HomeIndiaಇಂದಿನಿಂದ ಶಬರಿಮಲೆ ಮಕರ ಜ್ಯೋತಿ ಯಾತ್ರೆ ಆರಂಭ

ಇಂದಿನಿಂದ ಶಬರಿಮಲೆ ಮಕರ ಜ್ಯೋತಿ ಯಾತ್ರೆ ಆರಂಭ

ಮಕರ ಜ್ಯೋತಿ ಯಾತ್ರೆಗಾಗಿ ಡಿಸೆಂಬರ್ 30ರಂದು ಸಂಜೆ 5 ಗಂಟೆಗೆ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ಬಾಗಿಲು ತೆರೆಯಲಾಗುವುದು.

ತಂತ್ರಿ ಕಂಠರಾರ್ ರಾಜೀವರ್ ಉಪಸ್ಥಿತಿಯಲ್ಲಿ ಪ್ರಧಾನ ಅರ್ಚಕ ಎಸ್. ಅರುಣ್ ಕುಮಾರ್ ನಂಬೂದಿರಿ ದೇವಾಲಯದ ಬಾಗಿಲು ತೆರೆದು ದೀಪ ಬೆಳಗಲಿದ್ದಾರೆ. ಮಾಳಿಗಪ್ಪುರಂ ದೇವಾಲಯ ತೆರೆಯಲು ಪ್ರಧಾನ ಅರ್ಚಕ ವಾಸುದೇವನ್ ನಂಬೂದಿರಿ ಅವರಿಗೆ ಕೀಲಿ ಹಸ್ತಾಂತರ ಮಾಡಲಾಗುವುದು.

18 ಮೆಟ್ಟಿಲ ಬಳಿಯ ಕುಂಡಕ್ಕೆ ಅಗ್ನಿ ಸ್ಪರ್ಶ ಮಾಡಿದ ನಂತರ ಭಕ್ತರಿಗೆ 18 ಮೆಟ್ಟಿಲು ಏರಿ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಅನುಮತಿ ನೀಡಲಾಗುವುದು.  ಡಿಸೆಂಬರ್ 30ರಂದು ಯಾವುದೇ ವಿಶೇಷ ಪೂಜೆ ಇರುವುದಿಲ್ಲ. ಡಿಸೆಂಬರ್ 31 ರಂದು ಮುಂಜಾನೆ 3 ಗಂಟೆಯಿಂದ ಮಕರ ಜ್ಯೋತಿ ಪೂಜೆ ಆರಂಭವಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2025ರ ಜನವರಿ 12ರಂದು ಪಂದಳ ಅರಮನೆಯಿಂದ ತಿರುವಾಭರಣ ಘೋಷಯಾತ್ರೆ ಹೊರಡಲಿದೆ. ಡಿಸೆಂಬರ್ ಜ. 13ರಂದು ಪಂಪಾದಲ್ಲಿ ದೀಪೋತ್ಸವ, ಜನವರಿ 14ರಂದು ಸಂಜೆ 5 ಗಂಟೆಗೆ ತಿರುವಾಭರಣ ಘೋಷ ಯಾತ್ರೆ, ಶರಂಗುತ್ತಿಗೆ ಆಗಮನ, ಮಕರ ಸಂಕ್ರಮಣ ಪೂಜೆ, ಸಂಜೆ 6.30ಕ್ಕೆ, ಅಯ್ಯಪ್ಪಸ್ವಾಮಿಗೆ ತಿರುವಾಭರಣ ತೊಡಿಸಿ ದೀಪಾರಾಧನೆ, ಮಕರ ನಕ್ಷತ್ರ ಗೋಚರಿಸಿದ ನಂತರ, ಮಕರ ಜ್ಯೋತಿ ದರ್ಶನ ನಂತರ ಜನವರಿ 19ರಂದು ರಾತ್ರಿ 10 ಗಂಟೆಯವರೆಗೆ ಭಕ್ತರಿಗೆ ಅಯ್ಯಪ್ಪ ಸ್ವಾಮಿ ದರ್ಶನ ಇರಲಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular