HomeIndiaRSS ನವರು 21ನೇ ಶತಮಾನದ ಕೌರವರು; ರಾಹುಲ್ ಗಾಂಧಿ ವಾಗ್ದಾಳಿ

RSS ನವರು 21ನೇ ಶತಮಾನದ ಕೌರವರು; ರಾಹುಲ್ ಗಾಂಧಿ ವಾಗ್ದಾಳಿ

ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಅವರು 21ನೇ ಶತಮಾನದ ಕೌರವರು ಎಂದು ಹೇಳಿದ್ದಾರೆ.

ಸೋಮವಾರದಂದು ‘ಭಾರತ್ ಜೋಡೋ’ ಯಾತ್ರೆ ಹರಿಯಾಣದ ಅಂಬಾಲಾ ಜಿಲ್ಲೆಯನ್ನು ಪ್ರವೇಶಿಸಿದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು 21ನೇ ಶತಮಾನದ ಕೌರವರ ಬಗ್ಗೆ ಹೇಳುತ್ತೇನೆ. ಅವರು ಖಾಕಿ ಚಡ್ಡಿ ಧರಿಸಿ, ಲಾಠಿ ಹಿಡಿಯುತ್ತಾರೆ ಎಂದು ಪರೋಕ್ಷವಾಗಿ ಆರ್ ಎಸ್ ಎಸ್ ಜರೆದರು.

ಅಲ್ಲದೆ ಭಾರತ ಯಾತ್ರೆ ಆರಂಭವಾದ ಬಳಿಕ ನಿಮ್ಮಲ್ಲಿ ಪರಿವರ್ತನೆಯಾಗಿದೆಯಾ ಎಂಬ ಮಾಧ್ಯಮ ಪ್ರತಿನಿಧಿಯ ಪ್ರಶ್ನೆಗೆ ಪ್ರತಿಕ್ರಿಸಿದ ಅವರು, ನನಗೆ ಯಾವುದೇ ವರ್ಚಸ್ಸಿನ ಹಂಗಿಲ್ಲ. ಆ ಬಗ್ಗೆ ತಲೆಯೂ ಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular