HomeKarnatakaಪಕ್ಷೇತನಾಗಿ ಸ್ಪರ್ಧಿಸಿದ್ರೂ 10 ಸಾವಿರ ಮತಗಳ ಅಂತರದ ಗೆಲುವೆಂದು ಸರ್ವೇ ವರದಿ: ಆದರೂ ಬಿಜೆಪಿಯಲ್ಲೇ ಇರುವುದಾಗಿ...

ಪಕ್ಷೇತನಾಗಿ ಸ್ಪರ್ಧಿಸಿದ್ರೂ 10 ಸಾವಿರ ಮತಗಳ ಅಂತರದ ಗೆಲುವೆಂದು ಸರ್ವೇ ವರದಿ: ಆದರೂ ಬಿಜೆಪಿಯಲ್ಲೇ ಇರುವುದಾಗಿ ರಾಮದಾಸ್ ಘೋಷಣೆ

ಮೈಸೂರು: ಮೈಸೂರಿನ ಕೆಆರ್ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ 10,000 ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದು ಮೈಸೂರಿನ ಕೃಷ್ಣರಾಜ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಎ. ರಾಮದಾಸ್ ಹೇಳಿದ್ದಾರೆ.

ಕಳೆದ ಮೂರು ದಿನಗಳಿಂದ ಕ್ಷೇತ್ರದಲ್ಲಿ ಸರ್ವೆ ಮಾಡಿಸಿದ್ದೇನೆ. ವರದಿ ಕೂಡ ಬಂದಿದೆ. ಸರ್ವೇ ವರದಿ ಪ್ರಕಾರ ನಾನು ಪಕ್ಷೇತರನಾಗಿ ಸ್ಪರ್ಧಿಸಿದರೂ ಜಯಗಳಿಸುತ್ತೇನೆ. ಆದರೆ, ನಾನು ಪಕ್ಷದ ವಿರುದ್ಧ ಹೋಗುವುದಿಲ್ಲ ಎಂದು ಎಸ್.ಎ. ರಾಮದಾಸ್ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಿಮ್ಮ ಶಾಸಕ ನಿಮ್ಮ ಮನೆಯಲ್ಲಿ ಇರುತ್ತಾನೆ. ನಮ್ಮ ಗೌರವದ ಜೊತೆ ಅಮ್ಮನ ಪಕ್ಷದ ಗೌರವವೂ ದೊಡ್ಡದಾಗಿರುತ್ತದೆ. ಕೆಆರ್ ಕ್ಷೇತ್ರದ ಟಿಕೆಟ್ ಘೋಷಣೆ ನಂತರದ ಬೆಳವಣಿಗೆ ಗಮನಿಸಿದ್ದೇನೆ. ಕ್ಷೇತ್ರದ ಕಾರ್ಯಕರ್ತರ ಪೈಕಿ ಶೇಕಡ 90ರಷ್ಟು ಜನ ನನ್ನ ಜೊತೆಗಿದ್ದಾರೆ. ಇನ್ನು ಮುಂದೆಯೂ ನಾನು ಕೈಗೊಳ್ಳುವ ನಿರ್ಧಾರಕ್ಕೆ ನೀವು ಬದ್ಧರಾಗಿರಬೇಕು ಎಂದು ಹೇಳಿದ ರಾಮದಾಸ್ ಬಿಜೆಪಿಯಲ್ಲಿ ಇರುವುದಾಗಿ ಬೆಂಬಲಿಗರ ಸಭೆಯಲ್ಲಿ ಘೋಷಣೆ ಮಾಡಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular