HomeLatest NewsBREAKING : ಟೆಲಿಗ್ರಾಂ ಸಂಸ್ಥೆಗೆ ಹಿನ್ನಡೆ : ತಾತ್ಕಾಲಿಕ ನಿಷೇಧಕ್ಕೆ ದೆಹಲಿ ಹೈಕೋರ್ಟ್ ಗ್ರೀನ್ ಸಿಗ್ನಲ್...

BREAKING : ಟೆಲಿಗ್ರಾಂ ಸಂಸ್ಥೆಗೆ ಹಿನ್ನಡೆ : ತಾತ್ಕಾಲಿಕ ನಿಷೇಧಕ್ಕೆ ದೆಹಲಿ ಹೈಕೋರ್ಟ್ ಗ್ರೀನ್ ಸಿಗ್ನಲ್ !

ನಿಷೇಧ ತೆರವು ಕೋರಿ ಟೆಲಿಗ್ರಾಮ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ. NEET 2026 ಮರುಪರೀಕ್ಷೆಗೆ ಮುನ್ನ ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ ಜೂನ್ 22ರವರೆಗೆ ಟೆಲಿಗ್ರಾಂ ಮೆಸೇಜಿಂಗ್ ವೇದಿಕೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿದ ಕ್ರಮವನ್ನುದೆಹಲಿ ಹೈಕೋರ್ಟ್ ಶುಕ್ರವಾರ ಸಮರ್ಥಿಸಿದೆ.

ನ್ಯಾಯಮೂರ್ತಿ ನ್ಯಾಯಮೂರ್ತಿ ತೇಜಸ್ ಕಾರಿಯಾ ಅವರ ಏಕಸದಸ್ಯ ಪೀಠವು ಕೇಂದ್ರ ಸರ್ಕಾರದ ಕ್ರಮವನ್ನು ಸಮರ್ಥಿಸಿ, ಪರೀಕ್ಷೆಗೆ ಮುನ್ನ ವಿಧಿಸಲಾದ ನಿರ್ಬಂಧದ ವಿರುದ್ಧ ಟೆಲಿಗ್ರಾಂ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. NEET ಪರೀಕ್ಷೆಯ ಹಿನ್ನೆಲೆಯಲ್ಲಿ ವಿಧಿಸಿದ್ದ ತಾತ್ಕಾಲಿಕ ನಿಷೇಧವನ್ನು ಹೈಕೋರ್ಟ್ ಮಾನ್ಯಗೊಳಿಸಿದೆ.
ಟೆಲಿಗ್ರಾಂ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿನ್ಯಾಯಮೂರ್ತಿ ತೇಜಸ್ ಕಾರಿಯಾ ತಿರಸ್ಕರಿಸಿ ಆದೇಶ ಪ್ರಕಟಿಸಿದರು. ಜೂನ್ 21ರಂದು ನಡೆಯಲಿರುವ NEET 2026 ಮರುಪರೀಕ್ಷೆಯ ಹಿನ್ನೆಲೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.ಈ ತಾತ್ಕಾಲಿಕ ನಿರ್ಬಂಧಕ್ಕೆ National Testing Agency ಹಾಗೂ ಶಿಕ್ಷಣ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆಯ ಶಿಫಾರಸುಗಳು ಕಾರಣವಾಗಿವೆ.

ಅರ್ಜಿಯ ವಿಚಾರಣೆಯ ವೇಳೆ ಟೆಲಿಗ್ರಾಂ ಪರ ವಕೀಲರು, NEET ಸಂಬಂಧಿತ ಅಕ್ರಮ ವಿಷಯಗಳನ್ನು ಒಳಗೊಂಡ 900ಕ್ಕೂ ಹೆಚ್ಚು ಲಿಂಕ್ಗಳನ್ನು ಈಗಾಗಲೇ ತೆಗೆದುಹಾಕಲಾಗಿದೆ ಎಂದು ವಾದಿಸಿದರು. ಜೊತೆಗೆ ಕೃತಕ ಬುದ್ಧಿಮತ್ತೆ (AI) ಮತ್ತು ಮೆಷಿನ್ ಲರ್ನಿಂಗ್ ತಂತ್ರಜ್ಞಾನಗಳನ್ನು ಬಳಸಿ ಅಕ್ರಮ ಮಾಹಿತಿಯನ್ನು ತಡೆಯಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದಕ್ಕೆ ಪ್ರತಿಯಾಗಿ ಕೇಂದ್ರ ಸರ್ಕಾರ, ಟೆಲಿಗ್ರಾಂನ ತಾಂತ್ರಿಕ ವಿನ್ಯಾಸವು ಬಾಟ್ಗಳ ಮೂಲಕ ಸ್ವಯಂಚಾಲಿತ ಖಾತೆಗಳನ್ನು ರಚಿಸಿ ದೊಡ್ಡ ಪ್ರಮಾಣದಲ್ಲಿ ಸಂದೇಶಗಳನ್ನು ಹರಡಲು ಅವಕಾಶ ನೀಡುತ್ತದೆ ಎಂದು ವಾದಿಸಿತು. ಕೇಂದ್ರದ ಪರ ವಾದಿಸಿದ ಸಾಲಿಸಿಟರ್ ಜನರಲ್ Tushar Mehta, “ಒಂದು ಬಾಟ್ ಅನ್ನು ನಿರ್ಬಂಧಿಸಿದರೂ ಅದು ಮತ್ತೊಂದು ಬಾಟ್ಗೆ ಸ್ವಯಂಚಾಲಿತವಾಗಿ ಸಂಪರ್ಕ ಕಲ್ಪಿಸಿ ಕಾರ್ಯನಿರ್ವಹಿಸಬಹುದು” ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.ವಿಚಾರಣೆಯ ವೇಳೆ ನ್ಯಾಯಮೂರ್ತಿಗಳು, “ಒಂದು ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಕಾರಣಕ್ಕೆ ದೇಶದ 15 ಕೋಟಿಗೂ ಹೆಚ್ಚು ಟೆಲಿಗ್ರಾಂ ಬಳಕೆದಾರರ ಹಕ್ಕುಗಳನ್ನು ನಿರ್ಬಂಧಿಸಬಹುದೇ?” ಎಂಬ ಪ್ರಶ್ನೆಯನ್ನೂ ಮೌಖಿಕವಾಗಿ ಎತ್ತಿದ್ದರು.ಈ ಮಧ್ಯೆ, ಪಾವೆಲ್ ಡುರೋವ್ ಕೂಡ ಪ್ರತಿಕ್ರಿಯಿಸಿ, “ಭಾರತದಲ್ಲಿ 15 ಕೋಟಿಗೂ ಹೆಚ್ಚು ಸಾಮಾನ್ಯ ಟೆಲಿಗ್ರಾಂ ಬಳಕೆದಾರರಿಗೆ ಈ ಕ್ರಮದಿಂದ ಶಿಕ್ಷೆಯಾಗುತ್ತಿದೆ. ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದ ನಿಜವಾದ ವ್ಯಕ್ತಿಗಳಿಗೆ ಅಲ್ಲ” ಎಂದು ಹೇಳಿದ್ದರು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular