HomeKarnatakaಪೋಷಕರಿಗೆ ಗುಡ್ ನ್ಯೂಸ್: ಮಕ್ಕಳಿಗೆ ಉಚಿತ ಶಿಕ್ಷಣ RTE ಅರ್ಜಿ ಸಲ್ಲಿಕೆ ಅವಧಿ 1 ತಿಂಗಳು...

ಪೋಷಕರಿಗೆ ಗುಡ್ ನ್ಯೂಸ್: ಮಕ್ಕಳಿಗೆ ಉಚಿತ ಶಿಕ್ಷಣ RTE ಅರ್ಜಿ ಸಲ್ಲಿಕೆ ಅವಧಿ 1 ತಿಂಗಳು ವಿಸ್ತರಣೆ

ಬೆಂಗಳೂರು: ಶಿಕ್ಷಣ ಹಕ್ಕು ಕಾಯ್ದೆ(RTE) ಅಡಿ ಅರ್ಜಿ ಸಲ್ಲಿಸಲು ಮೇ 20ರವರೆಗೆ ಅವಕಾಶ ಕಲ್ಪಿಸಲಾಗಿದೆ. ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ಅರ್ಜಿ ಸಲ್ಲಿಕೆ ಅವಧಿಯನ್ನು ವಿಸ್ತರಿಸಲಾಗಿದೆ.

ಆರ್.‌ಟಿ.ಇ. ಅಡಿ ಶೇಕಡ 25 ರಷ್ಟು ಸೀಟುಗಳ ಉಚಿತ ಪ್ರವೇಶಕ್ಕೆ ಲಭ್ಯವಿರುವ ಶಾಲೆಗಳಲ್ಲಿ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ನಿಗದಿ ಮಾಡಲಾಗಿದ್ದ ಕಾಲಾವಕಾಶವನ್ನು ಶಿಕ್ಷಣ ಇಲಾಖೆ ವಿಸ್ತರಿಸಿದೆ. ಈ ಮೊದಲು ಏಪ್ರಿಲ್ 22ರ ವರೆಗೆ ಆರ್‌ಟಿಇ ಸೀಟಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದ್ದು, ಈ ಅವಧಿಯನ್ನು ಮೇ 20ರವರೆಗೆ ಶಿಕ್ಷಣ ಇಲಾಖೆ ವಿಸ್ತರಿಸಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular