HomeKarnatakaಮಹಾಗಣಪತಿ ರಥೋತ್ಸವ: ಬಾಳೆಹಣ್ಣಿನ ಮೇಲೆ ಈಶ್ವರಪ್ಪ- ಮೋದಿ 3.0 ಎಂದು ಬರೆದು ರಥಕ್ಕೆ ಎಸೆದು ಪ್ರಾರ್ಥಿಸಿದ...

ಮಹಾಗಣಪತಿ ರಥೋತ್ಸವ: ಬಾಳೆಹಣ್ಣಿನ ಮೇಲೆ ಈಶ್ವರಪ್ಪ- ಮೋದಿ 3.0 ಎಂದು ಬರೆದು ರಥಕ್ಕೆ ಎಸೆದು ಪ್ರಾರ್ಥಿಸಿದ ಭಕ್ತರು

ಶಿವಮೊಗ್ಗ: ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಲೋಕಸಭಾ ಅಖಾಡಕ್ಕೆ ಇಳಿದಿದ್ದಾರೆ. ಇನ್ನೊಂದೆಡೆ ಬಿಜೆಪಿ ಅಭ್ಯರ್ಥಿಯಾಗಿ ಬಿ.ವೈ.ರಾಘವೇಂದ್ರ ಕಣದಲ್ಲಿದ್ದಾರೆ. ಚುನಾವಣೆಯಲ್ಲಿ ಈಶ್ವರಪ್ಪ ಹಾಗೂ ಮೋದಿ ಇಬ್ಬರೂ ಗೆಲ್ಲಲಿ ಎಂದು ಬೆಂಬಲಿಗರು ದೇವರಲ್ಲಿ ಪ್ರಾರ್ಥಿಸಿರುವ ಘಟನೆ ಸಾಗರದ ಮಹಾಗಣಪತಿ ರಥೋತ್ಸವದಲ್ಲಿ ನಡೆದಿದೆ.

ಸಾಗರದ ಮಹಾಗಣಪತಿ ರಥೋತ್ಸವದ ವೇಳೆ ಭಕ್ತರು ಬಾಳೆಹಣ್ಣಿನ ಮೇಲೆ ಈ ಬಾರಿ ಈಶ್ವರಪ್ಪ ಮತ್ತು ಮೋದಿ 3.0 ಎಂದು ಬರೆದು ರಥಕ್ಕೆ ಎಸೆದು ಪ್ರಾರ್ಥಿಸಿದ್ದಾರೆ.

ಇಂದಿಣಿಂದ 6 ದಿನಗಳ ಕಾಲ ಮಹಾಗಣಪತಿ ರಹೋತ್ಸವ ನಡೆಯಲಿದೆ. ರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಿದ್ದು, ಈ ಬಾರಿ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಈಶ್ವರಪ್ಪ ಹಾಗೂ ಮೋದಿ ಗೆಲ್ಲಲಿ ಎಂದು ಭಕ್ತರು, ರಾಜಕೀಯ ನಾಯಕರ ಬೆಂಬಲಿಗರು ಪ್ರಾರ್ಥಿಸಿರುವುದು ವಿಶೇಷ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular