HomeLatest NewsBREAKING : ಬೆಂಗಳೂರಲ್ಲಿ 'ಸ್ಕ್ಯಾನಿಂಗ್' ಗೆ ಬಂದ ಮಹಿಳೆಗೆ ಲೈಂಗಿಕ ಕಿರುಕುಳ ಕೇಸ್ : ಕಾಮುಕ...

BREAKING : ಬೆಂಗಳೂರಲ್ಲಿ ‘ಸ್ಕ್ಯಾನಿಂಗ್’ ಗೆ ಬಂದ ಮಹಿಳೆಗೆ ಲೈಂಗಿಕ ಕಿರುಕುಳ ಕೇಸ್ : ಕಾಮುಕ ರೇಡಿಯಾಲಜಿಸ್ಟ್ ಅರೆಸ್ಟ್.!

ಬೆಂಗಳೂರು : ಸ್ಕ್ಯಾನಿಂಗ್ ಗೆ ಬಂದ ಮಹಿಳೆಯ ಖಾಸಗಿ ಅಂಗ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ ಘಟನೆಗೆ ಸಂಬಂಧಿಸಿದಂತೆ ರೇಡಿಯಾಲಜಿಸ್ಟ್ ಜಯಕುಮಾರ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಬಂಧಿಸದೇ ಇದ್ದರೆ ನಾವು ಅನೇಕಲ್ ಬಂದ್ ಮಾಡುತ್ತೇವೆ ಎಂದು ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಈ ಬೆನ್ನಲ್ಲೇ ಆರೋಪಿ ಜಯಕುಮಾರ್ ಬಂಧನವಾಗಿದೆ.ಘಟನೆ ನಡೆದ ದಿನ ಸ್ಥಳೀಯರು ಆರೋಪಿಯನ್ನು ಪೊಲೀಸ್ ಠಾಣೆಗೆ ಕರೆತಂದಿದ್ದರು. ನಂತರ ಪೊಲೀಸರು ಜಯಕುಮಾರ್ ನನ್ನು ವಾಪಸ್ ಕಳುಹಿಸಿರುವ ಆರೋಪವಿತ್ತು. ನಂತರ ಆರೋಪಿಯನ್ನ ಬಂಧಿಸಬೇಕು ಎಂದು ಕರವೇ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದರು.

ಕಾಮುಕ ಜಯಕುಮಾರ್ ಸ್ಕ್ಯಾನಿಂಗ್ ನೆಪದಲ್ಲಿ ಮಹಿಳೆಯ ಖಾಸಗಿ ಅಂಗ ಸ್ಪರ್ಶಿಸಿದ್ದಾನೆ .ಈ ಸಂಬಂಧ ಅನೇಕಲ್ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ನೀಡಿದ್ದರು.ಹೊಟ್ಟೆ ನೋವೆಂದು ಪತಿ ಜೊತೆ ಮಹಿಳೆ ಸ್ಕ್ಯಾನಿಂಗ್ ಸೆಂಟರ್ ಗೆ ಹೋಗಿದ್ದಳು. ಸ್ಕ್ಯಾನಿಂಗ್ ನೆಪದಲ್ಲಿ ರೇಡಿಯಾಲಜಿಸ್ಟ್ ಜಯಕುಮಾರ್ ಮಹಿಳೆ ಖಾಸಗಿ ಅಂಗ ಸ್ಪರ್ಶಿಸಿದ್ದಾನೆ . ಇದಕ್ಕೆ ಮಹಿಳೆ ವಿರೋಧ ವ್ಯಕ್ತಪಡಿಸಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದನು. ಘಟನೆ ಬಳಿಕ ಪೊಲೀಸರಿಗೆ ಮಹಿಳೆ ದೂರು ನೀಡಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular