ಉಗುರಿನ ಮೇಲೆ ಕಾಣಿಸಿಕೊಳ್ಳುವ ಬಿಳಿ ಕಲೆಗೆ ಹೀಗೆ ಹೇಳಿ ʼಗುಡ್ ಬೈʼ

 

ಉಗುರುಗಳ ಮೇಲೆ ಬಿಳಿ ಕಲೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಇದು ಕೈ ಕಾಲುಗಳ ಉಗುರುಗಳ ಮೇಲೆ ಕಾಣಿಸಿಕೊಳ್ಳುತ್ತದೆ.  ಈ ಕಲೆಗಳು ಸಣ್ಣದಾಗಿರಬಹುದು ಅಥವಾ ದೊಡ್ಡದಾಗಿರಬಹುದು. ಉಗುರುಗಳ ಮೇಲೆ ಬಿಳಿ ಕಲೆಗಳಿಗೆ ಹಲವು ಕಾರಣಗಳಿವೆ. ಶಿಲೀಂಧ್ರಗಳ ಸೋಂಕು, ಅಲರ್ಜಿ ಅಥವಾ ಕ್ಯಾಲ್ಸಿಯಂ ಕೊರತೆ ಇದಕ್ಕೆ ಕಾರಣವಾಗುತ್ತದೆ. ಸಾಮಾನ್ಯವಾಗಿರುವ ಈ ಕಲೆಗೆ ಮನೆಯಲ್ಲೇ ಮದ್ದಿದೆ.

ತೆಂಗಿನ ಎಣ್ಣೆ: ತೆಂಗಿನ ಎಣ್ಣೆಯಲ್ಲಿ ಉರಿಯೂತ ಹಾಗೂ ಶಿಲೀಂಧ್ರ ವಿರೋಧಿ ಗುಣವಿದೆ. ಇದು ಶಿಲೀಂಧ್ರಗಳ ಸೋಂಕನ್ನು ಗುಣಪಡಿಸುವಲ್ಲಿ ಬಹಳ ಪ್ರಯೋಜನಕಾರಿ. ಶುದ್ಧ ತೆಂಗಿನ ಎಣ್ಣೆಯ ಕೆಲವು ಹನಿ ತೆಗೆದುಕೊಂಡು ಉಗುರಿನ ಬಿಳಿ ಕಲೆ ಮೇಲೆ ಮಸಾಜ್ ಮಾಡಬೇಕು. ವೃತ್ತಾಕಾರದ ಚಲನೆಯಲ್ಲಿ ಮಸಾಜ್ ಮಾಡಬೇಕು. ರಾತ್ರಿ ಪೂರ್ತಿ ಹಾಗೆ ಬಿಟ್ಟು ಬೆಳಿಗ್ಗೆ ಉಗುರುಗಳನ್ನು ತೊಳೆಯಿರಿ.

ನಿಂಬೆ – ಆಲಿವ್ ಎಣ್ಣೆ: ನಿಂಬೆ ರಸ ಹಾಗೂ ಆಲಿವ್ ಆಯಿಲ್ ಕೂಡ ಒಳ್ಳೆಯದು. 2 ಚಮಚ ನಿಂಬೆ ರಸ ಮತ್ತು ಕೆಲ ಹನಿ ಆಲಿವ್ ಎಣ್ಣೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತ್ರ  ಉಗುರುಗಳಿಗೆ ಹಚ್ಚಿ ಮತ್ತು 25-30 ನಿಮಿಷಗಳ ನಂತರ ನೀರಿನಿಂದ ತೊಳೆಯಿರಿ. ಇದನ್ನು ಕೆಲ ದಿನ ಮಾಡಿದ್ರೆ ಪರಿಣಾಮ ಕಾಣಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read