HomeInternationalಉಕ್ರೇನ್ ಮೇಲೆ ಮುಂದುವರೆದ ರಷ್ಯಾ ಯುದ್ಧ: ಕ್ಷಿಪಣಿ ದಾಳಿಯಲ್ಲಿ 17 ಮಂದಿ ಸಾವು

ಉಕ್ರೇನ್ ಮೇಲೆ ಮುಂದುವರೆದ ರಷ್ಯಾ ಯುದ್ಧ: ಕ್ಷಿಪಣಿ ದಾಳಿಯಲ್ಲಿ 17 ಮಂದಿ ಸಾವು

ಕೈವ್: ಉತ್ತರ ಉಕ್ರೇನ್ ಪ್ರದೇಶದ ಚೆರ್ನಿಗಿವ್‌ ನ ಮೇಲೆ ರಷ್ಯಾದ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ 17 ಜನರು ಸಾವನ್ನಪ್ಪಿದ್ದಾರೆ. ಮಕ್ಕಳು ಸೇರಿದಂತೆ 61 ಮಂದಿ ಗಾಯಗೊಂಡಿದ್ದಾರೆ.

ಉತ್ತರಕ್ಕೆ ಬೆಲಾರಸ್‌ನ ಗಡಿಯಲ್ಲಿರುವ ಪ್ರದೇಶವು ರಷ್ಯಾದಿಂದ ಆಕ್ರಮಿಸಲ್ಪಟ್ಟಿತ್ತು. ಆದರೆ ಮಾಸ್ಕೋದ ಸೈನ್ಯವು ಹಿಂತೆಗೆದುಕೊಂಡ ನಂತರ ಸುಮಾರು ಎರಡು ವರ್ಷಗಳ ಕಾಲ ಭೀಕರ ಹೋರಾಟಕ್ಕೆ ಸಾಕ್ಷಿಯಾಗಿದೆ.

ಉಕ್ರೇನಿಯನ್ ತುರ್ತು ಸೇವೆಗಳ ಪ್ರಕಾರ, ದಾಳಿಯ ಆರಂಭಿಕ ಗಂಟೆಗಳಲ್ಲಿ ಮೂರು ಅಪ್ರಾಪ್ತ ವಯಸ್ಕರು ಸೇರಿದಂತೆ ಕನಿಷ್ಠ ಅರವತ್ತೊಂದು ಜನರು ಗಾಯಗೊಂಡಿದ್ದಾರೆ. ಶತ್ರುಗಳು ನಗರದ ಮಧ್ಯಭಾಗದಲ್ಲಿ ಮೂರು ಕ್ಷಿಪಣಿ ದಾಳಿಗಳನ್ನು ಪ್ರಾರಂಭಿಸಿದರು. ಆಗ ಅಲ್ಲಿ ನಾಗರಿಕರು ಕೊಲ್ಲಲ್ಪಟ್ಟರು ಮತ್ತು ಅನೇಕರು ಗಾಯಗೊಂಡಿದ್ದಾರೆ ಎಂದು ಗವರ್ನರ್ ವ್ಯಾಚೆಸ್ಲಾವ್ ಚೌಸ್ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರದೇಶದ ಆಡಳಿತ ಕೇಂದ್ರವನ್ನು ಚೆರ್ನಿಗಿವ್ ಎಂದೂ ಕರೆಯುತ್ತಾರೆ. ಇದು ರಾಜಧಾನಿ ಕೈವ್‌ನ ಉತ್ತರಕ್ಕೆ ಸುಮಾರು 145 ಕಿಲೋಮೀಟರ್(90 ಮೈಲುಗಳು) ದೂರದಲ್ಲಿದೆ ಮತ್ತು ಸುಮಾರು ಯುದ್ಧ ಪೂರ್ವದಲ್ಲಿ 2,85,000 ಜನಸಂಖ್ಯೆ ಹೊಂದಿತ್ತು. ಫೆಬ್ರವರಿ 2022 ರಲ್ಲಿ ರಷ್ಯಾದ ಟ್ಯಾಂಕ್‌ಗಳು ಬೆಲರೂಸಿಯನ್ ಪ್ರದೇಶದಿಂದ ಉಕ್ರೇನ್‌ಗೆ ನುಗ್ಗಿದಾಗ ಅದು ತೀವ್ರ ಹಾನಿಗೊಳಗಾಯಿತು. ಪ್ರಮುಖ ಮೂಲಸೌಕರ್ಯಗಳ ಮೇಲೆ ವ್ಯವಸ್ಥಿತವಾದ ರಷ್ಯಾದ ದಾಳಿಗಳನ್ನು ತಡೆಯಲು ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆಗಳನ್ನು ಪೂರೈಸಲು ತನ್ನ ಮಿತ್ರರಾಷ್ಟ್ರಗಳಿಗೆ ಉಕ್ರೇನ್ ಮನವಿ ಮಾಡುತ್ತಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular