ಬೆಂಗಳೂರು: ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಆರ್.ಎಸ್.ಎಸ್ ಪಥಸಂಚನ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, ಆರ್.ಎಸ್.ಎಸ್ ಪಥಸಂಚಲನವನ್ನು ಪ್ರತಿಷ್ಠೆಯಾಗಿ ಪರಿಗಣಿಸಿದೆ. ಅದೇ ಜಾಗದಲ್ಲಿ ಪಥಸಂಚಲನ ಮಾಡಬೇಕು ಎಂದು ಹಠ ಹಿಡಿದಿದೆ. ಈ ವಿಚಾರ ಹೈಕೋರ್ಟ್ ನಲ್ಲಿದ್ದು, ಏನು ತೀರ್ಮಾನ ಬರುತ್ತೆ ಕಾದುನೋಡೋಣ ಎಂದಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ನೋಂದಣಿ ಇಲ್ಲದ ಆರ್.ಎಸ್.ಎಸ್ ನ್ನು ನಿಷೇಧಿಸುವ ಪ್ರಶ್ನೆ ಹೇಗೆ ಉದ್ಭವಿಸುತ್ತದೆ? ಇಲ್ಲಿ ನಿಷೇಧದ ಪ್ರಶ್ನೆ ಅಲ್ಲ. ಆರ್.ಎಸ್.ಎಸ್ ರಾಜಕೀಯದಲ್ಲಿ ಇಲ್ಲ ಎಂದು ಹೇಳುತ್ತಾರೆ. ಆದರೆ ಸರ್ಕಾರದ ಆದೇಶ ಬಂದ ಬಳಿಕ ಆರ್.ಎಸ್.ಎಸ್ ಗಿಂತ ಬಿಜೆಪಿಯವರೇ ಮುಗಿಬೀಳುತ್ತಿದ್ದಾರೆ. ಹಾಗಾದರೆ ಬಿಜೆಪಿಗೂ ಆರ್.ಎಸ್.ಎಸ್ ಗೂ ಏನು ಸಂಬಂಧ? ಹೇಳಲಿ ಎಂದರು.
ಇನ್ನು ಆರ್.ಎಸ್.ಎಸ್ ನೋಂದಣಿ ಬಗ್ಗೆ ಸರಿಯಾದ ಸಮಯದಲ್ಲಿ ಹೈಕೋರ್ಟ್ ನಲ್ಲಿಯೇ ಪ್ರಶ್ನೆ ಮಾಡುತ್ತೇವೆ. ಈಗ ಪಥಸಂಚಲನದ ವಿಚಾರ ಮಾತ್ರ ಬಂದಿದೆ. ಅನುಮತಿ ಸಿಕ್ಕರೆ ಆರ್.ಎಸ್.ಎಸ್ ನೋಂದಣಿ ಬಗ್ಗೆಯೂ ಕಾನೂನು ಪ್ರಕಾರ ನೋಡಿಕೊಳ್ಳಲಾಗುವುದು ಎಂದರು.

 
			 
		 
		 
		 
		 Loading ...
 Loading ... 
		 
		 
		