HomeSportsಜಿಯೋ ಸಿನಿಮಾದಲ್ಲಿ ಇಂದಿನಿಂದ ಸೌರಾಷ್ಟ್ರ ಪ್ರೀಮಿಯರ್ ಲೀಗ್ ನೇರಪ್ರಸಾರ

ಜಿಯೋ ಸಿನಿಮಾದಲ್ಲಿ ಇಂದಿನಿಂದ ಸೌರಾಷ್ಟ್ರ ಪ್ರೀಮಿಯರ್ ಲೀಗ್ ನೇರಪ್ರಸಾರ

ಮುಂಬೈ: ಭಾರತದ ಪ್ರಮುಖ ದೇಶೀಯ ಟಿ20 ಪಂದ್ಯಾವಳಿಗಳಲ್ಲಿ ಒಂದಾದ ಸೌರಾಷ್ಟ್ರ ಪ್ರೀಮಿಯರ್ ಲೀಗ್‌ನ ಮೂರನೇ ಆವೃತ್ತಿಯನ್ನು ಕ್ರಿಕೆಟ್ ಅಭಿಮಾನಿಗಳಿಗೆ ತಲುಪಿಸಲು ಜಿಯೋಸಿನಿಮಾ ಸಿದ್ಧವಾಗಿದೆ.

ಆಗಸ್ಟ್​23ರಿಂದ ನಡೆಯಲಿರುವ ಟೂರ್ನಿಯಲ್ಲಿ ಸೌರಾಷ್ಟ್ರದ ಅತ್ಯುತ್ತಮ ಪ್ರತಿಭೆಗಳು ಕಣಕ್ಕಿಳಿಯಲಿದ್ದು, ಇದರ ಪಂದ್ಯಗಳು ಜಿಯೋಸಿನಿಮಾದಲ್ಲಿ ನೇರಪ್ರಸಾರ ಕಾಣಲಿವೆ. ಟೂರ್ನಿಯಲ್ಲಿ ಐದು ತಂಡಗಳು ರೌಂಡ್-ರಾಬಿನ್ ಸ್ವರೂಪದಲ್ಲಿ ಎಂಟು ದಿನಗಳ ಕಾಲ ಹೋರಾಡಲಿವೆ. ಅಂತಿಮವಾಗಿ ಅಗ್ರ ಎರಡು ತಂಡಗಳು ಆಗಸ್ಟ್ 31ರಂದು ಸೌರಾಷ್ಟ್ರದ ಟಿ20 ಚಾಂಪಿಯನ್ ಪಟ್ಟ ಅಲಂಕರಿಸಲು ಫೈನಲ್‌ನಲ್ಲಿ ಪೈಪೋಟಿ ನಡೆಸಲಿವೆ.

ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್​​ಆಯೋಜಿಸಿರುವ, ಪ್ರತಿಷ್ಠಿತ ಮತ್ತು ಜನಪ್ರಿಯ ರಾಜ್ಯ ಮಟ್ಟದ ಟಿ20 ಪಂದ್ಯಾವಳಿಯು ಎಲ್ಲಾ ವೀಕ್ಷಕರಿಗೆ ಉಚಿತವಾಗಿ ಲಭ್ಯವಿರುತ್ತದೆ. ಪಂದ್ಯಗಳು ಪ್ರತಿದಿನ ರಾತ್ರಿ 7ಕ್ಕೆ ಪ್ರಾರಂಭವಾಗುತ್ತವೆ. ಆಗಸ್ಟ್ 25 ಮತ್ತು 26ರಂದು ಎರಡು ಪಂದ್ಯಗಳು (ಡಬಲ್ ಹೆಡರ್)ನಡೆಯಲಿದ್ದು, ದಿನದ ಮೊದಲ ಪಂದ್ಯ ಮಧ್ಯಾಹ್ನ 3ಕ್ಕೆ ಆರಂಭಗೊಳ್ಳಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2023ರ ಸೌರಾಷ್ಟ್ರ ಪ್ರೀಮಿಯರ್ ಲೀಗ್​ನಲ್ಲಿ ಆಡಲಿರುವ ಐದು ತಂಡಗಳೆಂದರೆ ಜಲವಾಡ್ ರಾಯಲ್ಸ್, ಕಚ್ ವಾರಿಯರ್ಸ್, ಹಲಾರ್ ಹೀರೋಸ್, ಸೂರತ್ ಲಯನ್ಸ್ ಮತ್ತು ಗೋಹಿಲ್ವಾಡ್ ಗಾಲ್ಡಿಯೇಟರ್ಸ್. ಕಳೆದ ವರ್ಷದ ಫೈನಲಿಸ್ಟ್​ಗಳಾದ ಹಲಾರ್ ಹೀರೋಸ್ ಮತ್ತು ಗೋಹಿಲ್ವಾಡ್ ಗಾಲ್ಡಿಯೇಟರ್ಸ್ ತಂಡಗಳ ನಡುವೆ ಈ ಆವೃತ್ತಿಯ ಮೊದಲ ಪಂದ್ಯ ನಡೆಯಲಿದೆ. 2022-23ರ ರಣಜಿ ಟ್ರೋಫಿ ವಿಜೇತ ಸೌರಾಷ್ಟ್ರ ತಂಡದ 17ರಲ್ಲಿ 16 ಆಟಗಾರರು ಈ ಟೂರ್ನಿಯಲ್ಲಿ ಮೈದಾನಕ್ಕಿಳಿಯಲಿದ್ದಾರೆ.

ಟಾಟಾ ಐಪಿಎಲ್​, ಟಾಟಾ ಡಬ್ಲ್ಯುಪಿಎಲ್​, ಎಸ್​ಎ20, ಎಂಎಲ್​ಸಿ, ಅಬುಧಾಬಿ ಟಿ10, ಜಿಮ್​-ಆಫ್ರೋ ಟಿ10, ಭಾರತ ತಂಡದ ವೆಸ್ಟ್​ಇಂಡೀಸ್​ಪ್ರವಾಸ, ಇತ್ತೀಚೆಗೆ ಭಾರತ ತಂಡದ ಐರ್ಲೆಂಡ್ ​ಪ್ರವಾಸದ ದಾಖಲೆ ಮುರಿಯುವ ಪ್ರಸ್ತುತಿಗಳ ನಂತರ ಸೌರಾಷ್ಟ್ರ ಪ್ರೀಮಿಯರ್​ ಲೀಗ್​ ಅನ್ನೂ ನೇರಪ್ರಸಾರ ಮಾಡಲಾಗುತ್ತಿದೆ.

ವೀಕ್ಷಕರು ಜಿಯೋ ಸಿನಿಮಾ ಆ್ಯಪ್​(ಐಒಎಸ್​ಮತ್ತು ಆಂಡ್ರಾಯ್ಡ್​) ಡೌನ್​ಲೋಡ್​ಮಾಡಿಕೊಳ್ಳುವ ಮೂಲಕ ತಮ್ಮ ಆಯ್ಕೆಯ ಕ್ರೀಡೆಗಳನ್ನು ವೀಕ್ಷಿಸಬಹುದಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular