ಮಹಿಳೆಯ ಬೆತ್ತಲೆ ಫೋಟೋ ಕೇಳಿದ ಶಿಕ್ಷಕ: ಅರೆಸ್ಟ್ ಮಾಡಿದ ಪೊಲೀಸರು

ಅಂತರ್ಜಾಲದ ಬಳಕೆ ಹೆಚ್ಚಾದ ಹೋದ ಹಾಗೆ, ಅಪರಾಧಗಳು ಸಹ ಹೊಸ ಹೊಸ ರೂಪ ಪಡೆದುಕೊಳ್ತಾ ಹೋಗುತ್ತೆ. ಈಗ ಅದೇ ಕಣ್ಣಿಗೆ ಕಾಣದ ಅಪರಾಧ ಲೋಕದ ಪ್ರಕರಣವೊಂದರ ಜಾಲ ಹಿಡಿದು ದೆಹಲಿ ಪೊಲೀಸರು ಅಪರಾಧಿಯನ್ನ ಪತ್ತೆ ಹಚ್ಚಿದ್ದಾರೆ.

ದೆಹಲಿ ಮೂಲದ ಮಹಿಳೆಯೊಬ್ಬಳಿಗೆ ಕಾಡಿಸಿ, ಪೀಡಿಸಿದ್ದಕ್ಕಾಗಿ ಶಿಕ್ಷಕನೊಬ್ಬನನ್ನ ಬಂಧಿಸಲಾಗಿದೆ. 27 ವರ್ಷದ ವಾರಣಾಸಿಯ ಶಾಲೆಯೊಂದರಲ್ಲಿ ಗಣಿತ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ, ಸುಜಿತ್ ಕುಮಾರ್ನನ್ನ ಪೊಲೀಸರ ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ.

ದೆಹಲಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಸೋಶಿಯಲ್‌ಮೀಡಿಯಾ ಅಕೌಂಟ್‌ನಲ್ಲೆಲ್ಲ ಅಸಂಬದ್ಧವಾಗಿ ಕಾಮೆಂಟ್ಗಳನ್ನ ಹಾಕಿದ್ದಾನೆ. ಜೊತೆಗೆ ಆಕೆಯ ನಗ್ನ ಚಿತ್ರಗಳನ್ನ ಕಳಿಸುವಂತೆ ಒತ್ತಾಯ ಮಾಡಿದ್ದಾನೆ. ಇಷ್ಟಕ್ಕೆ ನಿಂತಿರಲಿಲ್ಲ ಈತನ ಕರ್ಮಕಾಂಡ, ಈಗ ಕೊನೆಗೆ ಲೈಂಗಿಕವಾಗಿ ಕಾಡಿಸಲು ನೋಡಿದ್ದಾನೆ.

ಆರೋಪಿಯ ಕೊಡುತ್ತಿದ್ದ ಕಾಟವನ್ನ ತಾಳಲಾಗದೇ ಕೊನೆಗೆ ದೆಹಲಿ ಸೈಬರ್ ನಾರ್ತ್ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಆತನ ಜೊತೆಗೆ ಬೇರೆಯವರು ಸಹ ಭಾಗಿಯಾಗಿರಬಹುದು ಎಂದು ಮಹಿಳೆ ದೂರಿನಲ್ಲಿ ಹೇಳಿದ್ದಾಳೆ. ಸದ್ಯಕ್ಕೆ ಭಾರತೀಯ ದಂಡ ಸಂಹಿತೆ ಸಂಬಂಧಿತ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ದೆಹಲಿ ಉತ್ತರ ಉಪವಿಭಾಗದ ಪೊಲೀಸ ಆಯುಕ್ತರಾದ ಸಾಗರ್ ಸಿಂಗ್ ಕಲ್ಸಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ತನಿಖೆ ವೇಳೆಯಲ್ಲಿ ಆಪಾದಿತ ಇನ್ಸ್ಟಾಗ್ರಾಮ್ ಐಡಿಗಳನ್ನ ವಾರಣಾಸಿಯಲ್ಲಿ ಕುಳಿತು ಕ್ರಿಯೇಟ್ ಮಾಡಿ ಅಲ್ಲಿಂದಾನೇ ಈ ಮಹಿಳೆಗೆ ಕಾಟ ಕೊಡುತ್ತಿದ್ದ ಎಂದು ಹೇಳಲಾಗಿದೆ.

ಆರೋಪಿ ಸದ್ಯಕ್ಕೆ ದೆಹಲಿಯಲ್ಲೇ ವಾಸಿಸುತ್ತಿದ್ದು, 2019ರಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಅಂತಾನೇ ಇಲ್ಲಿಗೆ ಬಂದಿದ್ದ ಅಂತ ಅನ್ನಲಾಗಿದ್ದು, ಈಗ ಈ ಮಹಿಳೆ ಹೊರತುಪಡಿಸಿ ಇನ್ನೂ ಬೇರೆ ಮಹಿಳೆಯರಿಗೂ ಮಾನಸಿಕ ಹಿಂಸೆ ಕೊಟ್ಟಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read