HomeLatest NewsBREAKING : ಹಿರಿಯ ಪತ್ರಕರ್ತ ಎನ್.ಸಿ.ಗುಂಡೂರಾವ್ ವಿಧಿವಶ : CM ಸಿದ್ದರಾಮಯ್ಯ ಸಂತಾಪ.!

BREAKING : ಹಿರಿಯ ಪತ್ರಕರ್ತ ಎನ್.ಸಿ.ಗುಂಡೂರಾವ್ ವಿಧಿವಶ : CM ಸಿದ್ದರಾಮಯ್ಯ ಸಂತಾಪ.!

ಬೆಂಗಳೂರು : ಹಿರಿಯ ಪತ್ರಕರ್ತ ಎನ್.ಸಿ.ಗುಂಡೂರಾವ್ ವಿಧಿವಶರಾಗಿದ್ದು, ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.

ಹಿರಿಯ ಪತ್ರಕರ್ತ ಎನ್.ಸಿ.ಗುಂಡೂರಾವ್ (78) ಅವರ ನಿಧನದಿಂದ ದು:ಖಿತನಾಗಿದ್ದೇನೆ. ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಫ್ರೂವ್ ರೀಡರ್ ಆಗಿ ವೃತ್ತಿಜೀವನ ಆರಂಭಿಸಿದ್ದ ಗುಂಡೂರಾವ್ ಅವರು ನಂತರ ಪತ್ರಿಕೆಯ ಸಹಸಂಪಾದಕರಾಗಿ ನಿವೃತ್ತರಾಗಿದ್ದರು ಎನ್ನುವುದು ಅವರಲ್ಲಿನ ವೃತ್ತಿಪರತೆ – ಬದ್ಧತೆಗೆ ನಿದರ್ಶನ. ಈ ಪತ್ರಿಕೆಯಲ್ಲಿ ಹೆಚ್ಚು ಕಡಿಮೆ ನಾಲ್ಕು ದಶಕಗಳ ಕಾಲ ವೃತ್ತಿನಿರತರಾಗಿದ್ದ ಗುಂಡೂರಾವ್ ಅವರ ರಾಜಕೀಯ ವರದಿಗಾರಿಕೆ ಮತ್ತು ಅಂಕಣ ಬರಹಗಳು ಆ ಕಾಲದಲ್ಲಿ ನನ್ನಂತಹವರಿಗೆ ಮಾರ್ಗದರ್ಶನ ನೀಡುತ್ತಿತ್ತು. ಸರಳ ಮತ್ತು ಸಜ್ಜನರಾಗಿದ್ದ ಗುಂಡೂರಾವ್ ಅವರು ವೃತ್ತಿಧರ್ಮವನ್ನು ಒಂದು ವ್ರತದಂತೆ ಪಾಲಿಸಿಕೊಂಡು ಬಂದವರು. ಮಾಧ್ಯಮರಂಗದ ಇಂದಿನ ಪೀಳಿಗೆಗೆ ಇವರ ಬದುಕು ಮತ್ತು ಸಾಧನೆ ಪ್ರೇರಣೆ ನೀಡಲಿ ಎಂದು ಹಾರೈಸುತ್ತೇನೆ.

ಗುಂಡೂರಾವ್ ಅವರನ್ನು ಕಳೆದುಕೊಂಡ ಕುಟುಂಬ ವರ್ಗಕ್ಕೆ ನನ್ನ ಸಂತಾಪಗಳು. ಅವರೆಲ್ಲರ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular