HomeLatest NewsBIG NEWS: ನನಗೂ ಸಚಿವನಾಗುವ ಆಸೆಯಿದೆ; ನಾನೂ ಸಚಿವ ಸ್ಥಾದ ಪ್ರಬಲ ಆಕಾಂಕ್ಷಿ ಎಂದ ಉಪಸಭಾಪತಿ...

BIG NEWS: ನನಗೂ ಸಚಿವನಾಗುವ ಆಸೆಯಿದೆ; ನಾನೂ ಸಚಿವ ಸ್ಥಾದ ಪ್ರಬಲ ಆಕಾಂಕ್ಷಿ ಎಂದ ಉಪಸಭಾಪತಿ ರುದ್ರಪ್ಪ ಲಮಾಣಿ

ಮೈಸೂರು: ರಾಜ್ಯ ಸರ್ಕಾರದಲ್ಲಿ ಮತ್ತೆ ಸಚಿವ ಸ್ಥಾನಕ್ಕಾಗಿ ಪೈಪೋಟಿ ಆರಂಭವಾದಂತಿದೆ. ನನಗೂ ಸಚಿವನಾಗುವ ಆಸೆಯಿದೆ. ನಾನೂ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ ಎಂದು ಹೇಳುವ ಮೂಲಕ ವಿಧಾನಸಭೆ ಉಪಸಭಾಪತಿ ರುದ್ರಪ್ಪ ಲಮಾಣಿ ಮಂತ್ರಿಯಾಗುವ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ರುದ್ರಪ್ಪ ಲಮಾಣಿ, ಕಳೆದ ಬಾರಿ ಸಚಿವ ಸಂಪುಟ ರಚನೆ ವೇಳೆ ಪಟ್ಟಿಯಲ್ಲಿ ನನ್ನ ಹೆಸರಿತ್ತು. ಅಂತಿಮ ಕ್ಷಣದಲ್ಲಿ ಹೆಸರನ್ನು ಬದಲಾಯಿಸಲಾಯಿತು. ಪಕ್ಷದ ನಾಯಕರು ಮನವೊಲಿಸಿ ಉಪಸಭಾಪತಿ ಸ್ಥಾನ ನೀಡಿದರು ಎಂದರು.

ನಮ್ಮ ಸಮುದಾಯ ನಿರಂತರವಾಗಿ ಕಾಂಗ್ರೆಸ್ ಬೆಂಬಲಿಸುತ್ತಾ ಬಂದಿದೆ. ಹೀಗಾಗಿ ಈ ಬಾರಿ ಸಚಿವ ಸ್ಥಾನ ನನಗೆ ನೀಡುತ್ತಾರೆ ಎಂಬ ವಿಶ್ವಾಸವಿದೆ. ಎಲ್ಲರಿಗೂ ಆಸೆಯಿರುವಂತೆ ನನಗೂ ಮಂತ್ರಿಯಾಗಬೇಕೆಂಬ ಆಸೆಯಿದೆ ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular