HomeKarnatakaಉಚಿತ ಸ್ವಯಂ ಉದ್ಯೋಗ ತರಬೇತಿ, ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಉಚಿತ ಸ್ವಯಂ ಉದ್ಯೋಗ ತರಬೇತಿ, ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಕೊಪ್ಪಳ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ, ಕೊಪ್ಪಳ ಇವರ ವತಿಯಿಂದ ಜಿಲ್ಲೆಯ ಗ್ರಾಮೀಣ ಭಾಗದ ಆಸಕ್ತರಿಗಾಗಿ ಉಚಿತ ಸ್ವಯಂ ಉದ್ಯೋಗ ತರಬೇತಿ ಹಾಗೂ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಸ್ವಯಂ ಉದ್ಯೋಗ ತರಬೇತಿಯಲ್ಲಿ 10 ದಿನಗಳ ಅಣಬೆ ಬೇಸಾಯ ತರಬೇತಿ, 13 ದಿನಗಳ ಜೂಟ್ ಬ್ಯಾಗ್ ತಯಾರಿಕೆ ತರಬೇತಿ ಹಾಗೂ 12 ದಿನಗಳ ಪಾಸ್ಟಪುಡ್ ಸ್ಟಾಲ್ ಉದ್ಯಮಿ ತರಬೇತಿ ಹಾಗೂ 12 ದಿನಗಳ ಪೇಪರ್ ಕವರ್, ಪೈಲ್ ಏನವೆಲಪ್ ತರಬೇತಿ ನಡೆಯಲಿದ್ದು, ಅಕ್ಟೋಬರ್ 3 ರಂದು ಸಂದರ್ಶನ ನಡೆಯಲಿದೆ ಮತ್ತು ಅಕ್ಟೋಬರ್ 5 ರಿಂದ ತರಬೇತಿಯು ಪ್ರಾರಂಭವಾಗಲಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ ಉಚಿತ ಊಟ ಮತ್ತು ವಸತಿ ಸೌಲಭ್ಯ ಒದಗಿಸಲಾಗುವುದು. ಜೊತೆಗೆ ತರಬೇತಿ ಪೂರ್ಣಗೊಳಿಸಿದವರಿಗೆ ಬ್ಯಾಂಕಿನ ಮೂಲಕ ಸಾಲ ಸೌಲಭ್ಯ ಒದಗಿಸಲು ಪ್ರಯತ್ನಿಸಲಾಗುತ್ತದೆ.

ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ವಯಸ್ಸು 18 ರಿಂದ 45 ವರ್ಷದೊಳಗಿರಬೇಕು. ಅಭ್ಯರ್ಥಿಗಳು ಕನಿಷ್ಠ ಎಂಟನೇ ತರಗತಿ ಪಾಸ್ ಆಗಿರಬೇಕು ಮತ್ತು ಕೊಪ್ಪಳ ಜಿಲ್ಲೆಯ ಗ್ರಾಮೀಣ ಭಾಗದ ನಿವಾಸಿಯಾಗಿರಬೇಕು. ಸ್ವಯಂ ಉದ್ಯೋಗದಲ್ಲಿ ಆಸಕ್ತಿ ಹೊಂದಿರಬೇಕು. ಆಸಕ್ತರು ತಮ್ಮ ಆಧಾರ ಕಾರ್ಡ್, ರೇಶನ್ ಕಾರ್ಡ್, ಪಾನ್ ಕಾರ್ಡ್, ಎಸ್‌ಬಿಐ ಬ್ಯಾಂಕ್ ಪಾಸ್‌ಬುಕ್ ಜೆರಾಕ್ಸ್, ವಿದ್ಯಾಭ್ಯಾಸ ದಾಖಲೆ ಹಾಗೂ 3 ಪಾಸ್‌ಪೋರ್ಟ್ ಸೈಜ್ ಭಾವಚಿತ್ರಗಳೊಂದಿಗೆ ನಿರ್ದೇಶಕರು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ, ಜಿಲ್ಲಾ ಕೈಗಾರಿಕಾ ಕೇಂದ್ರ ಆವರಣ, ಅಶೋಕ ಸರ್ಕಲ್ ಹತ್ತಿರ, ಕೊಪ್ಪಳ ವಿಳಾಸಕ್ಕೆ ಅರ್ಜಿ ಸಲ್ಲಿಸಬೇಕು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಕಚೇರಿ ಅಥವಾ ದೂ.ಸಂ.: 08539-231038, ಮೊ.ಸಂ: 9483618178, 7259073827, 9538096796, 9481085217 ಗೆ ಸಂಪರ್ಕಿಸಬಹುದು ಎಂದು ಕೊಪ್ಪಳ ಎಸ್‌ಬಿಐ ಆರ್‌ಸೆಟಿಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 ಪೋಷಕತ್ವ ಕಾರ್ಯಕ್ರಮದಡಿ ಅರ್ಜಿ ಆಹ್ವಾನ

ಕೊಪ್ಪಳ : ಕೌಟುಂಬಿಕ ಪ್ರೀತಿಯಿಂದ ವಂಚಿತವಾದ ಮಕ್ಕಳಿಗೆ, ತಂದೆ-ತಾಯಿಯ ಪ್ರೀತಿಯಿಂದ ವಂಚಿತವಾದ ಮಕ್ಕಳಿಗೆ ಕೌಟುಂಬಿಕ ಪ್ರೀತಿಯನ್ನು ನೀಡಿ ಮಗುವಿಗೆ ಉತ್ತಮ ಭವಿಷ್ಯವನ್ನು ರೂಪಿಸುವ ಇಚ್ಛೆಯನ್ನು ಹೊಂದಿರುವ ಪೋಷಕರಿಂದ ಪೋಷಕತ್ವಕ್ಕಾಗಿ ಅರ್ಜಿಯನ್ನು ಆಹ್ವಾನಿಸಿದೆ.

ಮಕ್ಕಳ ಕಲ್ಯಾಣ ಸಮಿತಿಯು ಮಗುವಿನ ರಕ್ಷಣೆಯನ್ನು ಜೈವಿಕ ಕುಟುಂಬವನ್ನು ಹೊರತುಪಡಿಸಿ ಮತ್ತೊಂದು ಕೌಟುಂಬಿಕ ವಾತಾವರಣ ಹೊಂದಿರುವ ಪರ್ಯಾಯ ವ್ಯವಸ್ಥೆಯಲ್ಲಿ ಇರಿಸುವುದೇ ಪೋಷಕತ್ವ. ಮಕ್ಕಳ ನ್ಯಾಯ (ಮಕ್ಕಳ ಪೋಷಣೆ & ರಕ್ಷಣೆ) ಕಾಯ್ದೆ-2015 ಕಲಂ-(2)ರAತೆ ಆರೈಕೆ ಮತ್ತು ಪೋಷಣೆ ಅಡಿಯಲ್ಲಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರಾದ 6 ರಿಂದ 18 ವರ್ಷದೊಳಗಿನ ದತ್ತು ಮುಕ್ತ ಆದೇಶ ಪಡೆದು ದತ್ತು ಹೋಗಲು ಸಾಧ್ಯವಾಗದಿರುವ ಮಕ್ಕಳಿಗೆ ಬಾಲನ್ಯಾಯ ಕಾಯ್ದೆ – ಸೆಕ್ಷನ್ 44 ರನ್ವಯ ಪೋಷಕತ್ವ ಯೋಜನೆಯಡಿ ಪರ್ಯಾಯ ಕುಟುಂಬ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಹೆತ್ತವರ ಪ್ರೀತಿಯನ್ನು ನೀಡುವ ಅತ್ಯುತ್ತಮ ಯೋಜನೆಯಾಗಿದೆ.

ಪೋಷಕತ್ವದ ಅವದಿಯನ್ನುü ಒಂದು ವರ್ಷದ ಅಲ್ಪಾವಧಿ ಹಾಗೂ ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಅಥವಾ ಮಗುವಿನ ಹೊಂದಾಣಿಕೆಯ ಮೌಲ್ಯಮಾಪನದ ಆಧಾರದ ಮೇಲೆ, ಮಗುವಿಗೆ 18 ವರ್ಷ ವಯಸ್ಸಾಗುವವರೆಗೆ ಈ ಅವಧಿಯನ್ನು ಸಮಿತಿಯು ನಿಯತಕಾಲಿಕವಾಗಿ ವಿಸ್ತರಿಸಬಹುದಾಗಿದೆ.

ನಿರೀಕ್ಷಿತ ಸಾಕು ಪೋಷಕರು ದೈಹಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ ಮತ್ತು ಆರ್ಥಿಕವಾಗಿ ಸಮರ್ಥರಾಗಿರಬೇಕು. ಅವರು ಯಾವುದೇ ಮಾರಣಾಂತಿಕ ಖಾಯಿಲೆ, ರೋಗ ಹೊಂದಿರಬಾರದು. ಯಾವುದೇ ಅಪರಾಧಿಕ ಕೃತ್ಯದಲ್ಲಿ ಶಿಕ್ಷೆಗೊಳಗಾಗಿರಬಾರದು ಅಥವಾ ಯಾವುದೇ ಮಕ್ಕಳ ಹಕ್ಕುಗಳ ಉಲ್ಲಂಘನೆ ಪ್ರಕರಣದ ಆರೋಪವನ್ನು ಹೊಂದಿರಬಾರದು. ಯಾವುದೇ ವ್ಯಕ್ತಿಗಳ ಮತ್ತು ಅವರ ವೈವಾಹಿಕ ಸ್ಥಿತಿಯನ್ನು ಲೆಕ್ಕಿಸದೇ (ಅವಿವಾಹಿತ/ತೆ ವಿಧವೆ/ ವಿಧುರ/ ವಿಚ್ಛೇದಿತರು / ಕಾನೂನುಬದ್ಧವಾಗಿ ಬೇರ್ಪಟ್ಟವರು) ಮತ್ತು ಅವರಿಗೆ ಜೈವಿಕ ಮಗು ಇರಲಿ ಅಥವಾ ಇಲ್ಲದಿರಲಿ, ಷರತ್ತುಬದ್ಧವಾಗಿ ಮಗುವನ್ನು ಪೋಷಕತ್ವದಡಿಯಲ್ಲಿ ಪಡೆಯಬಹುದಾಗಿದೆ.

6 ವರ್ಷ ಮೇಲ್ಪಟ್ಟ ಮತ್ತು 12 ವರ್ಷ ವರ್ಷದೊಳಗಿನ ಮಕ್ಕಳಿಗಾಗಿ ಅರ್ಜಿ ಸಲ್ಲಿಸುವ ದಂಪತಿಗಳ ಸಂಯೋಜಿತ ಕನಿಷ್ಠ ವಯಸ್ಸು 70 ವರ್ಷಗಳಾಗಿರಬೇಕು. ಏಕ ಪೋಷಕರಾಗಿದ್ದಲ್ಲಿ 35 ವರ್ಷಗಳಾಗಿರಬೇಕು. ದಂಪತಿಗಳ ಗರಿಷ್ಠ ಸಂಯೋಜಿತ ವಯಸ್ಸು 110 ವರ್ಷಗಳು ಮತ್ತ ಏಕ ಪೋಷಕರಾಗಿದ್ದಲ್ಲಿ 55 ವರ್ಷದೊಳಗಿರಬೇಕು.

12 ವರ್ಷ ಮೇಲ್ಪಟ್ಟ ಮತ್ತು 18 ವರ್ಷದೊಳಗಿನ ಮಕ್ಕಳಿಗಾಗಿ ಅರ್ಜಿ ಸಲ್ಲಿಸುವ ದಂಪತಿಗಳ ಕನಿಷ್ಠ ಸಂಯೋಜಿತ ವಯಸ್ಸು 70 ವರ್ಷಗಳಾಗಿರಬೇಕು. ಏಕ ಪೋಷಕರಾಗಿದ್ದಲ್ಲಿ 35 ವರ್ಷಗಳಾಗಿರಬೇಕು. ದಂಪತಿಗಳ ಗರಿಷ್ಠ ಸಂಯೋಜಿತ ವಯಸ್ಸು 115 ವರ್ಷಗಳು ಮತ್ತು ಏಕ ಪೋಷಕರಾಗಿದ್ದಲ್ಲಿ 60 ವರ್ಷದೊಳಗಿರಬೇಕು.

ಕೌಟುಂಬಿಕ ಪ್ರೀತಿಯಿಂದ ವಂಚಿತವಾದ ಮಕ್ಕಳಿಗೆ ತಂದೆ-ತಾಯಿಯ ಪ್ರೀತಿಯಿಂದ ವಂಚಿತವಾದ ಮಕ್ಕಳಿಗೆ ಕೌಟುಂಬಿಕ ಪ್ರೀತಿಯನ್ನು ನೀಡಿ ಮಗುವಿಗೆ ಉತ್ತಮ ಭವಿಷ್ಯವನ್ನು ರೂಪಿಸುವ ಇಚ್ಛೆಯನ್ನು ಹೊಂದಿರುವ ಯಾವುದೇ ಪೋಷಕರು ಅರ್ಜಿಯನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ, ಕೊಪ್ಪಳ ದೂ.ಸಂ-08539-200755, ಅಥವಾ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕೊಪ್ಪಳ ದೂ.ಸಂ: 08539-225030 ಅಥವಾ ನೇರವಾಗಿ ಭೇಟಿ ನೀಡಬಹುದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular