HomeLatest News1000 ಗೋಲುಗಳ ಐತಿಹಾಸಿಕ ಮೈಲಿಗಲ್ಲಿನತ್ತ ರೊನಾಲ್ಡೊ: ಸೌದಿ ಲೀಗ್‌ನಲ್ಲಿ ಅಲ್ ನಸ್ರ್ ಗೆಲುವಿನ ಅಬ್ಬರ!

1000 ಗೋಲುಗಳ ಐತಿಹಾಸಿಕ ಮೈಲಿಗಲ್ಲಿನತ್ತ ರೊನಾಲ್ಡೊ: ಸೌದಿ ಲೀಗ್‌ನಲ್ಲಿ ಅಲ್ ನಸ್ರ್ ಗೆಲುವಿನ ಅಬ್ಬರ!

ವಿಶ್ವ ಫುಟ್‌ಬಾಲ್ ದಂತಕಥೆ ಕ್ರಿಸ್ಟಿಯಾನೊ ರೊನಾಲ್ಡೊ ತಮ್ಮ ಅದ್ಭುತ ಆಟದ ಮೂಲಕ ಮತ್ತೊಂದು ಐತಿಹಾಸಿಕ ಸಾಧನೆಯ ಸನಿಹಕ್ಕೆ ಬಂದು ತಲುಪಿದ್ದಾರೆ. ಸೌದಿ ಪ್ರೋ ಲೀಗ್‌ನಲ್ಲಿ ಅಭಾ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ ಅಲ್-ನಸ್ರ್ ತಂಡವನ್ನು 2-1 ಅಂತರದಿಂದ ಗೆಲುವಿನ ದಂಡೆಗೆ ತಲುಪಿಸಿದ ರೊನಾಲ್ಡೊ, ತಮ್ಮ ವೃತ್ತಿಜೀವನದ 979ನೇ ಗೋಲು ಬಾರಿಸಿ ಸಂಭ್ರಮಿಸಿದ್ದಾರೆ.

ಪಂದ್ಯದ 22ನೇ ನಿಮಿಷದಲ್ಲಿ ಆಂಜೆಲೊ ನೀಡಿ ಕಾರ್ನರ್ ಪಾಸ್ ಅನ್ನು ಅತ್ಯಂತ ಚಾಣಾಕ್ಷತನದಿಂದ ಹೆಡರ್ ಮಾಡುವ ಮೂಲಕ ರೊನಾಲ್ಡೊ ಪಂದ್ಯದ ಮೊದಲ ಗೋಲು ದಾಖಲಿಸಿದರು. ಈ ಆಕರ್ಷಕ ಗೋಲಿನೊಂದಿಗೆ ಅವರು 1,000 ಗೋಲುಗಳ ಐತಿಹಾಸಿಕ ದಾಖಲೆ ಬರೆಯಲು ಇನ್ನು ಕೇವಲ 21 ಗೋಲುಗಳಷ್ಟೇ ಬಾಕಿ ಉಳಿದಿದೆ. ಅಲ್-ನಸ್ರ್ ಕ್ಲಬ್ ಪರ ರೊನಾಲ್ಡೊ ಹೊಡೆದ 132ನೇ ಗೋಲು ಇದಾಗಿದೆ.

ನಂತರ ಪಂದ್ಯದ 58ನೇ ನಿಮಿಷದಲ್ಲಿ ಅಬ್ದುಲ್ಲಾ ಅಲ್-ಹಮ್ದಾನ್ ಮತ್ತೊಂದು ಗೋಲು ಬಾರಿಸಿ ಅಲ್-ನಸ್ರ್ ಮುನ್ನಡೆಯನ್ನು ಹೆಚ್ಚಿಸಿದರು. ಪಂದ್ಯದ 75ನೇ ನಿಮಿಷದಲ್ಲಿ ಅಭಾ ತಂಡದ ನಬಿಲ್ ಫೆಕಿರ್ ಒಂದು ಗೋಲು ಗಳಿಸಿ ತಿರುಗೇಟು ನೀಡಲು ಯತ್ನಿಸಿದರೂ, ಅಂತಿಮವಾಗಿ ಅಲ್-ನಸ್ರ್ ತಂಡ ಪಂದ್ಯವನ್ನು ತನ್ನದಾಗಿಸಿಕೊಂಡಿತು. ಈ ಗೆಲುವಿನ ಮೂಲಕ ಅಲ್-ಇತ್ತಿಹಾದ್ ವಿರುದ್ಧದ ಹಿಂದಿನ ಸೋಲಿನಿಂದ ತಂಡ ಚೇತರಿಸಿಕೊಂಡಿದೆ. 41ನೇ ವಯಸ್ಸಿನಲ್ಲೂ ರೊನಾಲ್ಡೊ ಅವರ ಈ ಗೋಲ್ ಬಾರಿಸುವ ಹಸಿವು ಫುಟ್‌ಬಾಲ್ ಪ್ರಿಯರನ್ನು ಬೆರಗುಗೊಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular