RSS ಸಂಸ್ಥಾಪಕ ಹೆಡ್ಗೆವಾರ್ ಪಠ್ಯ ಕೈಬಿಡಲು ದೇವನೂರು ಮಹಾದೇವ ಆಗ್ರಹ

ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪಠ್ಯಪುಸ್ತಕವನ್ನು ಬೇಕಾದಂತೆ ಪರಿಷ್ಕರಣೆ ಮಾಡಲಾಗಿದ್ದು, ನೂತನ ಸರ್ಕಾರ ಇದರಲ್ಲಿ ತುಂಬಿರುವ ವಿಷವನ್ನು ಹೊರ ತೆಗೆಯಬೇಕಿದೆ. ಇದಕ್ಕೆ ಆರು ತಿಂಗಳಾದರೂ ಪರವಾಗಿಲ್ಲ ಎಂದು ಹಿರಿಯ ಸಾಹಿತಿ ದೇವನೂರು ಮಹಾದೇವ ಹೇಳಿದ್ದಾರೆ.

ತಜ್ಞರನ್ನು ಒಳಗೊಳ್ಳದೆ ಪಠ್ಯ ಪುಸ್ತಕವನ್ನು ಬೇಕಾಬಿಟ್ಟಿ ಪರಿಷ್ಕರಣೆ ಮಾಡಲಾಗಿದ್ದು, ಚಾತುರ್ವರ್ಣ ಸಮಾಜವನ್ನೇ ಶ್ರೇಷ್ಠ ಎಂಬಂತೆ ಬಿಂಬಿಸಲಾಗಿದೆ. ಜೊತೆಗೆ ಆರ್ ಎಸ್ ಎಸ್ ಸಂಸ್ಥಾಪಕ ಕೇಶವ ಬಲಿರಾಂ ಹೆಡ್ಗೆವಾರ್ ಕುರಿತು ಪಠ್ಯ ಸೇರಿಸಲಾಗಿದ್ದು ಇದೆಲ್ಲವನ್ನು ಕೈಬಿಡಬೇಕು ಎಂದು ದೇವನೂರು ಮಹದೇವ ಆಗ್ರಹಿಸಿದ್ದಾರೆ.

ವೈಚಾರಿಕತೆಯನ್ನು ಮರೆಮಾಚುವ ಹಾಗೂ ಅಸಮಾನತೆ ಮೌಲ್ಯವನ್ನು ಬಿತ್ತುವ ಪಠ್ಯಗಳಲ್ಲಿರುವ ವಿಷಯವನ್ನು ಸಂಪೂರ್ಣವಾಗಿ ಕಿತ್ತೆಸೆಯಬೇಕಿದೆ. ಹೀಗಾಗಿ ಹೊಸ ಸರ್ಕಾರ, ತಡವಾದರೂ ಸರಿ ಪಠ್ಯಪುಸ್ತಕಗಳನ್ನು ಪರಿಷ್ಕರಿಸಬೇಕಿದೆ ಎಂದು ಒತ್ತಾಯಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read