HomeIndiaಶಬರಿಮಲೆಗೆ ತೆರಳಿದ್ದ ಮೂವರು ಅಯ್ಯಪ್ಪ ಭಕ್ತರು ಹೃದಯಾಘಾತದಿಂದ ಸಾವು

ಶಬರಿಮಲೆಗೆ ತೆರಳಿದ್ದ ಮೂವರು ಅಯ್ಯಪ್ಪ ಭಕ್ತರು ಹೃದಯಾಘಾತದಿಂದ ಸಾವು

ಶಬರಿಮಲೆ: ಕೇರಳದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಆಗಮಿಸಿದ್ದ ಮೂವರು ಭಕ್ತರು ಹೃದಯಘಾತದಿಂದ ಮೃತಪಟ್ಟಿದ್ದಾರೆ.

ಆಂಧ್ರಪ್ರದೇಶದ ತಂಗತ್ತೂರು ವಿಶ್ವ ಬ್ರಾಹ್ಮಣ ಬಜಾರ್ ನ ರಾಮ್ ಬಾಬು(40), ತಮಿಳುನಾಡು ವೆಲ್ಲೂರು ರಾಣಿಪೇಟೆ ಪ್ಯಾಲೇಸ್ ಸ್ಟ್ರೀಟ್ ನಿವಾಸಿ ಮಣಿಕಂಠನ್(45), ಪುದುಕೋಟೈ ಲೂಪುರ್ ತಾಲೂಕು ಅಂಬೇಡ್ಕರ್ ನಗರದ ಕಂದಸ್ವಾಮಿ(65) ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಕಲ್ಲಿಡಾಂಕುವಿನಲ್ಲಿ ಹೃದಯಘಾತದಿಂದ ಅಸ್ವಸ್ಥರಾಗಿದ್ದ ರಾಮ್ ಬಾಬು ಅವರಿಗೆ ಸಿಪಿಆರ್ ನೀಡಿ ಕಾಳಕೆಟ್ಟಿಯ ತಾತ್ಕಾಲಿಕ ದವಾಖಾನೆಗೆ ತಲುಪಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular