HomeIndiaರೈಲ್ವೇ ಇಲಾಖೆಯ 22,195 ಹುದ್ದೆಗಳ ಪರೀಕ್ಷೆಯ ಕೀ ಉತ್ತರ ಬಿಡುಗಡೆ, ಜಸ್ಟ್ ಹೀಗೆ ಚೆಕ್ ಮಾಡಿ...

ರೈಲ್ವೇ ಇಲಾಖೆಯ 22,195 ಹುದ್ದೆಗಳ ಪರೀಕ್ಷೆಯ ಕೀ ಉತ್ತರ ಬಿಡುಗಡೆ, ಜಸ್ಟ್ ಹೀಗೆ ಚೆಕ್ ಮಾಡಿ |RRB Group D Recruitment 2026

ರೈಲ್ವೆ ಉದ್ಯೋಗಕ್ಕಾಗಿ ಕಾದಿದ್ದ ಲಕ್ಷಾಂತರ ಅಭ್ಯರ್ಥಿಗಳಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. RRB Group D 2026ರ ತಾತ್ಕಾಲಿಕ ಉತ್ತರ ಕೀಯನ್ನು ರೈಲ್ವೆ ನೇಮಕಾತಿ ಮಂಡಳಿ ಸೆಪ್ಟೆಂಬರ್ 7ರಂದು ಬಿಡುಗಡೆ ಮಾಡಿದೆ. ಆಗಸ್ಟ್ 3ರಿಂದ 25ರವರೆಗೆ ನಡೆದ CBT ಪರೀಕ್ಷೆಗೆ ಹಾಜರಾದ ಸುಮಾರು 52.39 ಲಕ್ಷ ಅಭ್ಯರ್ಥಿಗಳು ಇದೀಗ ತಮ್ಮ Response Sheet ಹಾಗೂ Answer Key ಪರಿಶೀಲಿಸಿ, ನಿರೀಕ್ಷಿತ ಅಂಕಗಳನ್ನು ಅಂದಾಜಿಸಿಕೊಳ್ಳಬಹುದು.

ರೈಲ್ವೆ ನೇಮಕಾತಿ ಮಂಡಳಿ (RRB) ವತಿಯಿಂದ Group D (CEN 09/2025) ಪರೀಕ್ಷೆಯ ತಾತ್ಕಾಲಿಕ ಉತ್ತರ ಕೀಯನ್ನು ಸೆಪ್ಟೆಂಬರ್ 7, 2026ರಂದು ಅಧಿಕೃತ ಪ್ರಾದೇಶಿಕ ವೆಬ್‌ಸೈಟ್‌ಗಳಲ್ಲಿ ಬಿಡುಗಡೆ ಮಾಡಲಾಗಿದೆ.

2026ರ ಆಗಸ್ಟ್ 3ರಿಂದ 25ರವರೆಗೆ ನಡೆದ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)ಯಲ್ಲಿ ಸುಮಾರು 52.39 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು. ಇದೀಗ ಪರೀಕ್ಷೆ ಬರೆದ ಅಭ್ಯರ್ಥಿಗಳು ತಮ್ಮ ರೆಸ್ಪಾನ್ಸ್ ಶೀಟ್ ಮತ್ತು ಉತ್ತರ ಕೀಯನ್ನು ಪರಿಶೀಲಿಸಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಉತ್ತರ ಕೀಯನ್ನು ಪರಿಶೀಲಿಸುವ ಮೂಲಕ ಅಭ್ಯರ್ಥಿಗಳು ತಾವು ನೀಡಿದ ಉತ್ತರಗಳನ್ನು ಅಧಿಕೃತ ಉತ್ತರಗಳೊಂದಿಗೆ ಹೋಲಿಕೆ ಮಾಡಿಕೊಂಡು, ತಮ್ಮ ನಿರೀಕ್ಷಿತ ಅಂಕಗಳನ್ನು ಅಂದಾಜು ಮಾಡಿಕೊಳ್ಳಬಹುದು.

RRB Group D Answer Key 2026 ಪ್ರಮುಖ ಮಾಹಿತಿ

  • ನೇಮಕಾತಿ ಸಂಸ್ಥೆ: ರೈಲ್ವೆ ನೇಮಕಾತಿ ಮಂಡಳಿ (RRB)

  • ಪರೀಕ್ಷೆ: RRB Group D (Level-1)

  • ಅಧಿಸೂಚನೆ ಸಂಖ್ಯೆ: CEN 09/2025

  • ಒಟ್ಟು ಹುದ್ದೆಗಳು: 22,195

  • ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು: ಸುಮಾರು 52,39,760

  • ಪರೀಕ್ಷೆ ನಡೆದ ದಿನಾಂಕ: ಆಗಸ್ಟ್ 3ರಿಂದ 25, 2026

  • ಉತ್ತರ ಕೀ ಬಿಡುಗಡೆ: ಸೆಪ್ಟೆಂಬರ್ 7, 2026

  • ಉತ್ತರ ಕೀ ಸ್ಥಿತಿ: ಬಿಡುಗಡೆ

  • ಆಕ್ಷೇಪಣೆ ಶುಲ್ಕ: ಪ್ರತಿ ಪ್ರಶ್ನೆಗೆ ₹50

  • ಅಗತ್ಯವಿರುವ ಲಾಗಿನ್ ಮಾಹಿತಿ: ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕ/ಪಾಸ್‌ವರ್ಡ್

  • ಫಲಿತಾಂಶ: ಸೆಪ್ಟೆಂಬರ್–ಅಕ್ಟೋಬರ್ 2026ರಲ್ಲಿ ಪ್ರಕಟವಾಗುವ ನಿರೀಕ್ಷೆ

ಡೌನ್‌ಲೋಡ್ ಮಾಡುವುದು ಹೇಗೆ?

ಅಭ್ಯರ್ಥಿಗಳು ಕೆಳಗಿನ ಹಂತಗಳನ್ನು ಅನುಸರಿಸಿ ತಮ್ಮ ಉತ್ತರ ಕೀ ಹಾಗೂ ರೆಸ್ಪಾನ್ಸ್ ಶೀಟ್‌ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು:

  1. ಮೊದಲು RRB ಅಧಿಕೃತ ವೆಬ್‌ಸೈಟ್ ಅಥವಾ ನಿಮ್ಮ ಪ್ರಾದೇಶಿಕ RRB ವೆಬ್‌ಸೈಟ್‌ಗೆ ಭೇಟಿ ನೀಡಿ.

  2. ವೆಬ್‌ಸೈಟ್‌ನ ಮುಖಪುಟದಲ್ಲಿ “RRB Group D Answer Key 2026 (CEN 09/2025)” ಲಿಂಕ್‌ ಆಯ್ಕೆ ಮಾಡಿ.

  3. ಲಿಂಕ್‌ ಮೇಲೆ ಕ್ಲಿಕ್ ಮಾಡಿದ ಬಳಿಕ ಲಾಗಿನ್ ಪುಟ ತೆರೆಯುತ್ತದೆ.

  4. ನಿಮ್ಮ Registration Number ಹಾಗೂ Date of Birth/Password ನಮೂದಿಸಿ.

  5. Submit ಆಯ್ಕೆ ಮಾಡಿದ ನಂತರ ನಿಮ್ಮ Answer Key ಮತ್ತು Response Sheet ಪರದೆಯ ಮೇಲೆ ಕಾಣಿಸುತ್ತದೆ.

  6. ಅದನ್ನು ಡೌನ್‌ಲೋಡ್ ಮಾಡಿಕೊಂಡು ಮುಂದಿನ ಅಗತ್ಯಕ್ಕಾಗಿ ಸುರಕ್ಷಿತವಾಗಿ ಇಟ್ಟುಕೊಳ್ಳಿ.

ಉತ್ತರ ಕೀಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ

ಅಭ್ಯರ್ಥಿಗಳು ಉತ್ತರ ಕೀಯಲ್ಲಿ ಯಾವುದಾದರೂ ತಪ್ಪು ಕಂಡುಬಂದರೆ, ನಿಗದಿತ ಅವಧಿಯಲ್ಲಿ ಆಕ್ಷೇಪಣೆ ಸಲ್ಲಿಸಬಹುದು. ಪ್ರತಿ ಪ್ರಶ್ನೆಗೆ ₹50 ಆಕ್ಷೇಪಣೆ ಶುಲ್ಕ ನಿಗದಿಪಡಿಸಲಾಗಿದೆ.

ಉತ್ತರ ಕೀ ಪರಿಶೀಲಿಸಿದ ನಂತರ ಅಭ್ಯರ್ಥಿಗಳು ತಮ್ಮ ಸಂಭವನೀಯ ಅಂಕಗಳನ್ನು ಲೆಕ್ಕ ಹಾಕಿಕೊಂಡು, ಮುಂದಿನ RRB Group D ಫಲಿತಾಂಶಕ್ಕೆ ಸಿದ್ಧರಾಗಬಹುದು.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular