HomeBeautyಸೀಬೆ ಎಲೆ ಹೆಚ್ಚಿಸುತ್ತೆ ನಿಮ್ಮ ಕೂದಲ 'ಸೌಂದರ್ಯ'

ಸೀಬೆ ಎಲೆ ಹೆಚ್ಚಿಸುತ್ತೆ ನಿಮ್ಮ ಕೂದಲ ‘ಸೌಂದರ್ಯ’

ಕೂದಲು ಉದುರುವ ಸಮಸ್ಯೆಯನ್ನು ಅನುಭವಿಸದ ಮಹಿಳೆಯರು ಇರಲಿಕ್ಕಿಲ್ಲ. ಕೂದಲಿನ ವಿಷಯದಲ್ಲಿ ಮಹಿಳೆಯರು ಹೆಚ್ಚಾಗಿ ಬಯಸುವುದು ಉದ್ದವಾದ, ದಟ್ಟವಾದ, ಹೊಳಪಾದ ಕೂದಲನ್ನು. ಇದು ರಾಸಾಯನಿಕಯುಕ್ತ ಶ್ಯಾಂಪು ಎಣ್ಣೆಗಳಿಂದ ದೊರೆಯುವುದಿಲ್ಲ. ಇದರಿಂದ ಸಮಸ್ಯೆಗಳು ಹೆಚ್ಚುತ್ತವೆ.

ಸೀಬೆ ಅಥವಾ ಪೇರಳೆ ಹಣ್ಣಿನ ಗಿಡದ 15 ಎಲೆ ತೆಗೆದುಕೊಳ್ಳಿ. ಸ್ವಲ್ಪ ನೀರು ಹಾಕಿ 10 ನಿಮಿಷ ಕುದಿಸಿ. ನಂತರ ತಣ್ಣಗಾಗಲು ಬಿಡಿ. ಈ ನೀರಿನಿಂದ ತಲೆಯನ್ನು ತೊಳೆಯಿರಿ. ಕೂದಲು ಸ್ವಲ್ಪ ಒಣಗಿದ ಮೇಲೆ ಬುಡದಿಂದ ಮೃದುವಾಗಿ ಮಸಾಜ್ ಮಾಡುತ್ತಾ ಬನ್ನಿ. ಯಾವುದೇ ಕಾರಣಕ್ಕೂ ಕೂದಲನ್ನು ಬಿಸಿ ನೀರಿನಿಂದ ತೊಳೆಯಬಾರದು. ನೀರು ಉಗುರು ಬೆಚ್ಚಗೆ ಇದ್ದರೆ ಸಾಕು. ಈ ನೀರನ್ನು ಬಳಸುವುದರಿಂದ ಕಂಡೀಷನರ್ ಅಗತ್ಯವಿಲ್ಲ.

ಇದನ್ನು ಬಳಸಿದ ಬಳಿಕ ಮತ್ತೆ ಶ್ಯಾಂಪು ಬಳಸದಿರಿ. ದಪ್ಪನೆಯ ಉದ್ದವಾದ ಕೂದಲು ಬೇಕೆಂದರೆ ಈ ರೀತಿ ನೀವು ವಾರದಲ್ಲಿ ಮೂರು ಬಾರಿ ತಪ್ಪದೇ ಮಾಡಬೇಕು. ಹೀಗೆ ಎರಡು ತಿಂಗಳುಗಳ ಸತತವಾಗಿ ಮಾಡಿದರೆ ನಿಮ್ಮ ಕೂದಲು ನೀಳವಾಗಿ ಬೆಳೆಯುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular