BREAKING: ಹಬ್ಬದ ದಿನವೇ ಘೋರ ದುರಂತ: ಕಾಲುವೆಗೆ ಕಾರ್ ಬಿದ್ದು 7 ಜನ ಸಾವು

ನವದೆಹಲಿ: ಹರಿಯಾಣದ ಕೈತಾಲ್‌ ನಲ್ಲಿ ಶನಿವಾರ ನಡೆದ ದುರಂತದಲ್ಲಿ ಮೂವರು ಮಹಿಳೆಯರು ಸೇರಿದಂತೆ ಏಳು ಮಂದಿ ಸಾವನ್ನಪ್ಪಿದ್ದಾರೆ.

ವಾಹನ ಕಾಲುವೆಗೆ ಬಿದ್ದ ಪರಿಣಾಮ ದುರಂತ ಸಂಭವಿಸಿದೆ. ಅಪಘಾತದ ವೇಳೆ ಒಂದೇ ಕುಟುಂಬದ 8 ಮಂದಿ ಸೇರಿದಂತೆ 9 ಮಂದಿ ಕಾರ್ ನಲ್ಲಿದ್ದರು.

ಘಟನೆಯ ವಿವರಗಳನ್ನು ನೀಡಿದ ಪೊಲೀಸ್ ಅಧಿಕಾರಿಗಳು, ಕಾರ್ ನಲ್ಲಿ ಒಂದೇ ಕುಟುಂಬದ ಎಂಟು ಸದಸ್ಯರು ಸೇರಿದಂತೆ ಒಂಬತ್ತು ಜನರು ಇದ್ದರು. ದಸರಾ ಪ್ರಯುಕ್ತ ಆಯೋಜಿಸಲಾಗಿದ್ದ ಬಾಬಾ ರಾಜಪುರಿ ಮೇಳಕ್ಕೆ ತೆರಳುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ ಎಂದು ತಿಳಿಸಿದ್ದಾರೆ.

ಚಾಲಕನ ನಿಯಂತ್ರಣ ತಪ್ಪಿದ ವಾಹನವು ಮುಂಡ್ರಿ ಗ್ರಾಮದ ಬಳಿ ಕಾಲುವೆಗೆ ಉರುಳಿ ಅಪಘಾತ ಸಂಭವಿಸಿದೆ. ಸ್ಥಳೀಯರು ರಕ್ಷಣೆಗೆ ಮುಂದಾಗಿದ್ದಾರೆ. ಆದರೆ, ಈ ವೇಳೆಗೆ ಹಲವು ಪ್ರಾಣ ಕಳೆದುಕೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read