕೋಟಿ ದಾಟಿದೆ ಎಂದು ತಿಳಿಸಿದ್ದಾರೆ.

ಮಹಿಳಾ ಸಬಲೀಕರಣದ ಈ ಯೋಜನೆಗೆ ಹೆಣ್ಣುಮಕ್ಕಳಿಂದ ವ್ಯಕ್ತವಾಗುತ್ತಿರುವ ಅಭೂತಪೂರ್ವ ಸ್ಪಂದನೆ ಕಂಡು ಖುಷಿಯಾಗುತ್ತಿದೆ. ಯೋಜನೆಯಿಂದ ಲಾಭ ಪಡೆದು ಮತ್ತಷ್ಟು ಹೆಣ್ಣುಮಕ್ಕಳು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವಂತಾಗಲಿ ಎಂದು ಹಾರೈಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular