HomeAutoಹೆದ್ದಾರಿಯಲ್ಲೇ ಸ್ಕೂಟರ್‌ ಗೆ ಬೆಂಕಿ; ಕ್ಷಣಾರ್ಧದಲ್ಲಿ ಸುಟ್ಟು ಕರಕಲಾದ ವಿಡಿಯೋ ವೈರಲ್

ಹೆದ್ದಾರಿಯಲ್ಲೇ ಸ್ಕೂಟರ್‌ ಗೆ ಬೆಂಕಿ; ಕ್ಷಣಾರ್ಧದಲ್ಲಿ ಸುಟ್ಟು ಕರಕಲಾದ ವಿಡಿಯೋ ವೈರಲ್

ದೆಹಲಿ-ಗುರಗಾಂವ್ ಹೆದ್ದಾರಿಯಲ್ಲಿ ಶನಿವಾರ ಸ್ಕೂಟರ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ವಾಹನ ಸಂಪೂರ್ಣ ಸುಟ್ಟು ಕರಕಲಾಗಿದೆ.

ಮೊಬೈಲ್‌ ನಲ್ಲಿ ಸೆರೆಹಿಡಿಯಲಾದ ಈ ಘಟನೆಯ ವಿಡಿಯೋದಲ್ಲಿ ಸ್ಕೂಟರ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಭಾರೀ ಹೊಗೆ ಎದ್ದ ಪರಿಣಾಮ ಸ್ವಲ್ಪ ಸಮಯದವರೆಗೆ ಸಂಚಾರಕ್ಕೆ ಅಡ್ಡಿಯಾಗಿತ್ತು.

ವಾಹನದಿಂದ ಹೊಗೆ ಹೊರಹೊಮ್ಮುತ್ತಿರುವುದನ್ನು ಸವಾರ ಗಮನಿಸಿ ಬೆಂಕಿ ತೀವ್ರಗೊಳ್ಳುವ ಮೊದಲು ತಕ್ಷಣವೇ ಸುರಕ್ಷಿತ ಸ್ಥಳಕ್ಕೆ ತೆರಳಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದಾರಿಹೋಕರು ಸಹಾಯ ಮಾಡಲು ಪ್ರಯತ್ನಿಸಿದರೂ ಸಹ ಬೆಂಕಿಯನ್ನು ನಂದಿಸಲು ಸಾಧ್ಯವಾಗಲಿಲ್ಲ. ಘಟನೆಯಲ್ಲಿ ಯಾರಿಗೂ ಅಪಾಯವಾದ ಕುರಿತು ಯಾವುದೇ ವರದಿಯಾಗಿಲ್ಲ

For Latest News Updates, Join Our Whatsapp Community🚩
RELATED ARTICLES

Most Popular