ಸಲ್ಮಾನ್ ಖಾನ್ ‘ಸಿಕಂದರ್’ ; ಉಚಿತ ಟಿಕೆಟ್ ನೀಡಲು ಮುಂದಾದ ಅಭಿಮಾನಿ | Watch Video

ಸಲ್ಮಾನ್ ಖಾನ್ ಅವರ ‘ಸಿಕಂದರ್’ ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ರಾಜಸ್ಥಾನದ ಜುಮ್ರುವಿನ ಕುಲದೀಪ್ ಸಿಂಗ್ ಕಸ್ವಾಯಿ ಎಂಬ ಕಟ್ಟಾ ಅಭಿಮಾನಿ ಸಿನಿಮಾದ ಮೊದಲ ದಿನದ ಮೊದಲ ಪ್ರದರ್ಶನಕ್ಕೆ 1.72 ಲಕ್ಷ ರೂಪಾಯಿ ಮೌಲ್ಯದ 817 ಟಿಕೆಟ್‌ಗಳನ್ನು ಖರೀದಿಸಿದ್ದಾರೆ.

ಸಲ್ಮಾನ್ ಖಾನ್ ಅವರ ‘ಅಂತಿಮ್’ ಮತ್ತು ‘ಕಿಸಿ ಕಾ ಭಾಯಿ ಕಿಸಿ ಕಿ ಜಾನ್’ ಸೇರಿದಂತೆ ಹಲವು ಸಿನಿಮಾಗಳಿಗೆ ಈ ರೀತಿಯ ಅಭಿಮಾನವನ್ನು ವ್ಯಕ್ತಪಡಿಸಿರುವ ಕುಲದೀಪ್, ಈ ಬಾರಿಯೂ ಬಾಂದ್ರಾದ ಗೈಟಿ ಗ್ಯಾಲಕ್ಸಿ ಚಿತ್ರಮಂದಿರದಲ್ಲಿ ಅಭಿಮಾನಿಗಳಿಗೆ ಉಚಿತವಾಗಿ ಟಿಕೆಟ್ ವಿತರಿಸಲು ನಿರ್ಧರಿಸಿದ್ದಾರೆ.

ತಮ್ಮ ಅಭಿಮಾನದ ಬಗ್ಗೆ ಮಾತನಾಡಿದ ಕುಲದೀಪ್, “ನಾನು ಸಲ್ಮಾನ್ ಖಾನ್‌ಗಾಗಿ ಏನಾದರೂ ಮಾಡುತ್ತಲೇ ಇರುತ್ತೇನೆ” ಎಂದು ಹೇಳಿದ್ದಾರೆ. ಈ ಹಿಂದೆ ಸಲ್ಮಾನ್ ಖಾನ್ ಅವರ 59ನೇ ಹುಟ್ಟುಹಬ್ಬದಂದು 6.35 ಲಕ್ಷ ರೂಪಾಯಿ ಮೌಲ್ಯದ ಬಟ್ಟೆಗಳನ್ನು ಬಡವರಿಗೆ ವಿತರಿಸಿದ್ದರು.

‘ಸಿಕಂದರ್’ ಸಿನಿಮಾಗೆ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ಯುಎ 13+ ರೇಟಿಂಗ್ ನೀಡಿದೆ. ‘ಹೋಮ್ ಮಿನಿಸ್ಟರ್’ ಎಂಬ ಪದದಲ್ಲಿ ‘ಹೋಮ್’ ಅನ್ನು ಮ್ಯೂಟ್ ಮಾಡಲು ಮತ್ತು ರಾಜಕೀಯ ಪಕ್ಷದ ಹೋರ್ಡಿಂಗ್‌ಗಳ ದೃಶ್ಯಗಳನ್ನು ಮಸುಕುಗೊಳಿಸಲು CBFC ಚಿತ್ರ ತಯಾರಕರಿಗೆ ಸೂಚಿಸಿದೆ.

ಇತ್ತೀಚೆಗೆ ಸಲ್ಮಾನ್ ಖಾನ್ ಅವರು ‘ಸಿಕಂದರ್’ ಸಿನಿಮಾದ ಪ್ರಚಾರದ ವೇಳೆ ರಾಮ ಜನ್ಮಭೂಮಿ ವಾಚ್ ಧರಿಸಿ ವಿವಾದಕ್ಕೆ ಗುರಿಯಾಗಿದ್ದರು. ಅಖಿಲ ಭಾರತ ಮುಸ್ಲಿಂ ಜಮಾತ್ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ ಬರೇಲ್ವಿ, “ಇಸ್ಲಾಂನಲ್ಲಿ ಇಂತಹ ಇಸ್ಲಾಮೇತರ ಚಿಹ್ನೆಗಳನ್ನು ಪ್ರಚಾರ ಮಾಡುವುದು ಹರಾಮ್” ಎಂದು ಹೇಳಿದ್ದರು.

 

View this post on Instagram

 

A post shared by Salman Khan (@beingsalmankhan)

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read