HomeLatest NewsBIG NEWS : ರಾಜ್ಯಾದ್ಯಂತ ನಾಳೆಯಿಂದ ಶಾಲೆಗಳು ಪುನಾರಂಭ : 'ಶಿಕ್ಷಣ ಇಲಾಖೆ'ಯಿಂದ ಸಲಹಾ ಮಾರ್ಗಸೂಚಿ...

BIG NEWS : ರಾಜ್ಯಾದ್ಯಂತ ನಾಳೆಯಿಂದ ಶಾಲೆಗಳು ಪುನಾರಂಭ : ‘ಶಿಕ್ಷಣ ಇಲಾಖೆ’ಯಿಂದ ಸಲಹಾ ಮಾರ್ಗಸೂಚಿ ಪ್ರಕಟ.!

ಬೆಂಗಳೂರು : 2025-26 ನೇ ಸಾಲಿನಲ್ಲಿ ಪಿ.ಎಂ.ಪೋಷಣ್ (ಮಧ್ಯಾಹ್ನ ಉಪಾಹಾರ ಯೋಜನೆ) ಮತ್ತು ಕ್ಷೀರಭಾಗ, ಯೋಜನೆಯನ್ನು ರಾಜ್ಯದ ಎಲ್ಲಾ ಸರಕಾರಿ ಮತ್ತು ಅನುದಾನಿತ 1-10 ನೇ ತರಗತಿಯ ವಿದ್ಯಾರ್ಥಿಗಳಿಗೆ ಶಾಲಾ ಪ್ರಾರಂಭೋತ್ಸವದೊಂದಿಗೆ ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಅಗತ್ಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುವ ಬಗ್ಗೆ ಮತ್ತು ಮುಂದುವರೆದ ಕಾರ್ಯಕ್ರಮಗಳ ಬಗ್ಗೆ ಶಿಕ್ಷಣ ಸಲಹೆ ನೀಡಿ ಮಾರ್ಗಸೂಚಿ ಪ್ರಕಟಿಸಿದೆ.

ಮೇಲ್ಕಂಡ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ 2025-26 ನೇ ಸಾಲಿನಲ್ಲಿ ಉಲ್ಲೇಖ 3ರ ಆದೇಶದಂತೆ ಶೈಕ್ಷಣಿಕ ಸಾಲಿನ ಚಟುವಟಿಕೆಗಳು ಪ್ರಾರಂಭವಾಗಲಿದ್ದು, ದಿನಾಂಕ:29.05.2025 ರಿಂದ ಶಾಲೆ ಪ್ರಾರಂಭವಾಗುತ್ತವ. ಪಿ.ಎಂ.ಪೋಷಣ್ (ಮಧ್ಯಾಹ್ನ ಉಪಹಾರ ಯೋಜನೆ), ಕ್ಷೀರ ಭಾಗ ಯೋಜನೆ ಪೂರಕ ಪೌಷ್ಠಿಕ ಆಹಾರ ವಿತರಣೆಯನ್ನು ವಾರ್ಷಿಕವಾಗಿ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ 1-10 ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಂಡು ಸಂಭ್ರಮದಿಂದ ಸಿಹಿಯೊಂದಿಗೆ ಬಿಸಿಯೂಟ ಕಾರ್ಯಕ್ರಮವನ್ನು ಕೈಗೊಳ್ಳುವಂತೆ ಸಂಬಂಧಿಸಿದ ಶಾಲೆಗಳ ಮುಖ್ಯಸ್ಥರಿಗೆ ಹಾಗೂ ಸ್ವಯಂಸೇವಾ ಸಂಸ್ಥೆಗಳ ಮುಖ್ಯಸ್ಮರಿಗೆ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದೆ.
L ಶಾಲಾ ಹಂತದಲ್ಲಿ ಪೂರ್ವಸಿದ್ದತೆಯ ನಿರ್ವಹಣೆಯಲ್ಲಿ ಮುಖ್ಯಶಿಕ್ಷಕರ ಜವಾಬ್ದಾರಿಗಳು:

ಮುಖ್ಯ ಶಿಕ್ಷಕರು ಏಪ್ರಿಲ್-ಮೇ-2025 ರ ಬೇಸಿಗೆ ರಜಾ ಅವಧಿಯಲ್ಲಿ ಶಾಲೆಗಳಲ್ಲಿ ಉಳಿಕೆ ಇರುವ ಆಹಾರ ಧಾನ್ಯಗಳಾದ ಅಕ್ಕಿ. ಗೋಧಿ, ತೊಗರಿಬೇಳೆಯನ್ನು ಬಿಸಿಲಿನಲ್ಲಿ ಒಣಹಾಕಿ ಸ್ವಚ್ಛಗೊಳಿಸಿ ಬಳಸುವುದು. ಸೂರ್ಯಕಾಂತಿ ಎಣ್ಣೆ, ಹಾಲಿನ ಪುಡಿ, ಹಾಗೂ ಇತರೆ ಆಹಾರ ಪದಾರ್ಥಗಳು ಉಳಿಕೆಯಾಗಿದ್ದಲ್ಲಿ ಪರಿಶೀಲಿಸಿಕೊಂಡು ಉತ್ತಮವಾಗಿದ್ದಲ್ಲಿ ಬಳಸುವುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದಾಸ್ತಾನು ಕೊಠಡಿ ಹಾಗೂ ಅಡುಗೆ ಕೋಣೆಗಳನ್ನು Deep-Cleaning ಮಾಡಿಸಿ ಸ್ವಚ್ಛತೆ ಮಾಡಿಕೊಳ್ಳುವುದು. ಪಾತ್ರೆಪರಿಕರಗಳನ್ನು ಶುಚಿಗೊಳಿಸಿ ಬಳಸಲು ಕ್ರಮಕೈಗೊಳ್ಳುವುದು.ಅಡುಗೆ ಕೋಣೆಗಳಲ್ಲಿ ಇಲಿಗಳು ಬರದಂತೆ ಬೋನುಗಳನ್ನು ಇಟ್ಟು Pest-Control ಕ್ರಮಗಳನ್ನು ಅನುಸರಿಸುವುದು, ಗೋಡೆಗಳನ್ನು ಸ್ವಚ್ಛಗೊಳಿಸಿ ಜಾಡ ತೆಗೆದು, ಹಲ್ಲಿ, ಜಿರಲೆ. ನೊಣಗಳು ಬರದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು. ಕಿಟಕಿ, ಎಕ್ಸಾಸ್ಟ್ ಫ್ಯಾನ್ ಇರುವ ಜಾಗದಲ್ಲಿ ಕಬ್ಬಿಣದ ಮೆಶ್ ಹಾಕಿಸಿ ಹೊರಗಿನಿಂದ ಯಾವುದೇ ಕ್ರಿಮಿ-ಕೀಟಗಳು ಅಡುಗೆ ಕೋಣೆ ಒಳಗೆ ಬರದಂತೆ ಭದ್ರಪಡಿಸುವುದು.

ಅಕ್ಕಿ, ಗೋಧಿ, ತೊಗರಿಬೇಳೆ ಮುಂತಾದ ಆಹಾರ ಪದಾರ್ಥಗಳನ್ನು ಮಳೆ ನೀರಿನಲ್ಲಿ ನೆನೆಯದಂತೆ ನೋಡಿಕೊಳ್ಳಲು ನೆಲದ ಮೇಲೆ ಪ್ಲಾಸ್ಟಿಕ್/ಮರದ ಮಣೆಗಳನ್ನು ಬಳಸಿ ಅದರ ಮೇಲೆ ಆಹಾರ ಧಾನ್ಯಗಳ ಮೂಟೆಗಳನ್ನು ಜೋಡಿಸುವುದು. ಹೀಗೆ ಜೋಡಿಸುವಾಗ ಮೂಟೆಗಳು ಗೋಡೆಗೆ ತಾಗದಂತೆ ಸುತ್ತಲೂ ಒಂದು ಅಂತರವನ್ನು ಕಾಯ್ದುಕೊಳ್ಳುವುದು. ಆಹಾರ ಉಗ್ರಾಣದ ಕಿಟಕಿಗಳಿಗೆ ಮಳೆ ನೀರು, ಇಬ್ಬನಿ ಹನಿಗಳು ಒಳಗೆ ಬರದಂತೆ ಪ್ಲಾಸ್ಟಿಕ್ ಹಾಳೆಗಳನ್ನು ಅಳವಡಿಸುವುದು.

ಶಾಲೆಯಲ್ಲಿ ದಾಸ್ತಾನು ಇರುವ ಆಹಾರ ಪದಾರ್ಥಗಳನ್ನು FIFO ಮತ್ತು FEFO ಪದ್ಧತಿಯಲ್ಲಿ ಬಳಸುವುದು.ಅವಧಿ ಮುಗಿದ ಪದಾರ್ಥಗಳನ್ನು ಬಿಸಿಯೂಟ ತಯಾರಿಕೆಯಲ್ಲಿ ಬಳಸುವಂತಿಲ್ಲ, ಆಹಾರ ಪದಾರ್ಥಗಳ ಪ್ಯಾಕೇಟ್ ಮತ್ತು ಮೂಟೆಗಳ ಮೇಲೆ ಯಾವ ದಿನದಂದು ಆಹಾರ ಪದಾರ್ಥಗಳನ್ನು ದಾಸ್ತಾನಿನಲ್ಲಿಡಲಾಗಿದೆ ಎಂಬ ಮಾಹಿತಿಗೆ ಅನುಗುಣವಾಗಿ ದಿನಾಂಕವನ್ನು ನಮೂದಿಸುವುದು. ಇದರಂತೆ ಪರಿಶೀಲಿಸಿ ಅವಧಿಯಿರುವ ಪದಾರ್ಥಗಳನ್ನೇ ಬಳಸುವುದನ್ನು ಖಚಿತಪಡಿಸಿಕೊಳ್ಳುವುದು. ಅಡುಗೆಯವರಿಗೆ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ನೀಡುವುದು.

ಕಳಪೆಯಾದ, ಹುಳ ತಿಂದ ಗುಣಮಟ್ಟ ಹಾಳಾಗಿರುವ, ಕೊಳೆತಿರುವ ಆಹಾರ ಧಾನ್ಯಗಳು, ಆಹಾರ ಪದಾರ್ಥಗಳನ್ನು ದಾಸ್ತಾನಿನಿಂದ ಬೇರ್ಪಡಿಸಿ ಹೊರ ಹಾಕುವುದು ಹಾಗೂ ಬಿಸಿಯೂಟಕ್ಕೆ, ಬಳಸದಂತೆ ನೋಡಿಕೊಳ್ಳುವುದು.
ಅಡುಗೆ ಕೋಣೆಯಲ್ಲಿ ಇಡಲಾಗಿರುವ ಅಗ್ನಿನಂದಕ (Fire Extinguisher) ಬಳಕೆಯ ವಾಯಿದೆಯ ಅವಧಿಯನ್ನು ಪರಿಶೀಲಿಸಿ ಅವಧಿ ಮುಗಿದಿದ್ದಲ್ಲಿ ಶಾಲೆ ಪ್ರಾರಂಭವಾಗುವ ಪೂರ್ವದಲ್ಲಿಯೇ Refilling ಮಾಡಿಸಿ ದಿನಾಂಕ ನಮೂದಿಸಿ ಸುಸ್ಥಿತಿಯಲ್ಲಿಡುವಂತೆ ಕ್ರಮವಹಿಸುವುದು.ನೆಲದಿಂದ ನಾಲ್ಕು ಅಡಿ ಎತ್ತರದಲ್ಲಿ ಗೋಡೆಯ ಮೇಲೆ ಕೈಗೆ ಸಿಗುವಂತೆ ಅಡುಗೆ ಮನೆಯಲ್ಲಿ ಅಳವಡಿಸುವುದು.

ಶಾಲೆ ಪ್ರಾರಂಭವಾಗುವ ಪೂರ್ವದಲ್ಲಿ ಶಾಲೆಯಲ್ಲಿರುವ ನೀರಿನ ಸಂಪು, ನೀರಿತ ತೊಟ್ಟಿ ಓವರ್ ಹೆಡ್ ಟ್ಯಾಂಕ್ ಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿ ಹೊಸ ನೀರನ್ನು ತುಂಬುವುದು ಹಾಗೂ ನಲ್ಲಿ ಪೈಪ್ ಗಳು ಕೆಟ್ಟು ಹೋಗಿದ್ದಲ್ಲಿ ಅಗತ್ಯ ರಿಪೇರಿಯನ್ನು (ಹೊಸ ಪರಿಕರಗಳನ್ನು ಖರೀದಿಸಿ ಅಳವಡಿಸಿ) ಮಾಡಿಸಿ ನೀರಿನ ಸರಬರಾಜಿಗೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳುವುದು.

ಶಾಲೆಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಗಾಗಿ ಸ್ಥಳೀಯ ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್, ದಾನಿಗಳು, ಕಂಪನಿಗಳು, ಜನಪ್ರತಿನಿಧಿಗಳ ಅನುದಾನದಿಂದ ಸಹಾಯ ಪಡೆದು RO-Drinking Water Filterಗಳನ್ನು ಅಳವಡಿಸಿಕೊಳ್ಳುವುದು. ಈಗಾಗಲೇ ಶಾಲೆಯಲ್ಲಿ ಬಳಸುತ್ತಿರುವ ವಾಟರ್ ಫಿಲ್ಟರ್ ಗಳ ಗುಣಮಟ್ಟ ಕಳಪೆಯಾಗಿದ್ದಲ್ಲಿ ಇಲ್ಲವೇ ಕೆಟ್ಟು ಹೋಗಿದ್ದಲ್ಲಿ ಕೂಡಲೇ ಶಾಲಾ ಉಳಿಕೆ ಅನುದಾನದಿಂದ ರಿಪೇರಿ ಮಾಡಿಸಿ ಬಳಕೆಗೆ ಸಿದ್ಧಪಡಿಸಿಕೊಳ್ಳುವುದು.

ಅಡುಗೆ ಕೋಣೆಯಲ್ಲಿ ಮತ್ತು ಉಗ್ರಾಣದಲ್ಲಿ ಗಾಜಿನ ಬಲ್ಬುಗಳನ್ನು ಅಳವಡಿಸದೇ ಇದ್ದಲ್ಲಿ ಬದಲಾಯಿಸಿ ಎಲ್.ಇ.ಡಿ. ಬಲ್ಬುಗಳನ್ನು ಅಳವಡಿಸುವುದು. ಅಡುಗೆ ಕೋಣೆಗಳ 2 White Wash Bright coloured painting ಸ್ವಚ್ಛಗೊಳಿಸುವುದು, ಹೊರಗೋಡೆಯಲ್ಲಿ ಪಿ.ಎಂ. ಪೋಷಣ್ ಶಿರೋನಾಮೆ, ಮಧ್ಯಾಹ್ನ ಉಪಾಹಾರ ಯೋಜನೆಯ ಲೋಗೋ ಚಿಹ್ನೆಗಳನ್ನು ಬಣ್ಣದಲ್ಲಿ ಆಕರ್ಷಣೀಯವಾಗಿ ಕಾಣುವಂತೆ ಬರೆಸುವುದು. ವಾರದ ಆಹಾರ ಸೂಚಿತ ಮನುವನ್ನು ಪೂರಕ ಪೌಷಿಕ ಆಹಾರದ ನಿಗದಿತ ಪ್ರಮಾಣ, WIFS ಮತ್ತು NDD ಮಾತ್ರೆಗಳ ವಿತರಣೆ ಮತ್ತು ಪೌಷ್ಠಿಕಾಂಶಗಳ ಬಗ್ಗೆ, ಮಾಹಿತಿ ಬರೆಸುವುದು.

ಹೆಚ್ಚಿನ ಮಾಹಿತಿಗಾಗಿ ಈ ಸುತ್ತೋಲೆ ಓದಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular