HomeKarnatakaBIG NEWS: ಬಿಜೆಪಿ ವಿರುದ್ಧ ಮತ್ತೆ ಅಸಮಾಧಾನ ಹೊರ ಹಾಕಿದ ಎಸ್.ಟಿ.ಸೋಮಶೇಖರ್; ಬಹಿರಂಗವಾಗಿ ಆಹ್ವಾನ ನೀಡಿದ...

BIG NEWS: ಬಿಜೆಪಿ ವಿರುದ್ಧ ಮತ್ತೆ ಅಸಮಾಧಾನ ಹೊರ ಹಾಕಿದ ಎಸ್.ಟಿ.ಸೋಮಶೇಖರ್; ಬಹಿರಂಗವಾಗಿ ಆಹ್ವಾನ ನೀಡಿದ ಕಾಂಗ್ರೆಸ್

ಬೆಂಗಳೂರು: ಆಪರೇಷನ್ ಹಸ್ತಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಖುದ್ದು ಎಂಟ್ರಿ ಕೊಟ್ಟಂತಿದೆ. ಮೂರನೇ ಬಾರಿಗೆ ಯಶವಂತಪುರ ಕ್ಷೇತ್ರಕ್ಕೆ ಭೇಟಿ ನೀಡಿ ಅಪಾರ್ಟ್ ಮೆಂಟ್ ಗಳ ಜನರ ಅಹವಾಲು ಸ್ವೀಕರಿಸಿದ ಡಿ.ಕೆ.ಶಿವಕುಮಾರ್, ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಗೆ ಬಹಿರಂಗವಾಗಿ ಕಾಂಗ್ರೆಸ್ ಗೆ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ.

ಈ ವೇಳೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್ ಎಸ್.ಟಿ.ಸೋಮಶೇಖರ್ ಅವರನ್ನು ಹಾಡಿ ಹೊಗಳಿದ್ದಾರೆ. ನನ್ನ ಹಾಗೂ ಸೋಮಶೇಖರ್ ಸಂಬಂಧ 35 ವರ್ಷದ್ದು. ನಾವು ಬಿತ್ತಿದ ಬೀಜ, ಈಗ ಮರವಾಗಿ ಬೆಳೆದಿದೆ. ನಾವು ಬೆಳೆದ ಹಣ್ಣನ್ನು ಬೇರೆಯವರು ಕಿತ್ತು ತಿನ್ನೋದು ಬೇಡ. ನೀವೆಲ್ಲ ಹೇಳಿದ ಹಾಗೇ ಸೋಮಶೇಖರ್ ಕೇಳ್ತಾರೆ ಎಂದು ಹೇಳುತ್ತ ಸೋಮಶೇಖರ್ ಅವರನ್ನು ಕಾಂಗ್ರೆಸ್ ಗೆ ಆಹ್ವಾನಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಸೋಮಶೇಖರ್, ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ಭೇಟಿ ನೀಡಿದ್ದ ವೇಳೆ ಸೌಜನ್ಯಕ್ಕೂ ತಮ್ಮನ್ನು ಬಿಜೆಪಿಗರು ಆಹ್ವಾನಿಸಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular