BIG NEWS: ಗಂಭೀರ ಸಮಸ್ಯೆ ಪತ್ತೆ ಹಿನ್ನೆಲೆ: ಪಶ್ಚಿಮ್ ಬಂಗಾ ಇಂಜೆಕ್ಷನ್ ಬಳಕೆಗೆ ನಿರ್ಬಂಧ

ಬೆಂಗಳೂರು: ಪಶ್ಚಿಮ್ ಬಂಗಾ ಫಾರ್ಮಾಸ್ಯುಟಿಕಲ್ಸ್ ತಯಾರಿಸಿ ಸರಬರಾಜು ಮಾಡಿರುವ ರಿಂಗರ್ ಲ್ಯಾಕ್ಟೇಟ್ ಇನ್ ಫ್ಯೂಷನ್ ಐಟಿ ಔಷಧದಿಂದ ಗಂಭೀರ ಸಮಸ್ಯೆ ಕಂಡುಬಂದ ಹಿನ್ನೆಲೆಯಲ್ಲಿ ಕೂಡಲೇ ಬಳಕೆಯನ್ನು ನಿರ್ಮಿಸುವಂತೆ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದಿಂದ ಎಲ್ಲಾ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಲಾಗಿದೆ.

ಅಲ್ಲದೇ, ಇ -ಔಷಧ ತಂತ್ರಾಂಶದಲ್ಲಿ ಔಷಧವನ್ನು ಪ್ರೀಜ್ ಮಾಡಲಾಗಿದೆ. 50 ಎಂಎಲ್ ಸಾಮರ್ಥ್ಯದ ಐಪಿ ಬಾಟಲ್ ಬಳಕೆಯಿಂದ ತೀವ್ರ ಆರೋಗ್ಯ ಸಮಸ್ಯೆ ಉಂಟಾದ ಬಗ್ಗೆ ದೂರುಗಳು ಬಂದಿವೆ. ದೇಹದಲ್ಲಿ ನೀರಿನ ಅಂಶ ಕಡಿಮೆಯಾದಾಗ ಈ ಇಂಜೆಕ್ಷನ್ ಮೂಲಕ ರೋಗಿಗಳಿಗೆ ನೀಡಲಾಗುತ್ತದೆ.

ಆದರೆ ಕೆಲವು ಆಸ್ಪತ್ರೆಗಳಲ್ಲಿ ಪೂರೈಕೆ ಆಗಿರುವ ಸುಮಾರು 72 ಬ್ಯಾಚ್ ಗಳ ಔಷಧಿಯಲ್ಲಿ ಲೋಪ ಕಂಡು ಬಂದ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಔಷಧವನ್ನು ಯಾವುದೇ ರೋಗಿಗಳಿಗೆ ಬಳಕೆ ಮಾಡಬಾರದು. ದಾಸ್ತಾನಿನಲ್ಲಿ ಇದನ್ನು ಪ್ರತ್ಯೇಕವಾಗಿ ಇರಿಸಿ ಜಿಲ್ಲಾ ಔಷಧ ಉಗ್ರಾಣಕ್ಕೆ ಹಿಂತಿರುಗಿಸುವಂತೆ ಸೂಚನೆ ನೀಡಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read