HomeUncategorizedBREAKING: ಕಾಂಗ್ರೆಸ್ ಗೆ ಮತ ಹಾಕಿದ್ದೇನೆ ಎಂದ ಬಿಜೆಪಿ ಉಚ್ಚಾಟಿತ ಶಾಸಕ ಎಸ್.ಟಿ.ಸೋಮಶೇಖರ್

BREAKING: ಕಾಂಗ್ರೆಸ್ ಗೆ ಮತ ಹಾಕಿದ್ದೇನೆ ಎಂದ ಬಿಜೆಪಿ ಉಚ್ಚಾಟಿತ ಶಾಸಕ ಎಸ್.ಟಿ.ಸೋಮಶೇಖರ್

ಬೆಂಗಳೂರು: ವಿಧಾನ ಪರಿಷತ್ 7 ಸ್ಥಾನಗಳಿಗೆ ಮತದಾನ ಆರಂಭವಾಗಿದ್ದು, ವಿಧಾನಸೌಧದ ಕೊಠಡಿ ಸಂಖ್ಯೆ 106ರಲ್ಲಿ ಸ್ಥಾಪಿಸಲಾಗಿರುವ ಮತಗಟ್ಟೆಯಲ್ಲಿ ಮತದಾನ ನಡೆಯುತ್ತಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಮೂರು ಪಕ್ಷಗಳ ಶಾಸಕರು ವಿಧಾನಸೌಧಕ್ಕೆ ಆಗಮಿಸಿ ಮತದಾನ ಮಾಡುತ್ತಿದ್ದಾರೆ.

ಬಿಜೆಪಿಯಿಂದ ಉಚ್ಛಾಟಿತರಾಗಿರುವ ಶಾಸಕ ಎಸ್.ಟಿ.ಸೋಮಶೇಖರ್ ಯಾವ ಪಕ್ಷದ ಅಭ್ಯರ್ಥಿಗೆ ಮತದಾನ ಮಾಡಲಿದ್ದಾರೆ ಎಂಬ ಕುತೂಹಲ ಮೂಡಿತ್ತು,. ಇದೀಗ ಆ ಕೂತಹಲಕ್ಕೆ ತೆರೆ ಬಿದ್ದಿದೆ. ಎಸ್.ಟಿ,ಸೋಮಶೇಖರ್ ತಾವು ಕಾಂಗ್ರೆಸ್ ಗೆ ಮತಹಾಕಿದ್ದಾಗಿ ಸ್ಪಷ್ಟಪಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪರಿಷತ್ ಚುನಾವಣೆ ಮತದಾನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಎಸ್.ಟಿ.ಸೋಮಶೇಖರ್, ಬಿಜೆಪಿಯವರಾಗಲಿ,ಜೆಡಿಎಸ್ ನವರಾಗಲಿ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ. ನಮಗೆ ವೋಟ್ ಹಾಕಿ ಎಂದು ಯಾರೂ ಕೇಳಿಲ್ಲ. ಬಿಜೆಪಿಯವರು ಪಕ್ಷದಿಂದಲೇ ನಮ್ಮನ್ನು ಹೊರಹಾಕಿದ್ದಾರೆ. ಆದರೂ ಇಂದಿನವರೆಗೂ ಯಾರಿಂದಲಾದರೂ ಕರೆ ಬರಬಹುದು ಎಂದು ಕಾದಿದ್ದೆ. ಆದರೆ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ. ಕರೆ ಮಾಡಿ ನಮಗೆ ಮತ ಹಾಕಿ ಎಂದು ಹೇಳಿಲ್ಲ ಎಂದರು.

ಕೊನೆವರೆಗೂ ಕಾದೆ. ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದಾಗಿ ಕಾಂಗ್ರೆಸ್ ಗೆ ಮತಹಾಕಿದ್ದೇನೆ ಎಂದು ತಿಳಿಸಿದರು. ಸಿಎಂ ಡಿ.ಕೆ.ಶಿವಕುಮಾರ್ ಅವರೇ ಕರೆ ಮಾಡಿದ್ದರು, ಸಿಎಂ ಭೇಟಿಯಾದಾಗ ನಾನು ಯಾವುದೇ ಡಿಮ್ಯಾಂಡ್ ಇಟ್ಟಿಲ್ಲ. ನನ್ನ ಕ್ಷೇತ್ರದಲ್ಲಿ ಹಲವಾರು ಸಮಸ್ಯೆಗಳಿವೆ ಆ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹರಿಸುವುದಾದರೆ ನಿಮಗೆ ಬೆಂಬಲ ನೀಡುವುದಾಗಿ ಹೇಳಿದ್ದೆ. ಅದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ, ಹಂತ ಹಂತವಾಗಿ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸುವುದಾಗಿ ಹೇಳಿದ್ದಾರೆ, ಹಾಗಾಗಿ ಕ್ಷೇತ್ರದ ಅಭಿವೃದ್ದಿಗಾಗಿ ಮತ ಹಾಕಿದ್ದೇನೆ ಎಂದರು.

ನಾವು ಅಂದು ಬಿಜೆಪಿಗೆ ಹೋಗಿದ್ದಕ್ಕೆ ತಾನೆ ಬಿಜೆಪಿ ಸರ್ಕಾರ ಬಂದಿದ್ದು. ಹಾಗಿದ್ದರೂ ಇಂದು ಸೌಜನ್ಯಕ್ಕೂ ನಮ್ಮನ್ನು ಕೇಳಿಲ್ಲ ಅಂದಮೇಲೆ ಮನಸ್ಸಿಗೆ ಬೇಸರವಾಯಿತು ಎಂದು ಹೇಳಿದರು.

ಎಸ್.ಟಿ.ಸೋಮಶೇಖರ್,ವಿಧಾನಪರಿಷತ್ ಚುನಾವಣೆ,

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular