ಆರೋಗ್ಯಕರ ದೇಹಕ್ಕೆ ಕಿರಿಕ್‌ ಬೆಡಗಿ ಸಂಯುಕ್ತಾ ಹೆಗ್ಡೆ ಟಿಪ್ಸ್‌

ಕಿರಿಕ್‌ ಬೆಡಗಿ ಎಂದು ಪ್ರಸಿದ್ಧರಾಗಿರುವ ನಟಿ, ಸಂಯುಕ್ತಾ ಹೆಗ್ಡೆ ಅವರು ತಮ್ಮ ಬೋಲ್ಡ್ ಮತ್ತು ಸಿಜ್ಲಿಂಗ್ ಅವತಾರಕ್ಕಾಗಿ ಆಗಾಗ್ಗೆ ಮುಖ್ಯಾಂಶಗಳಲ್ಲಿದ್ದಾರೆ. ಬಿಕಿನಿ ಬಟ್ಟೆಗಳಿಗೆ ಇವರು ಫೇಮಸ್‌. ಇಂಥ ಚಿತ್ರಗಳನ್ನು ಹಾಕಿ ಅಂತರ್ಜಾಲದಲ್ಲಿ ಬಿರುಗಾಳಿ ಎಬ್ಬಿಸುತ್ತಾರೆ. ಅಂಥದ್ದೇ ಒಂದು ಚಿತ್ರವನ್ನು ಅವರು ಶೇರ್‌ ಮಾಡಿದ್ದು, ಅದು ಸಾಕಷ್ಟು ವೈರಲ್‌ ಆಗಿದೆ.

ತಾವು ಚಿತ್ರವನ್ನು ಶೇರ್‌ ಮಾಡಿಕೊಂಡಿದ್ದು, ಒಂದಿಷ್ಟು ಟಿಪ್ಸ್‌ಗಳನ್ನೂ ಸಂಯುಕ್ತಾ ನೀಡಿದ್ದಾರೆ. ಇಲ್ಲಿಯವರೆಗೆ ಚಿತ್ರಕ್ಕೆ 57 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ.

ಅಷ್ಟಕ್ಕೂ ನಟಿ ಹೇಳಿರುವುದು ಏನೆಂದರೆ, ಫಿಲ್ಟರ್ ಇಲ್ಲ, ಎಡಿಟ್ ಇಲ್ಲ, ಮಾರ್ನಿಂಗ್ ಬೋಡ್ ಎಂದು ಹೇಳಿದ್ದಾರೆ. ನಂತರ ಟಿಪ್ಸ್‌ ನೀಡಿದ ಅವರು, ನಿಜವಾದ ಆಹಾರವನ್ನು ಸೇವಿಸಿ, ನಿಜವಾದ ನೀರನ್ನು ಕುಡಿಯಿರಿ, ಉತ್ತಮ ನಿದ್ರೆ ಮಾಡಿರಿ, ಆರೋಗ್ಯಕರ ಧನಾತ್ಮಕ ವಾತಾವರಣದಲ್ಲಿ ಇರಿ ಇದು ನಿಮ್ಮ ದೇಹವು ಅಭಿವೃದ್ಧಿ ಹೊಂದಲು ಅವಶ್ಯಕವಾಗಿದೆ ಎಂದಿದ್ದಾರೆ.
ಹೀಗೆ ಮಾಡಿದರೆ ಒಂದು ತಿಂಗಳ ಕಾಲ ನಿಮ್ಮ ದೇಹವು ಹೇಗೆ ಬದಲಾಗುತ್ತದೆ ನೋಡಿ ಎಂದಿದ್ದಾರೆ ಸ್ಲಿಮ್‌ ಬೆಡಗಿ ಸಂಯುಕ್ತಾ ಕೊಟ್ಟಿರೋ ಇನ್ನಷ್ಟು ಟಿಪ್ಸ್‌ ಹೀಗಿದೆ:

1. ಎದ್ದೇಳಿ ಮತ್ತು ಬೆಚ್ಚಗಿನ ನೀರನ್ನು ಕುಡಿಯಿರಿ

2. ನಿಮ್ಮ ಕಾರ್ಬೋಹೈಡ್ರೇಟ್‌ಗಳಿಗೆ ಮೊದಲು ನೀವು ತರಕಾರಿಗಳು ಮತ್ತು ಪ್ರೋಟೀನ್ ಅನ್ನು ಸೇವಿಸಿ

3. ಸಾಕಷ್ಟು ನೀರು ಕುಡಿಯಿರಿ ಮತ್ತು ನಿಮ್ಮ ಆಹಾರದಲ್ಲಿ 1 ತೆಂಗಿನ ನೀರನ್ನು ಸೇರಿಸಿ

4. ಮಲಗುವ ಮೊದಲು ಕನಿಷ್ಠ 3 ಗಂಟೆಗಳ ಮೊದಲು ಊಟ ಮಾಡಿ

5. ಮಲಗುವ ಮುನ್ನ 5 ನಿಮಿಷಗಳ ಕಾಲ ಸ್ಟ್ರೆಚ್ ಮಾಡಿ ಎಂದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read