HomeInternationalತಳ್ಳಿದ ಗ್ರಾಹಕನಿಗೆ ಪ್ರತಿಯಾಗಿ ಒದೆ ನೀಡಿದ ರೋಬೋಟ್: ರಷ್ಯಾದ ಅಂಗಡಿಯಲ್ಲಿ ನಡೆದ ಘಟನೆಯ ವಿಡಿಯೋ ವೈರಲ್!

ತಳ್ಳಿದ ಗ್ರಾಹಕನಿಗೆ ಪ್ರತಿಯಾಗಿ ಒದೆ ನೀಡಿದ ರೋಬೋಟ್: ರಷ್ಯಾದ ಅಂಗಡಿಯಲ್ಲಿ ನಡೆದ ಘಟನೆಯ ವಿಡಿಯೋ ವೈರಲ್!

ರಷ್ಯಾದ ಎಲೆಕ್ಟ್ರಾನಿಕ್ಸ್ ಮಳಿಗೆಯೊಂದರಲ್ಲಿ ಗ್ರಾಹಕನೊಬ್ಬ ತಳ್ಳಿದ ತಕ್ಷಣ ಹ್ಯೂಮನಾಯ್ಡ್ ರೋಬೋಟ್ ಮರಳಿ ಆತನಿಗೆ ಒದೆಯಲು ಯತ್ನಿಸಿದ ವಿಚಿತ್ರ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಈ ದೃಶ್ಯವನ್ನು ಕಂಡು ನೆಟ್ಟಿಗರು ಕಂಗಾಲಾಗಿದ್ದು, ಹಾಲೀವುಡ್‌ನ ‘ದಿ ಟರ್ಮಿನೇಟರ್’ ಸಿನಿಮಾದ ಸನ್ನಿವೇಶಗಳಿಗೆ ಹೋಲಿಸಿ ವಿಧವಿಧವಾಗಿ ಕಮೆಂಟ್ ಮಾಡುತ್ತಿದ್ದಾರೆ.

ಸಾಮಾಜಿಕ ಜಾಲತಾಣವಾದ ಎಕ್ಸ್ (ಟ್ವಿಟರ್) ನಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ, ಕಪ್ಪು ಶರ್ಟ್ ಧರಿಸಿದ ವ್ಯಕ್ತಿಯೊಬ್ಬ ಅಂಗಡಿಯಲ್ಲಿದ್ದ ರೋಬೋಟ್ ಬಳಿ ಬಂದು ಅದನ್ನು ಬಲವಾಗಿ ತಳ್ಳುತ್ತಾನೆ. ಮುಂದಿನ ಕೆಲವೇ ಕ್ಷಣಗಳಲ್ಲಿ ಆ ರೋಬೋಟ್ ತನ್ನ ಕಾಲನ್ನು ಮುಂದೆ ಚಾಚಿ ಆ ವ್ಯಕ್ತಿಗೆ ಒದೆಯುವಂತೆ ಪ್ರತಿಕ್ರಿಯಿಸುತ್ತದೆ. ಈ ದಿಢೀರ್ ಬೆಳವಣಿಗೆಯಿಂದ ಅಲ್ಲಿದ್ದವರು ಆಶ್ಚರ್ಯಚಕಿತರಾಗಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಮತ್ತು ರೋಬೋಟ್ ಅನ್ನು ನಿಯಂತ್ರಿಸುವುದು ಕಷ್ಟವಾದಾಗ ಅದನ್ನು ತಕ್ಷಣವೇ ಆಫ್ ಮಾಡಲಾಯಿತು ಎಂದು ವರದಿಯಾಗಿದೆ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತಮಾಷೆಯ ಕಮೆಂಟ್‌ಗಳ ಮಹಾಪೂರವನ್ನೇ ಹರಿಸಿದ್ದಾರೆ. ಮನುಷ್ಯನ ಅಹಂಕಾರ ಕೊನೆಗೆ ರೋಬೋಟ್‌ಗೂ ಕೋಪ ತರಿಸಿದೆ ಎಂದು ಒಬ್ಬರು ಕಾಮೆಂಟ್ ಮಾಡಿದರೆ, ನಾವು ಕೃತಕ ಬುದ್ಧಿಮತ್ತೆಯ ತಾಳ್ಮೆ ಪರೀಕ್ಷಿಸುತ್ತಿದ್ದೇವೆ ಎಂದುಕೊಂಡಿದ್ದೆವು, ಆದರೆ ಅವು ನಮ್ಮ ತಾಳ್ಮೆ ಪರೀಕ್ಷಿಸುತ್ತಿವೆ ಎಂದು ಮತ್ತೊಬ್ಬರು ಮಾರ್ಮಿಕವಾಗಿ ಬರೆದುಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದರೆ ಈ ವಿಡಿಯೋದ ಸತ್ಯಾಸತ್ಯತೆಯ ಬಗ್ಗೆ ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ರೋಬೋಟ್ ಸ್ವಯಂಚಾಲಿತವಾಗಿ ಪ್ರತಿಕ್ರಿಯಿಸಿಲ್ಲ, ಬದಲಿಗೆ ಹಿನ್ನೆಲೆಯಲ್ಲಿ ಯಾರೋ ಇದನ್ನು ರಿಮೋಟ್ ಮೂಲಕ ನಿಯಂತ್ರಿಸುತ್ತಿದ್ದಾರೆ ಎಂದು ಇನ್ನು ಕೆಲ ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. ರೋಬೋಟ್ ಮತ್ತು ಮನುಷ್ಯನ ನಡುವಿನ ಈ ವಿಚಿತ್ರ ಸಂಘರ್ಷ ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.

“>

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular