HomeKarnatakaಜಿ20 ಸಮಾವೇಶಕ್ಕೆ 4200 ಕೋಟಿ ರೂ. ಖರ್ಚು ಮಾಡಿ ಚಿನ್ನ, ಬೆಳ್ಳಿ ತಟ್ಟೆಯಲ್ಲಿ ತಿನ್ನಿಸಿದ್ದರಿಂದ ನಮಗಾದ...

ಜಿ20 ಸಮಾವೇಶಕ್ಕೆ 4200 ಕೋಟಿ ರೂ. ಖರ್ಚು ಮಾಡಿ ಚಿನ್ನ, ಬೆಳ್ಳಿ ತಟ್ಟೆಯಲ್ಲಿ ತಿನ್ನಿಸಿದ್ದರಿಂದ ನಮಗಾದ ಪ್ರಯೋಜನವೇನು?: ಸಚಿವ ಸಂತೋಷ್ ಲಾಡ್

ಬಾಗಲಕೋಟೆ: 2000 ರೂ. ನೋಟು ಹಿಂಪಡೆದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಉತ್ತರಿಸಬೇಕು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.

ಬಾಗಲಕೋಟೆಯಲ್ಲಿ ಮಾತನಾಡಿದ ಅವರು, 100 ಸ್ಮಾರ್ಟ್ ಸಿಟಿ ಘೋಷಣೆ ಮಾಡಿದ್ದರ ಬಗ್ಗೆಯೂ ಮೋದಿ ಮಾತನಾಡಬೇಕು. ಜಿ20 ಕಾರ್ಯಕ್ರಮದ ಬಜೆಟ್ 900 ಕೋಟಿ ರೂ.ನಿಂದ 4200 ಕೋಟಿ ರೂ.ಗೆ ಏರಿಕೆಯಾಗಿದೆ. ಬೇರೆ ದೇಶಗಳಲ್ಲಿ 120 ಕೋಟಿ ರೂ.ನಲ್ಲಿ ಜಿ20 ಕಾರ್ಯಕ್ರಮ ಮಾಡಿದ್ದಾರೆ. ಫ್ರಾನ್ಸ್ ನಲ್ಲಿ 700 ಕೋಟಿ ರೂಪಾಯಿ ವೆಚ್ಚದಲ್ಲಿ ಜಿ20 ಕಾರ್ಯಕ್ರಮ ಮಾಡಿದ್ದಾರೆ. ನಮ್ಮಲ್ಲಿ 4200 ಕೋಟಿ ರೂ ಖರ್ಚು ಮಾಡಿ ಜಿ20 ಕಾರ್ಯಕ್ರಮ ಮಾಡಿದ್ದಾರೆ ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೀಟರ್ ಗೆ ಒಂದು ನರೇಂದ್ರ ಮೋದಿ ಸಾಹೇಬರ ಫೋಟೋ ಹಾಕಿದ್ದಾರೆ. ಚಿನ್ನ, ಬೆಳ್ಳಿ ತಟ್ಟೆಯಲ್ಲಿ ತಿನ್ನಿಸಿದ್ದರಿಂದ ನಮಗಾದ ಪ್ರಯೋಜನವೇನು? ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾದಿಂದ ಏನು ಲಾಭವಾಗಿದೆ? ಮೋದಿ ಸರ್ಕಾರ ಒಂದು ಸೂಜಿಯನ್ನಾದರೂ ಉತ್ಪಾದನೆ ಮಾಡಿದ್ದಾರಾ ಎಂದು ಸಂತೋಷ್ ಲಾಡ್ ಪ್ರಶ್ನಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular