ಐಪಿಎಲ್ ಫೈನಲ್ ನಲ್ಲಿ ಧೋನಿ ಡಕೌಟ್ ಆಗ್ತಿದ್ದಂತೆ ಅವರ ಪತ್ನಿ ಸಾಕ್ಷಿ ರಿಯಾಕ್ಷನ್ ವೈರಲ್

ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ವಿರುದ್ಧದ ಐಪಿಎಲ್ ಫೈನಲ್ ಪಂದ್ಯದಲ್ಲಿ ಧೋನಿ ಡಕ್ ಔಟ್ ಆದಾಗ ಸಿಎಸ್ ಕೆ ಅಭಿಮಾನಿಗಳು ಒಂದು ಕ್ಷಣ ಅವಕ್ಕಾದರು. ಧೋನಿ ಅಭಿಮಾನಿಗಳಂತೂ ಈ ಅನಿರೀಕ್ಷಿತ ಕ್ಷಣದ ಮುಂದೆ ಕುಸಿದು ಹೋದರು.

ಇಂತಹ ಸಂದರ್ಭದಲ್ಲಿ ಧೋನಿ ಶೂನ್ಯಕ್ಕೆ ಔಟ್ ಆಗ್ತಿದ್ದಂತೆ ಅವರ ಪತ್ನಿ ಸಾಕ್ಷಿ ಪ್ರತಿಕ್ರಿಯೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಧೋನಿ ಬ್ಯಾಟಿಂಗ್‌ಗೆ ಬಂದಾಗ CSK 12.4 ಓವರ್‌ಗಳಲ್ಲಿ 149/4 ಆಗಿತ್ತು. ಈ ವೇಳೆ ಅವರ ಪತ್ನಿ ಸಾಕ್ಷಿ, ಮಗಳು ಝೀವಾ ಸೇರಿದಂತೆ ಸಿಎಸ್ ಕೆ ಅಭಿಮಾನಿಗಳು ಧೋನಿಯನ್ನ ಹುರಿದುಂಬಿಸ್ತಿದ್ರು. ಆದರೆ ಎಂಎಸ್ ಡಿ ಡಕೌಟ್ ಆಗ್ತಿದ್ದಂತೆ ಅವರ ಪತ್ನಿ ತುಂಬಾ ಬೇಸರಗೊಂಡು ಇಷ್ಟೇ ಎಂಬಂತೆ ಕೈ ಚೆಲ್ಲುತ್ತಾರೆ. ಈ ವಿಡಿಯೋ ವೈರಲ್ ಆಗಿದೆ.

https://www.youtube.com/shorts/E1-MTzTTFjg

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read