HomeIndiaಭಕ್ತರಿಗೆ ಗುಡ್ ನ್ಯೂಸ್: ಅಂಚೆ ಮೂಲಕ ಅಯ್ಯಪ್ಪ ಸ್ವಾಮಿ ಪ್ರಸಾದ ಪಡೆಯಲು ಅವಕಾಶ

ಭಕ್ತರಿಗೆ ಗುಡ್ ನ್ಯೂಸ್: ಅಂಚೆ ಮೂಲಕ ಅಯ್ಯಪ್ಪ ಸ್ವಾಮಿ ಪ್ರಸಾದ ಪಡೆಯಲು ಅವಕಾಶ

ಶಬರಿಮಲೆ ಅಯ್ಯಪ್ಪ ಸ್ವಾಮಿ ಪ್ರಸಾದವನ್ನು ದೇಶದಲ್ಲಿ ಎಲ್ಲಿ ಬೇಕಾದರೂ ಪಡೆಯಲು ಅಂಚೆ ಇಲಾಖೆ ವ್ಯವಸ್ಥೆ ಕಲ್ಪಿಸಿದೆ.

ಪ್ರಸಾದ ಚೀಲದಲ್ಲಿ ಅರವಣ, ತುಪ್ಪ, ವಿಭೂತಿ, ಅರ್ಚನೆ ಪ್ರಸಾದ, ಮಾಳಿಕಪ್ಪುರಂ ಭಗವತಿ ಅಮ್ಮನ ಕುಂಕುಮ ಮತ್ತು ಅರಿಶಿಣ ಪ್ರಸಾದ ಇರುತ್ತದೆ. ಒಂದು ಟಿನ್ ಅರವಣ ಇರುವ ಕಿಟ್ ಗೆಗೆ 520 ರೂ., 4 ಅರವಣ ಇರುವ ಕಿಟ್ ಗೆ 960 ರೂ., 10 ಅರವಣ ಇರುವ ಕಿಟ್ ಗೆಕಿ 1760 ರೂ. ನಿಗದಿಪಡಿಸಲಾಗಿದೆ.

ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ವಂ ಮಂಡಳಿ, ಅಂಚೆ ಇಲಾಖೆ ಜಂಟಿಯಾಗಿ ಯೋಜನೆ ಅನುಷ್ಠಾನಗೊಳಿಸುತ್ತಿದ್ದು, ಭಾರತದ ಯಾವುದೇ ಅಂಚೆ ಕಚೇರಿಯಲ್ಲಿ ಬುಕ್ ಮಾಡಬಹುದಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾಣಿಕೆ, ಅಪ್ಪಂ ಮತ್ತು ಅರವಣ ಪ್ರಸಾದದಿಂದ ಈ ಬಾರಿ ಆದಾಯ ಹೆಚ್ಚಾಗಿದೆ. ಕಾಣಿಕೆಯಿಂದ 3.11 ಕೋಟಿ ರೂಪಾಯಿ ಸಂಗ್ರಹವಾಗಿದೆ. ಅರವಣ ಮಾರಾಟದ ಮೂಲಕ 9.52 ಕೋಟಿ ರೂ., ಅಪ್ಪಂ ಮಾರಾಟದ ಮೂಲಕ 1.26 ಕೋಟಿ ರೂಪಾಯಿ ಲಭಿಸಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular