HomeLatest Newsವೃತ್ತಿಜೀವನದ 978ನೇ ಗೋಲ್ ಸಿಡಿಸಿದ ರೊನಾಲ್ಡೊ: ಅಲ್ ತಾವೂನ್ ವಿರುದ್ಧ ಅಲ್ ನಾಸ್ರ್‌ಗೆ ರೋಚಕ ಗೆಲುವು

ವೃತ್ತಿಜೀವನದ 978ನೇ ಗೋಲ್ ಸಿಡಿಸಿದ ರೊನಾಲ್ಡೊ: ಅಲ್ ತಾವೂನ್ ವಿರುದ್ಧ ಅಲ್ ನಾಸ್ರ್‌ಗೆ ರೋಚಕ ಗೆಲುವು

ಸೌದಿ ಪ್ರೋ ಲೀಗ್‌ ಫುಟ್‌ಬಾಲ್‌ನಲ್ಲಿ ಜಾಗತಿಕ ತಾರೆ ಕ್ರಿಸ್ಟಿಯಾನೋ ರೊನಾಲ್ಡೊ ನೇತೃತ್ವದ ಅಲ್ ನಾಸ್ರ್ ತಂಡ ತನ್ನ ಗೆಲುವಿನ ಓಟವನ್ನು ಮುಂದುವರಿಸಿದೆ. ಶುಕ್ರವಾರ ನಡೆದ ರೋಚಕ ಪಂದ್ಯದಲ್ಲಿ ಅಲ್ ತಾವೂನ್ ತಂಡವನ್ನು 2-1 ಗೋಲುಗಳ ಅಂತರದಿಂದ ಮಣಿಸಿದ ಅಲ್ ನಾಸ್ರ್, ಸರಣಿಯಲ್ಲಿ ಸತತ ನಾಲ್ಕನೇ ಜಯ ದಾಖಲಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಉಳಿದುಕೊಂಡಿದೆ.

ಪಂದ್ಯದ ಆರಂಭದಲ್ಲೇ ಅಲ್ ತಾವೂನ್ ಆಟಗಾರ ಮೊಹಮ್ಮದ್ ಬಸ್ಸಮ್ ಅಲ್ ಹುರೈಜಿ 11ನೇ ನಿಮಿಷದಲ್ಲಿ ಗೋಲು ಬಾರಿಸಿ ಅಲ್ ನಾಸ್ರ್‌ಗೆ ಆಘಾತ ನೀಡಿದ್ದರು. ಆದರೆ ಮೊದಲಾರ್ಧದ ಇಂಜುರಿ ಟೈಮ್‌ನಲ್ಲಿ (45+5ನೇ ನಿಮಿಷ) ಸಾಮೂ ಕೋಸ್ಟಾ ಬಾರಿಸಿದ ಗೋಲ ನೆರವಿನಿಂದ ಅಲ್ ನಾಸ್ರ್ 1-1 ಸಮಬಲ ಸಾಧಿಸಿತು.

ಬ ಬಳಿಕ ದ್ವಿತೀಯಾರ್ಧ ಆರಂಭವಾದ ಕೆಲವೇ ನಿಮಿಷಗಳಲ್ಲಿ, ಎಂದರೆ 50ನೇ ನಿಮಿಷದಲ್ಲಿ ರೊನಾಲ್ಡೊ ಅದ್ಭುತ ಗೋಲು ಬಾರಿಸಿ ತಂಡಕ್ಕೆ 2-1 ಮುನ್ನಡೆ ತಂದುಕೊಟ್ಟರು. ಜೊಆವೋ ಫೆಲಿಕ್ಸ್ ಹಾಗೂ ಮೊಹಮ್ಮದ್ ಸಿಮಾಕನ್ ನೀಡಿದ ಪಾಸ್ ಅನ್ನು ಕೇವಲ ಆರು ಗಜಗಳ ಅಂತರದಿಂದ ನೆಟ್‌ಗೆ ತಳ್ಳಿದ 41 ವರ್ಷದ ರೊನಾಲ್ಡೊ ತಮ್ಮ ವೃತ್ತಿಜೀವನದ 978ನೇ ಗೋಲ್ ಸಂಭ್ರಮ ಆಚರಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪೂರ್ಣ 90 ನಿಮಿಷಗಳ ಕಾಲ ಮೈದಾನದಲ್ಲಿದ್ದು ತಂಡಕ್ಕೆ ಜಯ ತಂದುಕೊಟ್ಟ ರೊನಾಲ್ಡೊ ನಾಯಕತ್ವಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಪಂದ್ಯದ ಗೆಲುವಿನೊಂದಿಗೆ ಅಲ್ ನಾಸ್ರ್ ತಂಡವು ಸೌದಿ ಪ್ರೋ ಲೀಗ್‌ನಲ್ಲಿ ತನ್ನ ಪ್ರಾಬಲ್ಯವನ್ನು ಕಾಯ್ದುಕೊಂಡಿದೆ.

“>

“>

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular