HomeKarnatakaಸಂಡೂರು ವಿಧಾನಸಭೆ ಉಪಚುನಾವಣೆ : ಶಸ್ತಾಸ್ತ್ರಗಳನ್ನು ಪೊಲೀಸ್ ಠಾಣೆಗೆ ಒಪ್ಪಿಸಲು ಚುನಾವಣಾಧಿಕಾರಿ ಆದೇಶ.!

ಸಂಡೂರು ವಿಧಾನಸಭೆ ಉಪಚುನಾವಣೆ : ಶಸ್ತಾಸ್ತ್ರಗಳನ್ನು ಪೊಲೀಸ್ ಠಾಣೆಗೆ ಒಪ್ಪಿಸಲು ಚುನಾವಣಾಧಿಕಾರಿ ಆದೇಶ.!

ಸಂಡೂರು ವಿಧಾನಸಭೆ ಉಪಚುನಾವಣೆ 2024ರ ಅಂಗವಾಗಿ ಸಂಡೂರು ವ್ಯಾಪ್ತಿಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು ಭಾರತೀಯ ಶಸ್ತಾಸ್ತ್ರ ಕಾಯ್ದೆ 1959 ಕಲಂ (4), ಕಲಂ (21) ಮತ್ತು ಕಲಂ 24-ಎ(1) ರಡಿ ಸಂಡೂರು ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಶಸ್ತಾಸ್ತ್ರದಾರರ ಶಸ್ತಾಸ್ತ್ರಗ (ಫೈರ್ ಆರ್ಮ್ಸ್)ಗಳನ್ನು (ರಾಷ್ಟಿಕೃತ ಬ್ಯಾಂಕ್ಗಳು, ರಿಸರ್ವ್ ಬ್ಯಾಂಕ್ ಅವರಿಂದ ಅನುಮೋದಿಸಿದ ಶೆಡ್ಯೂಲ್ ಬ್ಯಾಂಕ್ಗಳ ಸೆಕ್ಯೂರಿಟಿ ಗಾರ್ಡ್ಗಳ ಆಯುಧಗಳನ್ನು ಹೊರತುಪಡಿಸಿ) ತಕ್ಷಣದಿಂದಲೇ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ನ.25 ರ ವರೆಗೆ ಠೇವಣಿ ಮಾಡುವಂತೆ ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಆದೇಶಿಸಿದ್ದಾರೆ.

ಸಂಡೂರು ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಸಂಡೂರು ತಾಲ್ಲೂಕು, ವೇಣಿ ವೀರಾಪುರ, ಕುಡತಿನಿ (ಬಳ್ಳಾರಿ ತಾಲ್ಲೂಕು), ತಿಮ್ಮಲಾಪುರ, ಏಳುಬೆಂಚಿ (ಕುರುಗೋಡು ತಾಲ್ಲೂಕು) ವ್ಯಾಪ್ತಿಯ ಶಸ್ತಾಸ್ತ್ರದಾರರು ತಮ್ಮ ಶಸ್ತಾಸ್ತ್ರಗಳನ್ನು ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ರವರೆಗೆ ಠೇವಣಿ ಮಾಡಬೇಕು.

*ಸೂಚನೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಾರ್ವಜನಿಕರು ಪಡೆದ ‘ಪರವಾನಗಿ ಪಡೆದ ಶಸ್ತಾಸ್ತ್ರಗಳ ಠೇವಣಿ’ ಯಿಂದ ವಿನಾಯಿತಿ ಪಡೆಯಲು ಬಯಸುವವರು ಅ.22 ರೊಳಗಾಗಿ ತಮ್ಮ ಮನವಿಗಳನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬಹುದು. ಸಾರ್ವಜನಿಕರಿಂದ ಸ್ವೀಕೃತವಾದ ಮನವಿಗಳನ್ನು “ಸ್ಕ್ರೀನಿಂಗ್ ಕಮಿಟಿ” ಯಲ್ಲಿ ಪರಿಶೀಲಿಸಿ, ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು. ಕಮಿಟಿಯ ನಿರ್ಣಯವು ಅಂತಿಮವಾಗಿರುತ್ತದೆ.

ಸಿ.ಆರ್.ಪಿ.ಸಿ ಕಾಯ್ದೆ 1973 ಕಲಂ 144 ರಡಿ ಯಾವುದೇ ಶಸ್ತಾಸ್ತ್ರ ಪರವಾನಿಗೆದಾರರು ತಮ್ಮ ಶಸ್ತಾಸ್ತ್ರವನ್ನು ಚುನಾವಣೆ ಸ್ಥಳ ಮತ್ತು ಸಾರ್ವಜನಿಕ ಸ್ಥಳದಲ್ಲಿ ಹೊತ್ತೊಯ್ಯುವುದು ಮತ್ತು ಪ್ರದರ್ಶನ ಮಾಡುವುದನ್ನು ನಿಷೇಧಿಸಿದೆ ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular