ಬೆಂಗಳೂರು: ಬೆಂಗಳೂರಿನಲ್ಲಿ ರೌಡಿಶೀಟರ್ ಹೈದರ್ ಅಲಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಅಶೋಕ್ ನಗರ ಠಾಣೆ ಪೊಲೀಸರು 7 ಆರೋಪಿಗಳನ್ನು ಬಂಧಿಸಿದ್ದಾರೆ.
ನಯಾಜ್ ಪಷಾ ಅಲಿಯಾಸ್ ನಾಜುದ್ದೀನ್, ರಿಜ್ವಾನ್, ಸದ್ದಾಂ, ಮತೀನ್, ದರ್ಶನ್, ರಾಹಿದ್, ವಸೀಂ ಬಂಧಿತ ಆರೋಪಿಗಳು. ಹಳೇ ದ್ವೇಷದ ಹಿನ್ನೆಲೆಯಲ್ಲಿ ಹೈದರ್ ಅಲಿಯನ್ನು ಹತ್ಯೆ ಮಾಡಿದ್ದರು.
ಬಂಧಿತ ಸದ್ದಾಂ, ರಾಹಿದ್, ವಾಸಿಂ, ರಿಜ್ವಾನ್ ವಿರುದ್ಧ ಶಿವಮೊಗ್ಗ ಜಿಲೆಯ ವಿವಿಧ ಠಾಣೆಗಳಲ್ಲಿ ರೌಡಿಶೀಟ್ ಇದೆ. ಕೊಲೆಯಾದ ಹೈದರ್ ಹಾಗೂ ಆರೋಪಿ ನಯಾಜ್ ನಡುವೆ 10 ವರ್ಷಗಳ ದ್ವೇಷವಿತ್ತು ಎಂದು ತಿಳಿದುಬಂದಿದೆ.