HomeLive Newsನಾಳೆ ಪ್ರೊ ಕಬಡ್ಡಿಯ ಸೆಮಿ ಫೈನಲ್ ಪಂದ್ಯಗಳು

ನಾಳೆ ಪ್ರೊ ಕಬಡ್ಡಿಯ ಸೆಮಿ ಫೈನಲ್ ಪಂದ್ಯಗಳು

ನಿನ್ನೆ ನಡೆದ ಎಲಿಮಿನೇಟರ್ ಪಂದ್ಯಗಳಲ್ಲಿ ಪಟ್ನಾ ಪೈರೇಟ್ಸ್ ಮತ್ತು ಹರಿಯಾಣ ಸ್ಟೀಲರ್ ತಮ್ಮ ಎದುರಾಳಿ ತಂಡಗಳನ್ನು ಬಗ್ಗು ಬಡೆಯುವ ಮೂಲಕ ಸೆಮಿ ಫೈನಲ್ ಗೆ ಎಂಟ್ರಿ ಕೊಟ್ಟಿವೆ. ದಬಾಂಗ್ ಡೆಲ್ಲಿ ತಂಡ ಪಟ್ನಾ ಪೈರೇಟ್ಸ್ ಎದುರು ಕೆಲವೇ ಅಂತರದಿಂದ ಸೋಲನುಭವಿಸಿದ್ದು, ತನ್ನ ಸೆಮಿ ಫೈನಲ್ ಕನಸನ್ನು ನುಚ್ಚುನೂರು ಮಾಡಿಕೊಂಡಿದೆ. ಮತ್ತೊಂದು ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ತಂಡ ಗುಜರಾತ್ ತಂಡದೊಂದಿಗೆ ಭರ್ಜರಿ ಜಯ ಸಾಧಿಸಿದೆ.

ನಾಳೆ ಮೊದಲ ಸೆಮಿ ಫೈನಲ್ ಫೈನಲ್ ನಲ್ಲಿ ಪಟ್ನಾ ಪೈರೇಟ್ಸ್ ಹಾಗೂ ಪುಣೆರಿ ಪಲ್ಟಾನ್ ಮುಖಾಮುಖಿಯಾದರೆ ಇನ್ನೊಂದು ಪಂದ್ಯದಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ಮತ್ತು ಹರಿಯಾಣ ಸ್ಟೀಲರ್ಸ್ ಸೆಣಸಾಡಲಿವೆ.

ಗೆದ್ದ ತಂಡಗಳು ಫೈನಲ್ ಪ್ರವೇಶಿಸಲಿದ್ದು, ಯಾವ ತಂಡಗಳು ಫೈನಲ್ ನಲ್ಲಿ ಮುಖಾಮುಖಿಯಾಗಲಿವೆ ಎಂದು ನಾಳಿನ ಪಂದ್ಯದಲ್ಲಿ ನಿರ್ಧಾರವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular