ಪ್ರಸ್ತುತ ನಡೆಯುತ್ತಿರುವ 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ ಪಂದ್ಯಗಳು ಜರುಗುತ್ತಿದ್ದು, ರಾಜಸ್ಥಾನ್ ರಾಯಲ್ಸ್, ಪಂಜಾಬ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಉತ್ತಮ ಆರಂಭ ಪಡೆದುಕೊಂಡಿವೆ.
ಹೀಗೆ ಟೂರ್ನಿಯಲ್ಲಿ ಶುಭಾರಂಭ ಮಾಡಿರುವ ಪಂಜಾಬ್ ಕಿಂಗ್ಸ್ ತಂಡಕ್ಕೆ ಬಾಲಿವುಡ್ ನಟ ಸಲ್ಮಾನ್ ಖಾನ್ ಶುಭ ಕೋರಲು ಹೋಗಿ ತಮ್ಮದ್ದೇ ಹಳೆಯ ಟ್ವೀಟ್ ನೆನಪಾಗುವಂತೆ ಮಾಡಿದ್ದಾರೆ.
ಹೌದು, ಪಂಜಾಬ್ ಕಿಂಗ್ಸ್ ತಂಡಕ್ಕೆ ವಿಶ್ ಮಾಡುವ ಮುನ್ನ ಅದರ ಓನರ್ ನಟಿ ಪ್ರೀತಿ ಜಿಂಟಾರನ್ನು ಎರಡು ಬಾರಿ ಉಲ್ಲೇಖಿಸಿ ವೆಲ್‌ಡನ್ ಹಾಗೂ ಕಂಗ್ರಾಜುಲೇಷನ್ಸ್ ಎಂದಿದ್ದಾರೆ. ಬಳಿಕ ತಂಡ ಚೆನ್ನಾಗಿ ಆಡುತ್ತಿದೆ ಎಂದು ಬರೆದುಕೊಂಡಿದ್ದಾರೆ.
ಈ ಟ್ವೀಟ್ ನೋಡುತ್ತಿದ್ದಂತೆ ನೆಟ್ಟಿಗರು ಸಲ್ಲು ಕಾಲೆಳೆದಿದ್ದು, ಅವರು ಈ ಹಿಂದೆ ‘ಪ್ರೀತಿ ಜಿಂಟಾ ತಂಡ ಗೆಲ್ತಾ?’ ಎಂದು ಮಾಡಿದ್ದ ಟ್ವೀಟನ್ನು ಮತ್ತೊಮ್ಮೆ ಮೆಲುಕು ಹಾಕಿದ್ದಾರೆ.

