ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಹಾಗೂ ಅವರ ಪತ್ನಿ ಅಂಜಲಿ ಮಂಗಳವಾರದಂದು ಮುಂಬೈನಲ್ಲಿ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಅವರನ್ನು ಭೇಟಿಯಾಗಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಈ ವಿಷಯವನ್ನು ಹಂಚಿಕೊಂಡಿರುವ ಸಚಿನ್, ನಾವೆಲ್ಲರೂ ಜೀವನದಲ್ಲಿ ವಿದ್ಯಾರ್ಥಿಗಳಾಗಿರುತ್ತೇವೆ. ಇಂದು ಬಿಲ್ ಗೇಟ್ಸ್ ಅವರನ್ನು ಭೇಟಿ ಮಾಡುವ ಮೂಲಕ ಮಕ್ಕಳ ಆರೋಗ್ಯ ಹಾಗೂ ಶಿಕ್ಷಣದ ಕುರಿತು ನಮ್ಮ ಫೌಂಡೇಶನ್ ಕೈಗೊಳ್ಳುವ ಕಾರ್ಯದ ಕುರಿತು ಚರ್ಚಿಸಿದ್ದೇನೆ ಎಂದಿದ್ದಾರೆ.
ಬಿಲ್ ಗೇಟ್ಸ್ ಹಾಗೂ ಮೆಲಿಂಡಾ, ಗೇಟ್ಸ್ ಫೌಂಡೇಶನ್ ಆರಂಭಿಸಿದ್ದು, ಇದರ ಮುಖಾಂತರ ವಿಶ್ವದಾದ್ಯಂತ ಹಲವು ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಸಚಿನ್ ತೆಂಡೂಲ್ಕರ್ ಸಹ ಸಚಿನ್ ಫೌಂಡೇಶನ್ ಆರಂಭಿಸಿದ್ದು, ಈ ಸಂಸ್ಥೆ ಮಕ್ಕಳ ಶಿಕ್ಷಣ ಹಾಗೂ ಆರೋಗ್ಯದ ಕುರಿತು ಅರಿವು ಮೂಡಿಸುವ ಜೊತೆಗೆ ಸಹಾಯ ಹಸ್ತ ಸಹ ನೀಡುತ್ತದೆ.
We are all students for life. Today was a wonderful learning opportunity to gain perspectives on philanthropy – including children’s healthcare, which our Foundation works on.
Sharing ideas is a powerful way to solve the world’s challenges.
Thanks for your insights @BillGates! pic.twitter.com/3o0wvHXelU
— Sachin Tendulkar (@sachin_rt) February 28, 2023