HomeKarnatakaದುರಾಸೆಗೆ ಮದ್ದಿಲ್ಲ, ತೃಪ್ತಿ ಇದ್ದರೆ ದುರಾಸೆ ದೂರ; ಸಾಹಿತ್ಯ ಸಮ್ಮೇಳನದಲ್ಲಿ ನ್ಯಾ. ಸಂತೋಷ್ ಹೆಗ್ಡೆ

ದುರಾಸೆಗೆ ಮದ್ದಿಲ್ಲ, ತೃಪ್ತಿ ಇದ್ದರೆ ದುರಾಸೆ ದೂರ; ಸಾಹಿತ್ಯ ಸಮ್ಮೇಳನದಲ್ಲಿ ನ್ಯಾ. ಸಂತೋಷ್ ಹೆಗ್ಡೆ

ಹಾವೇರಿ: ಸಮಾಜಕ್ಕಾಗಿ ಸೇವೆ ಮಾಡುವವರನ್ನು ಗುರುತಿಸಿ ಸನ್ಮಾನಿಸಬೇಕು. ಈ ರೀತಿ ಸನ್ಮಾನಿಸುವುದರಿಂದ ಸಮಾಜಸೇವಕರಿಗೆ ಹುರುಪು ಹೆಚ್ಚಾಗುತ್ತದೆ ಎಂದು ನ್ಯಾ. ಸಂತೋಷ ಹೆಗ್ಡೆ ಹೇಳಿದ್ದಾರೆ.

ಹಾವೇರಿಯಲ್ಲಿ ನಡೆಯುತ್ತಿರುವ 86ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿ, ದುರಾಸೆಗೆ ಮದ್ದಿಲ್ಲ. ಹಿರಿಯರು ತೃಪ್ತಿ ಎನ್ನುವ ಮದ್ದು ಕಂಡುಹಿಡಿದಿದ್ದರು. ಆ ತೃಪ್ತಿ ಎಂಬ ಮದ್ದು ಇದ್ದರೆ ದುರಾಸೆ ದೂರವಾಗುತ್ತದೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎಲ್ಲರಲ್ಲೂ ಆಕಾಂಕ್ಷೆ ಇರಬೇಕು. ಜಾಸ್ತಿ ಓದಬೇಕು, ಸಾಧಿಸಬೇಕು, ಶ್ರೀಮಂತನಾಗುವ ಆಕಾಂಕ್ಷೆ ಇರಬೇಕು. ಆದರೆ, ಮತ್ತೊಬ್ಬರ ಜೇಬಿಗೆ ಕೈ ಹಾಕಬಾರದು ಎಂದು ಸಲಹೆ ನೀಡಿದ ಅವರು, ಮಾನವೀಯತೆ ಎನ್ನುವುದು ಹಿರಿಯರು ಕೊಟ್ಟ ಮೌಲ್ಯವಾಗಿದೆ ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular