HomeKarnatakaBIG NEWS: ಕುಡಿದ ಮತ್ತಲ್ಲಿ ಶಾಲಾ ವಾಹನ ಚಾಲನೆ; ಪಾದಚಾರಿ ಮೇಲೆ ಹರಿದ ಸ್ಕೂಲ್ ಬಸ್;...

BIG NEWS: ಕುಡಿದ ಮತ್ತಲ್ಲಿ ಶಾಲಾ ವಾಹನ ಚಾಲನೆ; ಪಾದಚಾರಿ ಮೇಲೆ ಹರಿದ ಸ್ಕೂಲ್ ಬಸ್; ವ್ಯಕ್ತಿ ದುರ್ಮರಣ

ಬೆಂಗಳೂರು: ಕಂಠಪೂರ್ತಿ ಕುಡಿದು ಶಾಲಾ ವಾಹನ ಚಾಲನೆ ಮಾಡುತ್ತಿದ್ದ ಡ್ರೈವರ್ ಬೇಜವಾಬ್ದಾರಿಗೆ ವ್ಯಕ್ತಿಯೋರ್ವ ಬಲಿಯಾಗಿದ್ದು, ಮಹಿಳೆಯೊಬ್ಬರು ಗಾಯಗೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಕುಡಿದ ಅಮಲಿನಲ್ಲಿಯೇ 25 ಶಾಲಾ ಮಕ್ಕಳನ್ನು ಕೂರಿಸಿಕೊಂಡು ಸ್ಕೂಲ್ ಬಸ್ ಚಲಾಯಿಸುತ್ತಿದ್ದ ಚಾಲಕ, ಮೆಡಿಕಲ್ ಶಾಪ್ ನಿಂದ ಔಷಧಿ ಖರೀದಿಸಿ ಬರುತ್ತಿದ್ದ ವ್ಯಕ್ತಿಯೋರ್ವರಿಗೆ ಡಿಕ್ಕಿ ಹೊಡೆದಿದ್ದಾರೆ. ಸ್ಥಳದಲ್ಲೇ ಕುಸಿದುಬಿದ್ದ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ವ್ಯಕ್ತಿ ಸಾವನ್ನಪ್ಪಿದ್ದಾರೆ. ಆಂಜನಪ್ಪ ಮೃತ ವ್ಯಕ್ತಿ. ಅಪಘಾತದಲ್ಲಿ ಸ್ಕೂಲ್ ಬಸ್ ಇನ್ನೋರ್ವ ಮಹಿಳೆಗೂ ಡಿಕ್ಕಿ ಹೊಡೆದಿದ್ದು, ಅವರು ಕೂಡ ಗಾಯಗೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಕ್ಟೋಬರ್ 10ರಂದು ದೊಡ್ಡಬಾಣಸವಾಡಿಯಲ್ಲಿ ಈ ದುರಂತ ಸಂಭವಿಸಿದೆ. ಸ್ಕೂಲ್ ಬಸ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular