HomeEntertainment'ಸರ್ದಾರ್ 2' ಟ್ರೇಲರ್ ಲಾಂಚ್‌ನಲ್ಲಿ ಕನ್ನಡಿಗರ ಕಣ್ಣು: ಎಮರಾಲ್ಡ್ ಗ್ರೀನ್ ಗೌನ್‌ನಲ್ಲಿ ಗ್ಲಾಮರಸ್ ಆಗಿ ಮಿಂಚಿದ...

‘ಸರ್ದಾರ್ 2’ ಟ್ರೇಲರ್ ಲಾಂಚ್‌ನಲ್ಲಿ ಕನ್ನಡಿಗರ ಕಣ್ಣು: ಎಮರಾಲ್ಡ್ ಗ್ರೀನ್ ಗೌನ್‌ನಲ್ಲಿ ಗ್ಲಾಮರಸ್ ಆಗಿ ಮಿಂಚಿದ ಆಶಿಕಾ ರಂಗನಾಥ್!

ದಕ್ಷಿಣ ಭಾರತದ ಖ್ಯಾತ ನಟ ಕಾರ್ತಿ ಹಾಗೂ ಎಸ್ ಜೆ ಸೂರ್ಯ ಅಭಿನಯದ ಬಹುನಿರೀಕ್ಷಿತ ‘ಸರ್ದಾರ್ 2’ ಆಕ್ಷನ್ ಥ್ರಿಲ್ಲರ್ ಸಿನಿಮಾದ ಟ್ರೇಲರ್ ತಮಿಳುನಾಡಿನ ಚೆನ್ನೈನಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಪಿ ಎಸ್‌ ಮಿತ್ರನ್ ನಿರ್ದೇಶನದ ಈ ಸೀಕ್ವೆಲ್‌ನ ಟ್ರೇಲರ್ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದ್ದು, ಗಡಿ ದಾಟಿದ ಬೇಹುಗಾರಿಕೆ ಮತ್ತು ಆಕ್ಷನ್ ದೃಶ್ಯಗಳ ಝಲಕ್ ನೀಡಿದೆ. ಚಿತ್ರದಲ್ಲಿ ಮಾಳವಿಕಾ ಮೋಹನನ್, ಆಶಿಕಾ ರಂಗನಾಥ್, ರಜೀಷಾ ವಿಜಯನ್ ಹಾಗೂ ನಾಸರ್ ಅವರಂತಹ ದಿಗ್ಗಜ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಅದ್ದೂರಿ ಕಾರ್ಯಕ್ರಮದಲ್ಲಿ ಕನ್ನಡದ ಚೆಲುವೆ ಆಶಿಕಾ ರಂಗನಾಥ್ ತಮ್ಮ ಅತ್ಯಾಕರ್ಷಕ ಉಡುಪಿನಿಂದ ಎಲ್ಲರ ಗಮನ ಸೆಳೆದರು. ಎಮರಾಲ್ಡ್ ಗ್ರೀನ್ ಬಣ್ಣದ ಗ್ಲಾಮರಸ್ ಗೌನ್‌ನಲ್ಲಿ ವೇದಿಕೆ ಏರಿದ ಆಶಿಕಾ ತಮ್ಮ ಸೌಂದರ್ಯದಿಂದ ಸಭಿಕರ ಕಣ್ಮನ ಸೆಳೆದರು. ಸ್ಯಾಂಡಲ್‌ವುಡ್‌ನಲ್ಲಿ ಜನಪ್ರಿಯತೆ ಗಳಿಸಿರುವ ಆಶಿಕಾ, ಇದೀಗ ತಮಿಳು ಚಿತ್ರರಂಗದಲ್ಲೂ ತಮ್ಮ ಛಾಪು ಮೂಡಿಸಲು ಸಜ್ಜಾಗಿದ್ದು, ಈ ಚಿತ್ರದ ಮೂಲಕ ಮತ್ತಷ್ಟು ದೊಡ್ಡ ಮಟ್ಟದ ಯಶಸ್ಸು ಗಳಿಸುವ ನಿರೀಕ್ಷೆಯಲ್ಲಿದ್ದಾರೆ.

‘ಸರ್ದಾರ್’ ಮೊದಲ ಭಾಗವು ಬಾಕ್ಸ್ ಆಫೀಸ್‌ನಲ್ಲಿ ಭಾರಿ ಯಶಸ್ಸು ಗಳಿಸಿದ್ದರಿಂದ ಈ ದ್ವಿತೀಯ ಭಾಗದ ಮೇಲಿನ ನಿರೀಕ್ಷೆಗಳು ಹೆಚ್ಚಾಗಿವೆ. ದೇಶಭಕ್ತಿ, ಇಂಟೆಲಿಜೆನ್ಸ್ ನೆಟ್‌ವರ್ಕ್ ಹಾಗೂ ರೊಮಾಂಚಕ ಸನ್ನಿವೇಶಗಳನ್ನು ಒಳಗೊಂಡಿರುವ ಈ ಚಿತ್ರವು ಶೀಘ್ರದಲ್ಲೇ ಚಿತ್ರಮಂದಿರಗಳಲ್ಲಿ ತೆರೆಕಾಣಲಿದ್ದು, ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ಕಾತುರವನ್ನು ಹುಟ್ಟುಹಾಕಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular