HomeKarnatakaBREAKING NEWS: ಶಾಲಾ ವಾಹನ ಚಾಲಕರ ಡ್ರಂಕ್ & ಡ್ರೈವ್ ಕೇಸ್: 118 ಪ್ರಕರಣ ದಾಖಲು:...

BREAKING NEWS: ಶಾಲಾ ವಾಹನ ಚಾಲಕರ ಡ್ರಂಕ್ & ಡ್ರೈವ್ ಕೇಸ್: 118 ಪ್ರಕರಣ ದಾಖಲು: ಚಾಲಕರ DL ಸಸ್ಪೆಂಡ್

ಬೆಂಗಳೂರು: ಬೆಂಗಳೂರಿನಲ್ಲಿ ಶಾಲಾ ವಾಹನ ಚಾಲಕರ ಡ್ರಂಕ್ & ಡ್ರೈವ್ ಕೇಸ್ ಗೆ ಸಂಬಂಧಿಸಿದಂತೆ ಕೇವಲ 10 ತಿಂಗಳಲ್ಲಿ 118 ಚಾಕರ ವಿರುದ್ಧ ಪ್ರಕರಣ ದಾಖಲಾಗಿದೆ.

ಕುಡಿದ ಮತ್ತಿನಲ್ಲಿ ಶಾಲಾ ವಾಹನ ಚಲಾಯಿಸುವ ಮೂಲಕ ಸಂಚಾರಿ ನಿಯಮ ಉಲ್ಲಂಘಿಸುತ್ತಿರುವುದೂ ಅಲ್ಲದೇ ಮಕ್ಕಳ ಜೀವಕ್ಕೂ ಅಪಾಯ ಎದುರಾಗಿದೆ. ಹಿನ್ನೆಲೆಯಲ್ಲಿ ಅಂತಹ ಶಾಲಾ ವಾಹನ ಚಾಲಕರ ಡ್ರೈವಿಂಗ್ ಲೈಸನ್ಸ್ ಸಸ್ಪೆಂಡ್ ಮಾಡಲಾಗಿದೆ.

ಕಳೆದ 10 ತಿಂಗಳಲ್ಲಿ ಕುಡಿದು ಶಾಲಾ ವಾಹನ ಚಾಲನೆ ಮಾಡಿದ 118 ಚಾಲಕರ ವಿರುದ್ಧ ಕೇಸ್ ದಾಖಲಾಗಿದೆ. 118 ಚಾಲಕರ ಲೈಸೆನ್ಸ್ ಕೂಡ ರದ್ದುಪಡಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜನವರಿಯಲ್ಲಿ 16 ಕೇಸ್, ಪೆಬ್ರವರಿಯಲ್ಲಿ 7 ಕೇಸ್, ಜುಲೈ ನಲ್ಲಿ 23, ಆಗಸ್ಟ್ ನಲ್ಲಿ 26, ಸೆಪ್ಟೆಂಬರ್ ನಲ್ಲಿ 22, ನವೆಂಬರ್ ನಲ್ಲಿ 24 ಕೇಸ್ ದಾಖಲಾಗಿದೆ. ಕಾಂಟ್ರ್ಯಾಕ್ಟ್ ಶಾಲಾ ವಾಹಾನ ಚಾಲಕರಿಂದಲೇ ಹೆಚ್ಚು ನಿಯಮ ಉಲ್ಲಂಘನೆಯಾಗುತ್ತಿದ್ದು, ಈ ಬಗ್ಗೆ ಶಾಲಾ ಆಡಳಿತ ಮಂಡಳಿಗಳಿಗೂ ಪೊಲೀಸರು ನೋಟಿಸ್ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular