ಉಡುಪಿ: ಉಡುಪಿ ಜಿಲ್ಲೆಯ ಮಲ್ಪೆ ಎಸ್ ಬಿಐ ಬ್ಯಾಂಕ್ (ಭಾರತೀಯ ಸ್ಟೇಟ್ ಬ್ಯಾಂಕ್) ಶಾಖೆಗೆ 73 ಲಕ್ಷ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಬ್ಯಾಂಕ್ ನ ವ್ಯವಸ್ಥಾಪಕ ಹಾಗೂ ಇತರರು ಸೇರಿ ನಕಲಿ ದಾಖಲೆ ಸೃಷ್ಟಿಸಿ 73 ಲಕ್ಷ ರೂಪಾಯಿ ಹಣ ದೋಚಿದ್ದಾರೆ. ಹೌಸಿಂಗ್ ಫೈನಾನ್ಸ್ ಕಂಪನಿಯೊಂದರಿಂದ ಬಂದ ಇ-ಮೇಲ್ ಸಂದೇಶ ಆಧರಿಸಿ ನಾಲವರ ಖಾತೆಗಳಿಗೆ 73 ಲಕ್ಷ ಹಣ ವರ್ಗಾವಣೆ ಮಾಡಿರುವ ಬಗ್ಗೆ ಆಗಸ್ಟ್ 25ರಂದು ಎಸ್ ಬಿಐ ಮುಂಬೈ ಶಾಖೆ ಮಲ್ಪೆ ಶಾಖೆಗೆ ವಿವರ ಕೇಳಿತ್ತು. ಈ ಬಗ್ಗೆ ಪರಿಶೀಲಿಸಿದಾಗ ಮಲ್ಪೆ ಶಾಖೆಯ ವ್ಯವಸ್ಥಾಪಕರಾಗಿರುವ ಮೀರಾ ಪಲ್ಲಟಿ ಟಿ.ಹೆಚ್ ಹಾಗೂ ಹಣ ಪಡೆದ ಖಾತೆದಾರರು ಸೇರಿ ನಕಲಿ ದಾಖಲೆ ಸೃಷ್ಟಿಸಿ ಸ್ವಂತಕ್ಕೆ ಹಣ ಬಳಿಸಿ ಬ್ಯಾಂಕ್ ಗೆ ವಂಚಿಸಿರುವುದು ಬೆಳಕಿಗೆ ಬಂದಿದೆ.
ವಂಚನೆ ಹಿನ್ನೆಲೆಯಲ್ಲಿ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.