ಸಿಂದಗಿಯಲ್ಲಿ ಚಿನ್ನದಂಗಡಿಗೆ ದರೋಡೆಗೆ ಬಂದವರಿಂದ ಗುಂಡಿನ ದಾಳಿ

ವಿಜಯಪುರ: ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಗುಂಡಿನ ದಾಳಿ ನಡೆಸಲಾಗಿದೆ. ಜ್ಯುವೆಲರಿ ಶಾಪ್ ನಲ್ಲಿ ದರೋಡೆಗೆ ಬಂದಿದ್ದವರು ಫೈರಿಂಗ್ ಮಾಡಿದ್ದಾರೆ.

ಸಿಂದಗಿಯ ಅಶೋಕ ಚೌಕ ಬಳಿಯ ಜ್ಯುವೆಲರಿ ಶಾಪ್ ನಲ್ಲಿ ಘಟನೆ ನಡೆದಿದೆ. ಪಲ್ಸರ್ ಬೈಕ್ ನಲ್ಲಿ ಬಂದಿದ್ದವರ ಪೈಕಿ ಓರ್ವನಿಂದ ಗುಂಡಿನ ದಾಳಿ ನಡೆದಿದೆ. ಸ್ಥಳೀಯರು ಬೈಕ್ ಸಮೇತ ದರೋಡೆಕೋರರಿಬ್ಬರನ್ನು ಹಿಡಿದಿದ್ದಾರೆ.

ಗುಂಡಿನ ದಾಳಿಯ ಶಬ್ದ ಕೇಳಿ ಸ್ಥಳೀಯರು ಕೂಡಲೇ ಜಮಾಯಿಸಿದ್ದಾರೆ. ಸ್ಥಳದಿಂದ ಮೂವರು ದರೋಡೆಕೋರರು ಪರಾರಿಯಾಗಿದ್ದಾರೆ. ಒಂದು ಪಿಸ್ತೂಲ್, ಮೂರು ಜೀವಂತ ಗುಂಡು, ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ತಾವು ಪುಣೆ ಮೂಲದವರು ಎಂದು ದರೋಡೆಕೋರರು ಪೊಲೀಸರಿಗೆ ಹೇಳಿದ್ದಾರೆ. ನಂಬರ್ ಪ್ಲೇಟ್ ಇಲ್ಲದ ಬೈಕ್ ನಲ್ಲಿ ಇವರು ಬಂದಿದ್ದರು. ಹಂಚಿನಾಳ ಎಂಬುವವರಿಗೆ ಸೇರಿದ ಧನಲಕ್ಷ್ಮಿ ಜುವೆಲರಿ ಶಾಪ್ ನಲ್ಲಿ ದರೋಡೆ ನಡೆಸಲು ಮುಂದಾಗಿದ್ದರು. ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read