ಸಮಂತಾ ವರ್ಕೌಟ್ ಗೆ ಫ್ಯಾನ್ಸ್ ಅಷ್ಟೇ ಅಲ್ಲ ಸ್ಟಾರ್ ನಟಿಯರೂ ಫಿದಾ

ನಟಿ ಸಮಂತಾ ರುತ್ ಪ್ರಭು ಇತ್ತೀಚಿಗೆ ವರ್ಕೌಟ್ ಕಡೆ ಹೆಚ್ಚು ಗಮನ ಹರಿಸಿದ್ದಾರೆ. ಜಿಮ್ ನಲ್ಲಿ ಸಖತ್ ವರ್ಕ್ ಔಟ್ ಮಾಡುವ ಸಮಂತಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಮತ್ತೊಂದು ಪೋಸ್ಟ್ ಹಾಕಿದ್ದು, ಅವರ ಕಸರತ್ತಿಗೆ ಅಭಿಮಾನಿಗಳಷ್ಟೇ ಅಲ್ಲ, ಸಿನಿ ನಟಿಯರು ಸಹ ಹುಬ್ಬೇರಿಸಿದ್ದಾರೆ.

ಉತ್ತಮ ದೇಹ ದಂಡನೆ ಮತ್ತು ಸಮಂತಾ ವರ್ಕೌಟ್ ಗೆ ಬೆರಗಾದ ನಟಿ ರಾಕುಲ್ ಪ್ರೀತ್ ಸಿಂಗ್ “ಸ್ಟ್ರಾಂಗ್ ಗರ್ಲ್” ಎಂದು ಕಾಮೆಂಟ್ ಮಾಡಿದ್ದರೆ, ಶ್ರೀಯಾ ಶರಣ್ “ಸೂಪರ್ ಕೂಲ್” ಎಂದು ಹೇಳಿದ್ದಾರೆ.

ಸಮಂತಾ ರುತ್ ಪ್ರಭು ಅವರ ಅಭಿಮಾನಿಗಳು ಸಹ ಕಾಮೆಂಟ್ ವಿಭಾಗದಲ್ಲಿ ನಟಿಯ ಕಸರತ್ತಿಗೆ ಬಗೆಬಗೆಯ ಕಮೆಂಟ್ ಮಾಡಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಫೋಟೋವನ್ನು ಸಮಂತಾ ಬಿಳಿ ಹೃದಯದ ಎಮೋಟಿಕಾನ್ ನ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ.

ನಟ ವರುಣ್ ಧವನ್ ಜೊತೆಗಿನ ತನ್ನ ಮುಂದಿನ ವೆಬ್ ಸೀರೀಸ್ ಸಿಟಾಡೆಲ್‌ನ ಚಿತ್ರೀಕರಣದಲ್ಲಿ ಸಮಂತಾ ರುತ್ ಪ್ರಭು ಸದ್ಯ ನಿರತರಾಗಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read