HomeEntertainmentಕುಟುಂಬದೊಂದಿಗಿನ ಹೊಸ ಫೋಟೋ ಹಂಚಿಕೊಂಡ ಶಾರುಖ್ ಪತ್ನಿ; ಸೆಲೆಬ್ರಿಟಿಗಳೂ ಸೇರಿದಂತೆ ಫ್ಯಾನ್ಸ್ ಫಿದಾ

ಕುಟುಂಬದೊಂದಿಗಿನ ಹೊಸ ಫೋಟೋ ಹಂಚಿಕೊಂಡ ಶಾರುಖ್ ಪತ್ನಿ; ಸೆಲೆಬ್ರಿಟಿಗಳೂ ಸೇರಿದಂತೆ ಫ್ಯಾನ್ಸ್ ಫಿದಾ

ನಟ ಶಾರುಖ್ ಖಾನ್ ಅವರ ಪತ್ನಿ ಗೌರಿ ಖಾನ್ ತಮ್ಮ ಇನ್‌ಸ್ಟಾ ಗ್ರಾಂನಲ್ಲಿ ಕುಟುಂಬದ ಹೊಸ ಫೋಟೋ ಹಾಕಿದ್ದು, ಅಭಿಮಾನಿಗಳ ಗಮನ ಸೆಳೆದಿದೆ. ಶಾರುಖ್ ಖಾನ್ ಕುಟುಂಬದ ಸದಸ್ಯರೆಲ್ಲರೂ ಕಪ್ಪುಬಣ್ಣದ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದು ಭಾರೀ ಮೆಚ್ಚುಗೆ ಗಳಿಸಿದೆ.

ಶಾರುಖ್ ಖಾನ್ ಮತ್ತು ಅವರ ಮಕ್ಕಳಾದ ಆರ್ಯನ್ ಮತ್ತು ಅಬ್ರಾಮ್ ಖಾನ್ ಕಪ್ಪು ಟೀ ಶರ್ಟ್‌ಗಳಲ್ಲಿ ಮ್ಯಾಚಿಂಗ್ ಪ್ಯಾಂಟ್ ಮತ್ತು ಜಾಕೆಟ್‌ಗಳೊಂದಿಗೆ ಜೋಡಿಯಾಗಿ ಕಾಣುತ್ತಾರೆ. ಮತ್ತೊಂದೆಡೆ ಗೌರಿ ಖಾನ್ ಕಪ್ಪು ಬಣ್ಣದ ಡ್ರೆಸ್ ನಲ್ಲಿ ಕಂಗೊಳಿಸುತ್ತಿದ್ದರೆ, ಪುತ್ರಿ ಸುಹಾನಾ ಕಪ್ಪು ಮತ್ತು ಬಿಳಿ ಉಡುಪಿನಲ್ಲಿ ಸುಂದರವಾಗಿ ಕಾಣುತ್ತಾರೆ.

ಗೌರಿ ಖಾನ್ ಪೋಸ್ಟ್ ಅನ್ನು ಹಂಚಿಕೊಂಡ ಕೂಡಲೇ, ಶ್ವೇತಾ ಬಚ್ಚನ್, ಏಸ್ ಡಿಸೈನರ್ ಮನೀಶ್ ಮಲ್ಹೋತ್ರಾ ಮತ್ತು ಅಮೃತಾ ಅರೋರಾ ಕಾಮೆಂಟ್ ವಿಭಾಗದಲ್ಲಿ ಹೃದಯದ ಎಮೋಜಿಗಳೊಂದಿಗೆ ಪ್ರತಿಕ್ರಿಯಿಸಿದ್ದಾರೆ. “ಅದ್ಭುತ ಚಿತ್ರ” ವೆಂದು ಶಾರುಖ್ ಖಾನ್ ಅವರ ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular